ಸಿಂಪ್ಲೊಕಾಸ್ ನಾಯರಿಯೈ Henry, Gopalan & Swamina. - ಸಿಂಪ್ಲೊಕೇಸಿ

:

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ.ಎತ್ತರದವರೆಗಿನ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕೋನಯುಕ್ತವಾಗಿದ್ದು ,ರೋಮರಹಿತವಾಗಿರುತ್ತವೆ
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು ಅಂದಾಜು 0.3 ಸೆಂ.ಮೀ. ಉದ್ದವಿದ್ದು,ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿದ್ದು, ರೋಮರಹಿತವಾಗಿರುತ್ತವೆ; ಪತ್ರಗಳು 7 – 10 X 4.5 – 5 ಸೆಂ.ಮೀ. ಗಾತ್ರ, ಅಂಡವೃತ್ತದಿಂದ ಬುಗುರಿವರೆಗಿನ ಆಕಾರ, ಚೂಪಲ್ಲದ ಮಾದರಿಯ ತುದಿ, ಉಪಹೃದಯದ ಆಕಾರ ಮತ್ತು ಅಸಮ್ಮಿತಿಯಾದ ಬುಡ, ಗರಗಸ ದಂತಿತವಾದ ಅಂಚು ಹೊಂದಿದ್ದು ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 8 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಂತರ ಹೊಂದಿದ್ದು ಓರೆಯಾಗಿ, ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿನಲ್ಲಿ ಒಂಟಿಯಾಗಿ ಅಥವಾ 1 ರಿಂದ 2 ಸೆಂ.ಮೀ. ಉದ್ದದ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ. ಹೂಗಳು ತೊಟ್ಟುರಹಿತ.
ಕಾಯಿ / ಬೀಜ : ಡ್ರೂಪ್ಗಳು ವರ್ತುಲ ಸ್ಥಂಭಾಕೃತಿ ಅಥವಾ ಅಂಡವೃತ್ತದ ಆಕಾರದಲ್ಲಿದ್ದು 1.1 ಸೆಂ.ಮೀ. ಉದ್ದವಿರುತ್ತವೆ.

ಜೀವಪರಿಸ್ಥಿತಿ :

1200 ಮತ್ತು 1400 ಮೀ. ನಡುವಿನ ಎತ್ತರದವರೆಗಿನ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಅಪರೂಪವಾಗಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಗಸ್ತ್ಯಮಲೈ ಪ್ರದೇಶದಲ್ಲಿ ವ್ಯಾಪಿಸಿದೆ.

ಸ್ಥಿತಿ :

ಉಳಿವಿನ ಆತಂಕಕಾರಿ ಸ್ಥಿತಿ(IUCN,2000)

ಗ್ರಂಥ ಸೂಚಿ :

JBNHS 81: 169. 1984; Nooteb., Rev. Symplocac. 229. 1975; Gamble, Fl. Madras 2: 783. 1993 (re.ed.); Sasidharan, Biodiversity documentation for Kerala- Flowering Plants, part 6: 274. 2004.

Top of the Page