ಪೊಪೊವಿಯ ಬೆಡ್ಡೋಮಿಯಾನ J. Hk. & Thoms. - ಅನೋನೇಸಿ

Synonym : ಪೊಪೊವಿಯ ರ್ಯಾಮೊಸಿಸ್ಸಿಮ Bedd.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಪೊದೆಗಳು ಮತ್ತು ಮರಗಳಾಗಿ ಕಂಡುಬರುವ ಪ್ರಭೇದ 10ಮೀ ಎತ್ತರದವರೆವಿಗೆ ಬೆಳೆಯುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಪರ್ಯಾಯವಾಗಿ ಎಡಬಲ ಮುರುವುಗಳನ್ನೊಳಗೊಂಡಿರುತ್ತವೆ. ಎಳೆಯ ಕೊಂಬೆಗಳು ಕಿಲುಬು ವರ್ಣದ ದಟ್ಟ ಮೃದು ತುಪ್ಪಳ ಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ. ಎಲೆತೊಟ್ಟು 0.1 ರಿಂದ 0.2 ಸೆಂ.ಮೀ. ಉದ್ದವಿದ್ದು, ಉಪ-ಗುಂಡಾಕಾರದಲ್ಲಿರುತ್ತವೆ. ಎಲೆಪತ್ರಗಳು 4 - 8 × 1.5 - 2.5ಸೆಂ.ಮೀ. ಉದ್ದವಿದ್ದು ಧೀರ್ಘ ಚತುರಸ್ರಾಕಾರ-ಭರ್ಜಿಯಾಕಾರ ಹೊಂದಿರುತ್ತವೆ; ಎಲೆ ತುದಿ ಚೂಪಾಗುವದರಿಂದ ಹಂತಹಂತವಾಗಿ ಕ್ರಮೇಣ ಚೂಪಾಗುವ ಮಾದರಿ ಹೊಂದಿದ್ದು ಎಲೆಬುಡ ಚೂಪಾಗುವುದರಿಂದ ಗುಂಡಾಕಾರದಲ್ಲಿರುತ್ತವೆ ಹಾಗೂ ಪತ್ರದ ತಳಭಾಗ ಕಣ ವಿನ್ಯಾಸ ಹೊಂದಿರುತ್ತದೆ. ಮಧ್ಯನಾಳ ಮತ್ತು ಎರಡನೇ ದರ್ಜೆಯ ನಾಳಗಳು ಪತ್ರದ ಮೇಲ್ಭಾಗದಲ್ಲಿ ಅಚ್ಚೊತ್ತಿದ ಹಾಗಿರುತ್ತವೆ ; ಎರಡನೇ ದರ್ಜೆಯ ನಾಳಗಳು 4 ರಿಂದ 6 ಜೋಡಿಗಳಿದ್ದು ಆರೋಹಣ ಮಾದರಿಯಲ್ಲಿರುತ್ತವೆ ; ತೃತೀಯ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಹೂಗಳು ಅಗ್ರ ಅಕ್ಷಾಕಂಕುಳಿನಲ್ಲಿ ಅಥವಾ ಎಲೆಗಳಿಗೆ ಅಭಿಮುಖಿಗಳಾಗಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಗುಂಡಾಕಾರ ಅಥವಾ ಅಂಡಾಕಾರದಲ್ಲಿದ್ದು ಏಕ ಬೀಜಿಯಾಗಿದ್ದು ಗುಚ್ಛಗಳಲ್ಲಿರುತ್ತವೆ.

ಜೀವಪರಿಸ್ಥಿತಿ :

ಸಮುದ್ರ ಮಟ್ಟದಿಂದ 700 ಮತ್ತು 1300ಮೀ ವರೆಗಿನ ನಿತ್ಯಹರಿದ್ವರ್ಣ ಕಾಡುಗಳ ಕೆಳಛಾವಣಿಯಲ್ಲಿ ಬೆಳೆಯುತ್ತವೆ.

ವ್ಯಾಪನೆ :

ದಕ್ಷಿಣ ಸಹ್ಯಾದ್ರಿಯ ಅಗಸ್ತ್ಯಮಲೆ ಬೆಟ್ಟಸಾಲಿನಲ್ಲಿ ಕಂಡುಬರುವ ಈ ಸಸ್ಯ ಪಶ್ಚಿಮ ಘಟ್ಟಗಳಿಗೆ ಸೀಮಿತ. .

ಸ್ಥಿತಿ :

ನಶಿಸುವ ಆತಂಕಕಾರಿ ಸ್ಥಿತಿ (IUCN, 2000)

ಗ್ರಂಥ ಸೂಚಿ :

Hooker, Fl. Brit. Ind. 1: 68. 1872; Gamble, Fl. Madras 1: 17. 1997 (re. ed); Sasidharan, Biodiversity documentation for Kerala- Flowering Plants, part 6: 20. 2004.

Top of the Page