ಪಾಲಿಸಿಯಾಸ್ ಅಕ್ಯುಮಿನೇಟ (Wt.) Seem. - ಅರಾಲಿಯೇಸಿ

Synonym : ಹೆಡೆರ ಅಕ್ಯುಮಿನೇಟ Wt.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8ಮೀ ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ರೋಮರಹಿತವಾಗಿರುತ್ತವೆ.
ಜಿನುಗು ದ್ರವ :
ಎಲೆಗಳು : ಎಲೆಗಳು ಸಂಯುಕ್ತ, ಗರಿರೂಪಿಯಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕಾವಿನೆಲೆ ಸಮೇತವಾಗಿರುತ್ತವೆ. ಕಿರುಪತ್ರಗಳು 8-11, ಪತ್ರಗಳು 7 ರಿಂದ 10 ಸೆಂ.ಮೀ. ಉದ್ದ, 3 ರಿಂದ 4 ಸೆಂ.ಮೀ. ಅಗಲವಿದ್ದು ಅಂಡ-ಚತುರಸ್ರಾಕಾರದಲ್ಲಿದ್ದು ಬಾಲರೂಪಿ-ಕ್ರಮೇಣ ಚೂಪಾಗುವ ತುದಿ ಹಾಗೂ ಗುಂಡಾದ ಮತ್ತು ಅಸಮವಾದ ಬುಡವನ್ನು ಹೊಂದಿರುತ್ತವೆ. ಅಂಚು ನಯವಾಗಿದ್ದು ಮೇಲ್ಮೈ ತೊಗಲನ್ನು ಹೋಲುತ್ತವೆ. ಎರಡನೇ ದರ್ಜೆಯ ನಾಳಗಳು ಅಂದಾಜು 10 ಜೋಡಿಗಳಿದ್ದು ತೆಳುವಾಗಿರುತ್ತವೆ. ತೃತೀಯ ದರ್ಜೆಯ ನಾಳಗಳು ವಿಶಾಲವಾದ ಜಾಲಬಂಧ ನಾಳವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಸಂಯುಕ್ತ ಪೀಠಛತ್ರ ಮಾದರಿಯವು; ಹೂಗಳು ಹಸಿರು ಬಣ್ಣದವು.
ಕಾಯಿ /ಬೀಜ : ಕಾಯಿಗಳು ಬೆರ್ರಿ ಮಾದರಿಯಲ್ಲಿದ್ದು ,5 ಕೋನಗಳನ್ನೊಳಗೊಂಡಿದ್ದು ಉಪದುಂಡಾಕಾರ ವಾಗಿರುತ್ತವೆ. ಪೈರೀನು ಗಳು 5 ರಿಂದ 8; ಬೀಜಗಳು ಸಂಕುಚಿತವಾಗಿರುತ್ತವೆ.

ಜೀವಪರಿಸ್ಥಿತಿ :

1500 ರಿಂದ 1800ಮೀ ಎತ್ತರದ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಅಪರೂಪವಾಗಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಭಾರತ, ಚೀನಾ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ನೀಲಗಿರಿ, ಅಣ್ಣಾಮಲೈ ಮತ್ತು ಅಗಸ್ತ್ಯಮಲೈ ಗಿರಿಶ್ರೇಣಿಗಳಲ್ಲಿ ಈ ಪ್ರಬೇಧ ಬೆಳೆಯುತ್ತವೆ.

ಗ್ರಂಥ ಸೂಚಿ :

J. Bot. London 3: 181.1865; Gamble, Fl. Madras 1: 568.1997 (re.ed); Sasidharan, Biodiversity documentation for Kerala- Flowering Plants, part 6: 206. 2004.

Top of the Page