ಹಂಬೋಲ್ಟ್ ಶಿಯ ಬೃನಾನಿಸ್ Wall. - ಸಿಸಾಲ್ಪಿನಿಯೇಸಿ

ಕನ್ನಡದ ಪ್ರಾದೇಶಿಕ ಹೆಸರು : ಹಾಸಿಗೆ ಮರ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ. ಎತ್ತರದವರೆಗೆ ಬೆಳೆಯುವ ಸಣ್ಣಗಾತ್ರದ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ; ಎಳೆಯ ಕಿರುಕೊಂಬೆಗಳು ಕೋನಯುಕ್ತವಾಗಿದ್ದು ರೋಮಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸಮಸಂಖ್ಯಾ ಗರಿರೂಪಿ ಸಂಯುಕ್ತ ಮಾದರಿಯಲ್ಲಿದ್ದು ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂಕಡೆ ಎದರು-ಬದರಿನ ಲಂಬ ಸಾಲಿನಲ್ಲಿರುತ್ತವೆ; ಕಾವಿನೆಲೆಗಳು ಜೋಡಿಯಾಗಿದ್ದು, ಭರ್ಜಿಯ ಆಕಾರದಲ್ಲಿದ್ದು ಬುಡದಲ್ಲಿ ಮೂತ್ರಕೋಶ ಆಕಾರದ, ಎಲೆ ಪತ್ರವನ್ನು ಹೋಲುವ ಉಪಾಂಗ ಸಮೇತವಾಗಿರುತ್ತವೆ; ಅಕ್ಷದಿಂಡು ಅಂದಾಜು 6 ಸೆ.ಮಿ. ಉದ್ದವಿದ್ದು, ಕೋನಯುಕ್ತವಾಗಿದ್ದು ಅಸ್ಪಷ್ಟ ರೆಕ್ಕೆ ಸಮೇತವಾಗಿರುತ್ತವೆ; ಕಿರು ಎಲೆಗಳು 2 ಜೋಡಿಗಳಿದ್ದು ಸೂಕ್ಷ್ಮವಾದ ತೊಟ್ಟು ಸಮೇತವಿರುತ್ತವೆ, ತೀರಾ ಕೆಳ ಪಂಕ್ತಿಯಲ್ಲಿನ ಜೋಡಿ ಕಿರು ಎಲೆಗಳು ಉಬ್ಬಿದ ಎಲೆಭಾಗದ ತುಸು ಮೇಲಿರುತ್ತದೆ, ಪತ್ರಗಳು 8 - 26 x 2 - 8.3 ಸೆ.ಮೀ. ಗಾತ್ರ ಹೊಂದಿರುತ್ತವೆ ಮತ್ತು ಇಕ್ಕಟ್ಟಾದ ಅಂಡವೃತ್ತಾಕೃತಿಯಿಂದ ಹಿಡಿದು ಬುಗುರಿ-ಭರ್ಜಿ ಸಮ್ಮಿಶ್ರಾಕಾರದವರೆಗಿನ ಆಕಾರವನ್ನು ಹೊಂದಿರುತ್ತಬೆ. ಪತ್ರದ ತುದಿ ಮೊಂಡವಾದ, ಕಮಾನು ರೀತಿಯ ತುದಿಯನ್ನು ಹೊಂದಿದ್ದು ಅಗ್ರಭಾಗದಲ್ಲಿ ಸೂಕ್ಷ್ಮವಾದ ಮೊನಚು ಮುಳ್ಳನ್ನು ಹೊಂದಿರುತ್ತದೆ; ಪತ್ರದ ಬುಡಭಾಗ ಅಸಮ್ಮಿಯಾಗಿರುತ್ತದೆ; ಪತ್ರಗಳು ಉಪತೊಗಲನ್ನೋಲುವಂತಿದ್ದು ರೋಮರಹಿತವಾಗಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಅಚ್ಚೊತ್ತಿದಂತಿರುತ್ತದೆ; ಎರಡನೇ ದರ್ಜೆಯ ನಾಳಗಳು ಧೃಢವಾಗಿದ್ದು ಅಂದಾಜು 10 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿರುವ ಮಧ್ಯಾಭಿಸರ ಪುಷ್ಪಮಂಜರಿ ಮಾದರಿಯವು; ಹೂಗಳು ಶ್ವೇತ ವರ್ಣದ ಪುಷ್ಪದಳಗಳನ್ನೂ ಗುಲಾಬಿ ಮಿಶ್ರಿತ ನಸುಗೆಂಪು ಬಣ್ಣದ ಪುಷ್ಪ ಪತ್ರಕಗಳನ್ನು ಹೊಂದಿರುತ್ತವೆ.
ಕಾಯಿ /ಬೀಜ : ಪಾಡುಗಳು 7x3 ಸೆ.ಮೀ.ವರೆಗಿನ ಗಾತ್ರ ಹೊಂದಿದ್ದು ಚಪ್ಪಟೆಯಾಗಿರುತ್ತದೆ ಹಾಗೂ ಒಣಗಿದಾಗ ತಿರುಚಿಕೊಂಡಿರುತ್ತವೆ; ಬೀಜಗಳು ಚಪ್ಪಟೆಯಾಗಿದ್ದು, ಗುಂಡಾಕಾರವಾಗಿರುತ್ತವೆ.

ಜೀವಪರಿಸ್ಥಿತಿ :

ಕಡಿಮೆ ಎತ್ತರದ (200 ರಿಂದ 800 ಮೀ.) ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಸಾಮಾನ್ಯವಾಗಿ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ - ಮಧ್ಯ ಸಹ್ಯಾದ್ರಿ ಪ್ರದೇಶದ ವಯನಾಡು ಮತ್ತು ಶೃಂಗೇರಿ ಪ್ರದೇಶಗಳು.

ಗ್ರಂಥ ಸೂಚಿ :

Pl. Asiat. Rar. 3:17. 233. 1832; Gamble, Fl. Madras 1:411. 1997 (re.ed); Sasidharan, Biodiversity documentation for Kerala - Flowering Plants, part 6:155. 2004; Saldanha, Fl. Karnataka 1:390. 1996; Keshava Murthy and Yoganarasimhan, Fl. Coorg (Kodagu) 171. 1990.

Top of the Page