English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | ಸಣ್ಣಗಾತ್ರದ ಮರಗಳಾದ ಈ ಪ್ರಬೇಧ 8ಮೀ ಎತ್ತರದವರೆಗೆ ಬೆಳೆಯುತ್ತದೆ. |
| ಜಿನುಗು ದ್ರವ : | |
| ಎಲೆಗಳು : | ಎಲೆಗಳು ಹಸ್ತರೂಪಿ ಸಂಯುಕ್ತ ಮಾದರಿಯಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಉಬ್ಬಿದ ಬುಡವನ್ನೊಳಗೊಂಡಿರುತ್ತದೆ. ಕಾವಿನೆಲೆ ಎಲೆತೊಟ್ಟಿಗೆ ಅಂಟಿಕೊಂಡಿರುತ್ತದೆ. ಕಿರು ಎಲೆ ತೊಟ್ಟುಗಳು 1.3ರಿಂದ2.5ಸೆಂಮಿ. ಉದ್ದವಿರುತ್ತವೆ. ಕಿರು ಎಲೆಗಳು ಸಂಖ್ಯೆ 6, ಪತ್ರಗಳು 9 ರಿಂದ 14ಸೆಂ.ಮೀ. ಉದ್ದ, 4 ರಿಂದ 5.5ಸೆಂ.ಮೀ. ಅಗಲವಿದ್ದು ಭರ್ಜಿ ಅಥವಾ ಚತುರಸ್ರ-ಭರ್ಜಿಯಾಕಾರದಲ್ಲಿದ್ದು ಕ್ರಮೇಣ ಚೂಪು ಮಾದರಿಯ ತುದಿ, ಚೂಪಾದ ಅಥವಾ ಅಸಮರೂಪಿ ಬುಡ ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತದೆ. ಎರಡನೇ ಹಾಗೂ ದರ್ಜೆಯ ನಾಳಗಳು 8 ರಿಂದ 12 ಜೋಡಿ ಸಂಖ್ಯೆಯಲ್ಲಿದ್ದು ಕುಣಿಕೆಗೊಂಡಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದವು. |
| ಪುಷ್ಪಮಂಜರಿ/ಹೂಗಳು : | ಪುಷ್ಪಮಂಜರಿ ಪಾರ್ಶ್ವ ಭಾಗದಲ್ಲಿರುವಂತಹವು; ಹೂಗಳನ್ನೊಳಗೊಂಡ ಪಿಠಛತ್ರ ಮಂಜರಿಗಳು 1.3ಸೆಂ.ಮೀ. ವ್ಯಾಸವನ್ನು ಹೊಂದಿದ್ದು ಕವಲೊಡೆದ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿ ಜೋಡನೆಯಾಗಿರುತ್ತವೆ. |
| ಕಾಯಿ /ಬೀಜ : | ಕಾಯಿಗಳು ಡ್ರೂಪ್ ಮಾದರಿಯವು; ಬೀಜಗಳು ಅದುಮಿದಂತಿರುತ್ತವೆ. |