English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 15 ಮೀ. ಎತ್ತರದವರೆಗಿನ ಸಣ್ಣ ಮರಗಳು. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ದುಂಡಾಗಿರುತ್ತವೆ, ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿದ್ದು ರೋಮರಹಿತವಾಗಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಪಾರ್ಶ್ವದಲ್ಲಿದ್ದು ಉದುರಿದ ನಂತರ ಗುರುತುಗಳನ್ನು ಉಳಿಸುತ್ತವೆ;ತೊಟ್ಟು ಅಂದಾಜು 3.5 ಸೆಂ.ಮೀ.ವರೆಗಿನ ಉದ್ದವಿದ್ದು,ಮೇಲ್ಭಾಗದಲ್ಲಿ ಸ್ವಲ್ಪಮಟ್ಟಿನ ಕಾಲುವೆಗೆರೆಯನ್ನು ಹೊಂದಿರುತ್ತದೆ ಮತ್ತು ರೋಮರಹಿತವಾಗಿರುತ್ತದೆ; ಪತ್ರಗಳು 8 -11X 3.8–4.8 ಸೆಂ.ಮೀ. ಗಾತ್ರ, ಅಂಡವೃತ್ತದಿಂದ ಅಂಡವೃತ್ತ-ಅಂಡದವರೆಗಿನ ಆಕಾರ ಹೊಂದಿದ್ದು,ಅಗ್ರದಲ್ಲಿ ಮೊನಚು ಮುಳ್ಳನ್ನು ಹೊಂದಿದ ಚೂಪಾದ ತುದಿ,ಚೂಪಾದುದರಿಂದ ದುಂಡಾದ ಬುಡ, ಗರಗಸ ದಂತಿತವಾದ ಅಂಚು, ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಸ್ವಲ್ಪ ಮಟ್ಟಿನ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 8 ರಿಂದ 14 ಜೋಡಿಗಳಿದ್ದು ತೆಳುವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದ ಮಾದರಿಯವು. |
| ಪುಷ್ಪಮಂಜರಿ / ಹೂಗಳು : | ಪುಷ್ಪಮಂಜರಿಗಳು ತುದಿಯಲ್ಲಿನ ನೀಳಛತ್ರ ಮಾದರಿಯಲ್ಲಿರುತ್ತವೆ;ಹೂಗಳು ಬಿಳಿ ಬಣ್ಣದವು; ತೊಟ್ಟುಗಳು 0.5 ಸೆಂ.ಮೀ. ಉದ್ದವಿರುತ್ತವೆ. |
| ಕಾಯಿ / ಬೀಜ : | ಡ್ರೂಪ್ಗಳು ಉಪ-ಗೋಳಾಕಾರದವು;ಬೀಜಗಳು 2 ರಿಂದ 4. |