ಲಿಟ್ಸಿಯ ಒಲೆಯಾಯ್ಡೆಸ್ (Meisner) J.Hk. - ಲಾರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ಕಂದು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪ-ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿ ಇರುತ್ತವೆ;ತೊಟ್ಟುಗಳು 2-3.5 ಸೆಂ.ಮೀ. ಉದ್ದ ಹೊಂದಿದ್ದು ದೃಢವಾಗಿದ್ದು ಕಾಲುವೆ ಗೆರೆ ಸಮೇತವಿರುತ್ತವೆ ಹಾಗೂರೋಮರಹಿತವಾಗಿರುತ್ತವೆ; ಪತ್ರಗಳು 13.5-18 X 6-9.5 ಸೆಂ.ಮೀ.ವರೆಗಿನ ಗಾತ್ರ ಹೊಂದಿದ್ದು ಅಂಡವೃತ್ತದಿಂದ ಅಂಡವೃತ್ತ-ಬುಗುರಿವರೆಗಿನ ಆಕಾರ ಹೊಂದಿರುತ್ತವೆ ;ತುದಿ ಚೂಪು ಅಥವಾ ಚೂಪಲ್ಲದ ಮಾದರಿಯಲ್ಲಿರುತ್ತದೆ ಮತ್ತು ಬುಡ ದುಂಡು-ಒಳಬಾಗಿದ ರೀತಿಯಲ್ಲಿರುತ್ತದೆ; ಅಂಚು ನಯವಾಗಿರುತ್ತದೆ; ಪತ್ರಗಳು ರೋಮರಹಿತವಾಗಿದ್ದು ತಳಭಾಗದಲ್ಲಿ ಮಾಸಿದ ಬೂದು ಹಸಿರು ಬಣ್ಣ ಹೊಂದಿರುತ್ತದೆ; ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿರುತ್ತದೆ; ಮಧ್ಯ ನಾಳ ಪತ್ರ ಕೊಂಚ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 8 ಜೋಡಿಗಳಿದ್ದು ಪ್ರಮುಖವಾಗಿರುವುದಿಲ್ಲ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ;ನ್ನತ ದರ್ಜೆಯ ನಾಳಗಳು ತೀರಾ ಸನಿಹದಲ್ಲಿದ್ದು ಜಾಲಬಂಧ ನಾಳ ವಿನ್ಯಾಸ ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿರುವ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿ ಕುಗ್ಗಿದ ಗೋಳಾಕಾರದಲ್ಲಿದ್ದು 2 ಸೆಂ.ಮೀ. ಉದ್ದವಿರುತ್ತದೆ ಹಾಗೂ ಕಿರಿದಾದ ಚಪ್ಪಟೆಯಾದ ಪುಷ್ಪಾವರಣದ ಬಟ್ಟಲಿನ ಮೇಲೆ ಆಸಿನವಾಗಿರುತ್ತದೆ ಮತ್ತು ಒಂದು ಬೀಜವನ್ನು ಒಳಗೊಂಡಿರುತ್ತದೆ.

ಜೀವಪರಿಸ್ಥಿತಿ :

400 1400 ಮೀ. ನಡುವಿನ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Hooker, Fl. Brit. India 5: 175.1886; Gamble,Fl. Madras 2:1236.1993(rep.ed.); Sasidharan, Biodiversity documentation for Kerala Flowering Plants, part 6: 399. 2004

Top of the Page