ಐಸೊನಾಂಡ್ರ ಪೆರ್ರೋಟ್ಟೆಟಿಯಾನ A. DC - ಸಪೋಟೇಸಿ

ಪರ್ಯಾಯ ನಾಮ : ಐಸೊನಾಂಡ್ರ ಕ್ಯಾಂಡೋಲಿಯಾನ Wt.

Vernacular names : Tamil: ಕರಿಂಪಲ,ವಲುಕ್ಕನು

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಕಂದು ಬಣ್ಣದಲ್ಲಿದ್ದು ಅನಿಯತವಾಗಿ ಚಕ್ಕೆಯೇಳುವ ಮಾದರಿಯಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ದೃಢವಾಗಿರುತ್ತವೆ ಹಾಗೂ ಎಳೆಯದಾಗಿದ್ದಾಗ ಕೆಂಗಂದು ಬಣ್ಣದ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟು 0.7 – 1.5 ಸೆಂ.ಮೀ.ವರೆಗಿನ ಉದ್ದವಿದ್ದು,ಸ್ವಲ್ಪ ಮಟ್ಟಿಗೆ ಕಾಲುವೆಗೆರೆಯನ್ನು ಹೊಂದಿದ್ದು ಎಳೆಯದಾಗಿದ್ದಾಗ ಮೃದುತುಪ್ಪಳ ಸಹಿತವಿರುತ್ತದೆ; ಪತ್ರಗಳು 4 -11 X 1.5 – 5 ಸೆಂ.ಮೀ. ಗಾತ್ರ,ಅಂಡವೃತ್ತದ ಆಕಾರ ಹೊಂದಿದ್ದು,ಚೂಪಾದುದರಿಂದ ಚೂಪಲ್ಲದ ಮಾದರಿವರೆಗಿನ ತುದಿ,ಬೆಣೆಯಾಕಾರದವರೆಗಿನ ಬುಡ, ತರಂಗಿತವಾದ ಮತ್ತು ಹಿಂಸುರುಳಿಗೊಂಡ ಅಂಚು,ತೆಳು ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತ -ವಾಗಿರುತ್ತವೆ ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ತೆಳುವಾಗಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 6 – 10 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಓರೆಯಾಗಿದ್ದು,ಕಡಿಮೆ ಅಂತರ ಹೊಂದಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಗುಚ್ಛಗಳ ಮಾದರಿಯವು;ಹೂಗಳು ಬಿಳಿ ಬಣ್ಣ ಹೊಂದಿದ್ದು ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಬೆರ್ರಿ ಬುಗುರಿ ರೀತಿಯ ಆಕಾರ ಹೊಂದಿರುತ್ತದೆ;ಬೀಜದ ಸಂಖ್ಯೆ 1.

ಜೀವಪರಿಸ್ಥಿತಿ :

1300 ಮತ್ತು 2000 ಮೀ. ನಡುವಿನ ಮಧ್ಯಮ ಮತ್ತುಅತಿಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ನೈರುತ್ಯ ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಬೇಧ ಅಗಸ್ತ್ಯಮಲೈ, ಅಣ್ಣಾಮಲೈ, ಪಳನಿ,ನೀಲಗಿರಿ,ವಯನಾಡು ಮತ್ತು ಕೊಡಗು ಪ್ರದೇಶಗಳಲ್ಲಿ ಈ ಪ್ರಬೇಧ ವ್ಯಾಪಿಸಿದೆ.

ಗ್ರಂಥ ಸೂಚಿ :

DC, Prodr. 8: 188. 1844; Gamble, Fl. Madras 2: 761. 1993 (re.ed.); Sasidharan, Biodiversity documentation for Kerala- Flowering Plants, part 6: 267. 2004; Saldanha, Fl. Karnataka 1: 328.1984; Cooke, Fl. Bombay 2: 91.1908; Almeida, Fl. Maharashtra 3:166. 2001.

Top of the Page