ಐಲೆಕ್ಸ್ ಡೆಂಟಿಕ್ಯುಲೇಟ Wall.ex Wight - ಅಕ್ವಿಫೋಲಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15ಮೀ ಎತ್ತರದವರೆಗೆ ಬೆಳೆಯುವ ನಿತ್ಯಹರಿದ್ವರ್ಣ ಮಾದರಿಯ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾದ ಮೇಲ್ಮೈ, ಬೂದು ಬಣ್ಣ ಹೊಂದಿದ್ದು ಕಚ್ಚು ಮಾಡಿದ ಸ್ಥಳ ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿ ರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಗುಂಡಾಕೃತಿಯನ್ನು ಹೊಂದಿದ್ದು, ರೋಮರಹಿತವಾಗಿರುತ್ತವೆ ಹಾಗೂ ಕೆಲವು ವೇಳೆ ಕೆನ್ನೀಲಿ ಛಾಯೆಯನ್ನು ಹೊಂದಿರುತ್ತದೆ.
ಜಿನುಗು ದ್ರವ :
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ. ಎಲೆತೊಟ್ಟುಗಳು 1 ರಿಂದ 1.3 ಸೆಂ.ಮೀ. ಉದ್ದವಿದ್ದು ಕಾಲುವೆ ಗೆರೆಗಳನ್ನು ಹೊಂದಿರುತ್ತವೆ. ಎಲೆಪತ್ರ 5 ರಿಂದ 10ಸೆಂ.ಮೀ. ಉದ್ದ ಹಾಗೂ 2.5 ರಿಂದ 3ಸೆಂ.ಮೀ. ಅಗಲ ಹೊಂದಿದ್ದು, ಅಂಡವೃತ್ತ ಅಥವಾ ಚತುರಸ್ರಾಕಾರದಲ್ಲಿದ್ದು ಚೂಪಾದ ತುದಿ, ಗುಂಡಾದ ಮತ್ತು ಬೆಣೆಯಾಕಾರದ ಬುಡ, ಗರಗಸದಂತಿತವಾದ ಅಂಚು, ತೊಗಲನ್ನೋಲುವ ಮೇಲ್ಮೈಯನ್ನು ಹೊಂದಿರುತ್ತದೆ. ಮಧ್ಯನಾಳ ಕಾಲುವೆಗೆರೆ ಸಮೇತವಿರುತ್ತದೆ. ಎರಡನೇ ದರ್ಜೆಯ ನಾಳಗಳು 6 ರಿಂದ 9 ಜೋಡಿಗಳಿದ್ದು ತೃತೀಯ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ಒಂದೇ ಸಸ್ಯದಲ್ಲಿ ಉಭಯಲಿಂಗಿಗಳಾಗಿ ಕಾಣಿಸಿ ಕೊಳ್ಳುವಂತಹವು; ಪುಲ್ಲಿಂಗ ಹೂಗಳು ಕಿರಿದಾದ ಪುಷ್ಪವೃಂತ ಹೊಂದಿದ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ ಹಾಗೂ ತೊಟ್ಟು ರಹಿತ ಅಥವಾ ಉಪ ತೊಟ್ಟು ಸಹಿತವಾಗಿರುತ್ತವೆ ಮತ್ತು ಬಂಜೆ ಅಂಡಾಶಯ ಮಂಡಲ ಸಮೇತವಾಗಿರುತ್ತವೆ. ಸ್ತ್ರೀಲಿಂಗ ಹೂಗಳು ಅಕ್ಷಾಕಂಕುಳಿನಲ್ಲಿ ಗುಜ್ಜಾಕಾರವಾಗಿರುತ್ತವೆ. ಹಾಗೂ ಬಂಜೆಕೇಸರಗಳ ಸಮೇತವಾಗಿರುತ್ತವೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯವು. ಆಕಾರದಲ್ಲಿ ದುಂಡಾಗಿದ್ದು, ಕೆಂಪು ವರ್ಣದಿಂದ ಕೆನ್ನೀಲಿ ವರ್ಣ ಹೊಂದಿರುತ್ತವೆ. ಕೋಣೆಗಳು 4, ಪ್ರತಿಯೊಂದು ಕೋಣೆ ಒಂದು ಬೀಜವನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

1600 ರಿಂದ 2500ಮೀ ಎತ್ತರದವರೆಗಿನ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಅಗ್ರ ಛಾವಣಿಯಲ್ಲಿ ಈ ಪ್ರಬೇಧ ಕಂಡುಬರುತ್ತವೆ.

ವ್ಯಾಪನೆ :

ಭಾರತ, ಚೀನಾ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದಲ್ಲಿ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Wight, Illust.2: t. 142. 1850; Gamble, Fl. Madras 1: 200.1997 (re.ed); Sasidharan, Biodiversity documentation for Kerala- Flowering Plants, part 6: 94. 2004; Saldanha, Fl. Karnataka 2: 102. 1996.

Top of the Page