English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | ಸಣ್ಣ ಮರಗಳು. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ |
| ಎಲೆಗಳು : | ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 0.4 –-1 ಸೆಂ.ಮೀ. ಉದ್ದವಿದ್ದು,ಅಡ್ಡ ಸೀಳಿದಾಗ ಕಾಲುವೆ ಗೆರೆ ಆಕಾರದಲ್ಲಿರುತ್ತವೆ,ರೋಮರಹಿತವಾಗಿರುತ್ತವೆ ; ಪತ್ರಗಳು 3 – 6 X 2 – 3.5 ಸೆಂ.ಮೀ. ಗಾತ್ರ, ಅಂಡವೃತ್ತದ ಆಕಾರ ಹೊಂದಿದ್ದು,ಚೂಪಾದುದರಿಂದ ಚೂಪಲ್ಲದವರೆಗಿನ ತುದಿ, ಒಳಬಾಗಿದ ಬುಡ ,ಗರಗಸ ದಂತಿತವಾದ ಹಿಂಸುರುಳಿಯಾಗಿರುವ ಅಂಚು, ತೊಗಲನ್ನು ಹೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 7 ಜೋಡಿಗಳಿದ್ದು ಅಂಚಿನ ಬಳಿ ಕುಣಿಕೆಗೊಂಡಿರುತ್ತವೆ;ಮೂರನೇ ದರ್ಜೆಯ ನಾಳಗಳು ಓರೆಯಾಗಿ ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ. |
| ಪುಷ್ಪಮಂಜರಿ / ಹೂಗಳು : | ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ,ಕಿರು ಗಾತ್ರದ ಮಧ್ಯಾಭಿಸರ ಮಾದರಿಯವುಗಳಾಗಿದ್ದು ಅಂದಾಜು 2.5 ಸೆಂ.ಮೀ. ಉದ್ದವಿರುತ್ತವೆ; ಹೂತೊಟ್ಟು 0.2 ಸೆಂ.ಮೀ. ಉದ್ದವಿರುತ್ತದೆ. |
| ಕಾಯಿ / ಬೀಜ : | ಡ್ರೂಪ್ಗಳು ಅಂಡದ ಆಕಾರದಲ್ಲಿರುತ್ತವೆ. |