ಮ್ಯಾಸ್ಟಿಕ್ಸಿಯ ಆ ರ್ಬೋರಿಯ (Wt.) Bedd. ssp. ಆರ್ಬೋರಿಯ - ಕಾರ್ನೇಸಿ

Synonym : ಬರ್ಸಿನೋಪೆಟಾಲಂ ಆರ್ಬೋರಿಯಂ Wt.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣ ಹೊಂದಿದ್ದು ಸೂಕ್ಷ್ಮ ವಾಯುವಿನಿಮಯ ಬೆಂಡು ರಂಧ್ರ ಸಮೇತವಾಗಿರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪ- ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಜಿನುಗು ದ್ರವ ಅಂಟು ರೂಪದಲ್ಲಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ತೊಟ್ಟುಗಳು1-4 ಸೆಂ.ಮೀ. ಕಾಲುವೆ ಗೆರೆಯನ್ನು ಹೊಂದಿ ರೋಮರಹಿತವಾಗಿರುತ್ತವೆ; ಪತ್ರಗಳು 6.5 - 16 X 2 - 10 ಸೆಂ.ಮೀ. ಗಾತ್ರ ಹೊಂದಿದ್ದು ಅಂಡವೃತ್ತ ಅಥವಾ ಬುಗುರಿಯಾಕಾರದಲ್ಲಿದ್ದು ಮೊಂಡಾದ ಅಗ್ರವುಳ್ಳ ಬಾಲರೂಪಿ- ಕ್ರಮೇಣ ಚೂಪಾಗುವ ಮಾದರಿಯ ತುದಿ (ಅಗ್ರ 0.8 ರಿಂದ 1.8 ಸೆಂ.ಮೀ)ಬೆಣೆಯಾಕಾರದಿಂದ ಹಿಡಿದು ಒಳಬಾಗಿದ ಬುಡವನ್ನು ಹೊಂದಿರುತ್ತವೆ;ಎಲೆಯಂಚು ನಯವಾಗಿ ಅಥವಾ ಒಣಗಿದಾಗ ಹಿಂಸುರುಳಿಯನ್ನು ಹೊಂದಿರುತ್ತದೆ, ಪತ್ರದ ಮೇಲ್ಭಾಗ ಹಸುರಾಗಿದ್ದು ತಳಭಾಗ ಮಂದವಾದ ಬಣ್ಣವನ್ನು ಹೊಂದಿರುತ್ತದೆ ಹಾಗೂ ರೋಮರಹಿತವಾಗಿರುತ್ತದೆ; ಪತ್ರದ ಮೇಲ್ಭಾಗದಲ್ಲಿ ಮಧ್ಯನಾಳ ಕಾಲುವೆಗೆರೆ ಸಮೇತವಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 4 ರಿಂದ 8 ಜೋಡಿಗಳಿದ್ದು ಕ್ರಮೇಣವಾಗಿ ಬಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಬಹುತೇಕವಾಗಿ ಕಡಿಮೆ ಅಂತರವುಳ್ಳ, ಲಂಬರೇಖೆಗೆ ಸಮಕೋನದಲ್ಲಿದ್ದುಲೆದಿಂಡಿಗೆ ಅಡ್ಡವಾಗಿ ಕೂಡುವಂತಹವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ತುದಿಯಲ್ಲಿರುವ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯಲ್ಲಿದ್ದು 1.8 -3.8 X 2 ಸೆಂ.ಮೀ ಗಾತ್ರ ಹೊಂದಿದ್ದು ಅಂಡವೃತ್ತಾಕಾರ ಹೊಂದಿರುತ್ತವೆ, ತುದಿಯಲ್ಲಿ ಪುಷ್ಪಪಾತ್ರೆಯ ಎಸಳುಗಳು ಉದುರಿದನಂತರವಾಗುವ ಗುರುತುಗಳಿರುತ್ತವೆ; ಬೀಜಗಳ ಸಂಖ್ಯೆ ಒಂದು.

ಜೀವಪರಿಸ್ಥಿತಿ :

1900 ಮೀ.ಎತ್ತರದವರೆಗಿನ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯಸಹ್ಯಾದ್ರಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ಗ್ರಂಥ ಸೂಚಿ :

Beddome, Fl. Sylv. 216.1872;Gamble,Fl.Madras 1:573.1997(re.ed.); Sasidharan, Biodiversity documentation for Kerala- Flowering Plants, part 6:208.2004; Saldanha, Fl.Karnataka 2;64.1996

Top of the Page