ಹೋಲಿಗಾರ್ನ ನೈಗ್ರ Bourd. - ಅನಕಾರ್ಡಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 35 ಮೀ ಎತ್ತರದವರೆವಿಗೆ ಬೆಳೆಯುವ ಈ ದೊಡ್ಡ ಮರಗಳು ಸಾಮಾನ್ಯವಾಗಿ ಆನಿಕೆಗಳನ್ನು ಹೊಂದಿರುತ್ತವೆ.
ಕಾಂಡ ಮತ್ತು ತೊಗಟೆ : ತೊಗಟೆಯು ಸೀಳಿಕಾ ವಿನ್ಯಾಸದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಒರಟು ,ಬಲಿಷ್ಟಹಾಗೂ ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಸಸ್ಯಕ್ಷೀರ ಕಪ್ಪುಬಣ್ಣವುಳ್ಳದಾಗಿರುತ್ತದೆ
ಎಲೆಗಳು : ಎಲೆಗಳು ಸರಳ, ಪರ್ಯಾಯ – ಸುತ್ತು ಜೋಡನಾ ವ್ಯವಸ್ಥೆಯಲ್ಲಿ ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ಎಲೆತೊಟ್ಟು1ರಿಂದ 2 ಸೆಂ.ಮೀ. ಉದ್ದವಾಗಿದ್ದು ಅಡ್ದ ಸೀಳಿದಾಗ ಸಪಾಟ ಪೀನ ಮಧ್ಯ ಆಕಾರದಲ್ಲಿ ಕಂಡುಬರುತ್ತದೆ.ಚಾಚುಚೀಲಗಳು ಒಂದು ಜೋಡಿಯಿದ್ದು ಕ್ರಮೇಣ ಉದುರಿಹೋಗುವಂತಹವು; ಎಲೆ ಪತ್ರ 6.5 – 16 x 3-5 ಸೆಂ.ಮೀ. ಗಾತ್ರವನ್ನು ಹೊಂದಿರುತ್ತದೆ ಎಲೆಗಳ ಆಕಾರ, ಬುಗುರಿ-ಈಟಿ ಸಮ್ಮಿಶ್ರಾಕಾರದಿಂದ ಕಡಿಮೆ ಅಗಲವುಳ್ಳ ಬುಗುರಿಯಾಕಾರದವುಗಳಾಗಿರುತ್ತವೆ.ಎಲೆತುದಿ ಗುಂಡಾಕಾರ ಅಥವಾ ಕೆಲವು ವೇಳೆ ಧೀರ್ಘ- ಕಚ್ಚುಳ್ಳದ್ದಾಗಿರುತ್ತದೆ . ಎಲೆ ಬುಡ ಬೆಣೆಯಾಕಾರದಿಂದ ಕಾಂಡದವರೆವಿಗೂ ವಿಸ್ತಾರಗೊಳ್ಳುವ ರೀತಿಯದ್ದಾಗಿರುತ್ತದೆ. ಅಂಚು ನಯವಾಗಿದ್ದು ಕೆಲವು ವೇಳೆ ಒಣಗಿದಾಗ ಹಿಂಸುರುಳಿಗೊಳ್ಳುತ್ತದೆ,ಮೇಲ್ಮೈ ತೊಗಲಿನ ತರಹವಿದ್ದು ರೋಮರಹಿತವಾಗಿರುತ್ತದೆ; ಮಧ್ಯನಾಳ ಪತ್ರದ ಮೇಲ್ಬಾಗದಲ್ಲಿ ಚಪ್ಪಟೆ ಅಥವಾ ಮೇಲೆದ್ದಿರುತ್ತದೆ; ಪತ್ರದಲ್ಲಿ ಸುಮಾರು 6 ರಿಂದ 11 ಜೋಡಿ ಎರಡನೇ ದರ್ಜೆ ನಾಳಗಳಿದ್ದು ಮೂರನೇ ದರ್ಜೆ ನಾಳಗಳು ಜಾಲಬಂಧ ವಿನ್ಯಾಸ ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಅಗ್ರಸ್ಥಾನದಲ್ಲಿದ್ದು ಪುನರಾವೃತ್ತಿಯಾಗಿ ಕವಲೊಡೆದ ಮಧ್ಯಾಭಿಸರ ಮಾದರಿಯದಾಗಿದ್ದು, ಕಂದು ಮಿಶ್ರಿತ ಕಡು ಕೆನ್ನೀಲಿ ಬಣ್ಣ ಹಾಗೂ ದಟ್ಟ- ಮೃದುತುಪ್ಪಳವನ್ನು ಹೊಂದಿರುತ್ತದೆ ಹೂಗಳು ಸಂಕೀರ್ಣಲಿಂಗಿಗಳು; ದಳಗಳು ಅಂಡಾಕಾರದಲ್ಲಿದ್ದು ಒಳಭಾಗದಲ್ಲಿ ಮೃದುತುಪ್ಪಳವನ್ನು ಹೊಂದಿರುತ್ತದೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯವು ಮಾದರಿಯವು; ಆಕಾರದಲ್ಲಿ ಚತುರಸ್ರಾಕಾರದ ಅಂಡವೃತ್ತಾಕೃತಿಯಲ್ಲಿ ಇರುವ ಕಾಯಿಗಳು ಮೇಲ್ಮೈ ಯಲ್ಲಿ ಸಾಮನ್ಯವಾಗಿ ಒಣಗಿದ ಮೇಲೆ ಗೆರೆಯ ಗುರುತುಗಳನ್ನು ಹೊಂದಿರುತ್ತವೆ. ಕಾಯಿಗಳು ಒಂದು ಬೀಜವನ್ನು ಹೊಂದಿದ್ದು 3.8 x1.5ಸೆಂ.ಮೀ ಗಾತ್ರದ್ದಾಗಿರುತ್ತವೆ.

ಜೀವಪರಿಸ್ಥಿತಿ :

ಈ ಪ್ರಭೇಧವು ಕಡಿಮೆ ಅಥವಾ ಮಧ್ಯಮ ಎತ್ತರದ ಪ್ರದೇಶಗಳ( ಸಮುದ್ರ ಮಟ್ಟಕ್ಕಿಂತ 400ಮೀ. - 1200ಮೀ)ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ; ಅತಿಸಾಮಾನ್ಯವಾಗಿ ದಕ್ಷಿಣ ಸಹ್ಯಾದ್ರಿ ಪ್ರದೇಶದಲ್ಲಿ ಹಾಗೂ ಮಧ್ಯ ಸಹ್ಯಾದ್ರಿಯ ಪ್ರದೇಶಗಳಲ್ಲಿ ಅಪರೂಪವಾಗಿಯೂ ಕಾಣಸಿಗುತ್ತವೆ.

ಗ್ರಂಥ ಸೂಚಿ :

Ind. For. 30: 95. 1904; Gamble , Fl. Madras1:268.1997(re.ed.); Saldanha , Fl. Karnataka 2:205.1996; Sasidharan, Bidiversity documentation for Kerala-Flowering plants, part 6: 112.2004

Top of the Page