ಓರೋಫಿಯಾ ಎರಿತ್ರೋಕಾರ್ಪ Bedd. - ಅನೋನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಪೊದೆಗಳು ಅಥವಾ 5ಮೀ ಎತ್ತರದ ಮೇಲೆ ಬೆಳೆಯುವ ಸಣ್ಣ ಮರಗಳು
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೀರಾದಟ್ಟವಾದ ಹಾಗೂ ಮೆತ್ತನೆಯ ಮೃದು ತುಪ್ಪಳವನ್ನು ಹೊಂದಿರುತ್ತವೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ. ಎಲೆತೊಟ್ಟು 0.2 ರಿಂದ 0.4 ಸೆಂ.ಮೀ. ಉದ್ದವಿರುತ್ತದೆ ಹಾಗೂ ಬಹುಮಟ್ಟಿಗೆ ದುಂಡಾಗಿದ್ದು ಮೃದು ತುಪ್ಪಳ ಸಹಿತವಾಗಿರುತ್ತದೆ. ಎಲೆ ಪತ್ರಗಳು ಇಕ್ಕಟ್ಟಾದ ಅಂಡವೃತ್ತದಿಂದ ಧೀರ್ಘ ಚತುರಸ್ರಾಕಾರವನ್ನು ಹೊಂದಿರುತ್ತವೆ. ತುದಿ ಕ್ರಮೇಣ ಚೂಪಾದ ಮಾದರಿಯಲ್ಲಿದ್ದು ಅಗ್ರಭಾಗ ಮೊಂಡಾಗಿರುತ್ತವೆ. ಸಾಮಾನ್ಯವಾಗಿ ಎಲೆಯ ಬುಡ ಚೂಪಾಗಿದ್ದು ಕೆಲವು ವೇಳೆ ಗುಂಡಾಗಿರುತ್ತದೆ. ಎಲೆಯ ಅಂಚು ನಯ, ಎಳೆಯ ಎಲೆಗಳ ಎರಡೂ ಬದಿ ಬಿರುಸಾದ ರೋಮ ಸಹಿತವಿದ್ದು, ಒಲಿತ ಎಲೆಗಳ ತಳಭಾಗ ವಿರಳವಾದ ಬಿರುಸು ರೋಮಗಳಿಂದ ಕೂಡಿರುತ್ತವೆ. ಎರಡನೇ ದರ್ಜೆಯ ನಾಳಗಳು 6 ರಿಂದ 9 ಜೋಡಿಗಳಿದ್ದು ಪ್ರಮುಖವಾಗಿ ಹಾಗೂ ಓರೆಯಾಗಿರುತ್ತವೆ. ಮೂರನೇ ದರ್ಜೆಯ ನಾಳಗಳು ಕಡಿಮೆ ಅಂತರವುಳ್ಳದ್ದಾಗಿದ್ದು ಎಲೆದಿಂಡಿಗೆ ಕೂಡುವಂತಹವು.
ಪುಷ್ಪಮಂಜರಿ/ಹೂಗಳು : ಅಕ್ಷಾಕಂಕುಳಿನಲ್ಲಿ ಅಥವಾ ಅಗ್ರ ಅಕ್ಷಾಕಂಕುಳಿನಲ್ಲಿ 3 ರಿಂದ 4 ಹೂಗಳಿರುತ್ತವೆ. ಹೂ ತೊಟ್ಟು 1 - 2 ಸೆಂ.ಮೀ. ಉದ್ದವಿದ್ದು ಮೃದು ತುಪ್ಪಳ ಸಮೇತವಾಗಿರುತ್ತದೆ.
ಕಾಯಿ /ಬೀಜ : ಬೆರ್ರಿಗಳು ಒಂದು ಬೀಜವುನ್ನೊಳಗೊಂಡಿದ್ದು ಸಾಮೂಹಿಕವಾಗಿರುತ್ತವೆ. ಬೆರ್ರಿಯ ದೀರ್ಘ ಚತುರಸ್ರಾಕಾರದಲ್ಲಿದ್ದು ಕೆಂಪುಬಣ್ಣವುಳ್ಳದ್ದಾಗಿದ್ದು ಕುಳಿಗಳನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

ಕೆಳಛಾವಣಿಯ ಮರಗಳಾಗಿ ಸಮುದ್ರ ಮಟ್ಟದಿಂದ 800ಮೀ ಎತ್ತರ ಪ್ರದೇಶಗಳ ನಿತ್ಯ ಹರಿದ್ವರ್ಣಕಾಡುಗಳಲ್ಲಿ ಈ ಪ್ರಭೇಧ ಬೆಳೆಯುತ್ತವೆ.

ವ್ಯಾಪನೆ :

ದಕ್ಷಿಣ ಸಹ್ಯಾದ್ರಿ ಮತ್ತು ಕೊಡಗಿನ ಪ್ರದೇಶಗಳಲ್ಲಿ ಅಪರೂಪವಾಗಿ ಕಂಡುಬರುವ ಈ ಪ್ರಭೇದ ಪಶ್ಚಿಮಘಟ್ಟಗಳಿಗೆ ಸೀಮಿತ.

ಗ್ರಂಥ ಸೂಚಿ :

Trans. Linn. Soc. Lond. 20: 5.1846; Gamble, Fl. Madras 1: 24.1997 (re.ed); Sasidharan, Biodiversity documentation for Kerala- Flowering Plants, part 6: 19. 2004.

Top of the Page