English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ
| ಪ್ರಕೃತಿ : | 5ಮೀ ಎತ್ತರದವರೆವಿಗೆ ಬೆಳೆಯುವ ಸಣ್ಣ ಮರಗಳು ಅಥವಾ ಪೊದೆಗಳು. |
| ಜಿನುಗು ದ್ರವ : | ಸಸ್ಯಕ್ಷೀರ ಹಾಲಿನ ಶ್ವೇತಬಣ್ಣ ಹೊಂದಿರುತ್ತದೆ. |
| ಎಲೆಗಳು : | ಎಲೆಗಳು ಸರಳ ಮತ್ತು ಅಭಿಮುಖಿಗಳಾಗಿದ್ದು, ಜೋಡಿಗಳು ಅಸಮ ಹಾಗೂ ಕತ್ತರಿಯಾಕಾರದ ಜೋಡನಾ ವ್ಯವಸ್ಥೆಯಲ್ಲಿರುತ್ತವೆ. ಎಲೆತೊಟ್ಟು 1ಸೆಂ.ಮೀ ಉದ್ದವಿದ್ದು ಬುಡದಲ್ಲಿ ಚಿಕ್ಕದಾದ ಅಪ್ಪು ಒರೆಗಳನ್ನು ಹೊಂದಿರುತ್ತದೆ; ಪತ್ರಗಳು 6.5 - 12 x 2.4 - 4.5ಸೆಂ.ಮೀ. ಗಾತ್ರದಲ್ಲಿದ್ದು, ಅಂಡವೃತ್ತ ಅಥವಾ ಅಂಡವೃತ್ತ ಭರ್ಜಿಯಾಕಾರ ಹೊಂದಿರುತ್ತವೆ. ಎಲೆತುದಿ ಬಾಲರೂಪಿ-ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು 2 ಸೆಂ.ಮೀ. ವರೆಗಿನ ಉದ್ದದ ಅಗ್ರವನ್ನು ಹೊಂದಿರುತ್ತದೆ. ಎಲೆಬುಡ ಚೂಪಾಗಿರುತ್ತದೆ, ಪತ್ರವು ರೋಮರಹಿತವಾಗಿರುತ್ತದೆ. ಹಾಗೂ ತಳಭಾಗದಲ್ಲಿ ಮಬ್ಬಾದ ಬಣ್ಣವನ್ನು ಹೊಂದಿರುತ್ತದೆ; ಮಧ್ಯನಾಳಗಳು ಪತ್ರದ ಮೇಲ್ಭಾಗದಲ್ಲಿ ಉಬ್ಬಿಕೊಂಡಿರುತ್ತವೆ; ಎರಡನೇ ದರ್ಜೆಯ ನಾಳಗಳು 7-9 ಜೋಡಿಗಳಿದ್ದು ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ. |
| ಪುಷ್ಪಮಂಜರಿ/ಹೂಗಳು : | ಹೂಗಳು ದ್ವಿಲಿಂಗಿಗಳು ಹಾಗೂ ಶ್ವೇತ ವರ್ಣದವುಗಳಾಗಿದ್ದು ತುದಿಯಲ್ಲಿರುವ ಮಧ್ಯಾರಂಭಿ ನೀಳಛತ್ರ ಪುಷ್ಪಮಂಜರಿಯಲ್ಲಿರುತ್ತವೆ. |
| ಕಾಯಿ /ಬೀಜ : | ಕಾಯಿಗಳು ಫಾಲಿಕಲ್ ಪುಂಜಫಲ ಮಾದರಿಯವು. 4 x 1ಸೆಂ.ಮೀ. ಗಾತ್ರವನ್ನು ಹೊಂದುವ ಕಾಯಿಗಳು ಚತುರಸ್ರಾಕಾರದಲ್ಲಿದ್ದು ಬಾಲರೂಪಿ ಅಗ್ರವನ್ನು ಹೊಂದಿರುತ್ತವೆ ಹಾಗೂ ಹೆಚ್ಚಿನ ಸಂಖ್ಯೆಯ ಪತ್ರೆಯಿಂದ ಕೂಡಿದ ಬೀಜಗಳ ಸಮೇತವಿರುತ್ತವೆ. |