ಗಾಂಫಾಂಡ್ರ ಟೆಟ್ರ್ಯಾಂಡ್ರ (Wall.) Sleumer - ಐಕಾಸಿನೇಸಿ

Synonym : ಗಾಂಫಾಂಡ್ರ ಪಾಲಿಮಾರ್ಫ Wt. ಮತ್ತು ಲಾಸಿಯಾಂತೆರ ಟೆಟ್ರ್ಯಾಂಡ್ರ Wall. ex Roxb.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗಿನ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ಸೂಕ್ಷ್ಮ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಜೋಡನಾ ಮಾದರಿಯಲ್ಲಿರುತ್ತವೆ ಮತ್ತು ಕಾಂಡದ ಎರಡೂ ಕಡೆ ಎದುರು ಬದರಿನ ಸಾಲಿನಲ್ಲಿರುತ್ತವೆ;ತೊಟ್ಟುಗಳು 0.7 -1.2 ಸೆಂ.ಮೀ. ವರೆಗಿನ ಉದ್ದವಿದ್ದು ಕಾಲುವೆ ಗೆರೆ ಸಮೇತವಿರುತ್ತವೆ;ಪತ್ರಗಳು 8-15.5X1.5-6ಸೆಂ.ಮೀ.ಗಾತ್ರ ಹೊಂದಿದ್ದು ಚತುರಸ್ರದಿಂದ ಅಂಡವೃತ್ತ- ಚತುರಸ್ರದವರೆಗಿನಆಕಾರದಲ್ಲಿದ್ದು (ಆಕಾರದಲ್ಲಿ ವೈವಿಧ್ಯತೆ ಹೊಂದಿರುತ್ತವೆ), ಮೊಂಡಾದ ಸಂಕುಚಿತವಾದ ಹಾಗೂ ಕ್ರಮೇಣ ಚೂಪಾಗುವ ಮಾದರಿಯಿಂದ ಬಾಲರೂಪಿ- ಕ್ರಮೇಣ ಚೂಪಾಗುವ ರೀತಿಯವರೆಗಿನ ತುದಿ, ಚೂಪಾದುದರಿಂದ ಸ್ವಲ್ಪ ಮಟ್ಟಿಗೆ ದುಂಡಾದ ಬುಡ ಮತ್ತು ನಯವಾದ ಅಂಚನ್ನು ಹೊಂದಿರುತ್ತವೆ; ಮೇಲ್ಮೈ ಪೊರೆ ಯ ಮಾದರಿಯಿಂದ ತೊಗಲನ್ನೋಲುವ ಮಾದರಿಯಲಿದ್ದು ರೋಮರಹಿತವಾಗಿರುತ್ತದೆ;; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆ ಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 5-6 ಜೋಡಿಗಳಿದ್ದು ಕುಣಿಕೆಗೊಂಡಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿನ ಕಿರಿದಾದ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ ಹಾಗೂ ಬಿಳಿ ಬಣ್ಣ ಹೊಂದಿರುತ್ತವೆ.
ಕಾಯಿ /ಬೀಜ : ಡ್ರೂಪ್ಗಳು ವರ್ತುಲ ಸ್ಥಂಭಾಕೃತಿಯ ಅಂಡವೃತ್ತ ಆಕಾರದಲ್ಲಿರುತ್ತವೆ; ಬೀಜ 1.

ಜೀವಪರಿಸ್ಥಿತಿ :

600 ಮೀ. ಎತ್ತರದವರೆಗಿನ ಕಡಿಮೆ ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳ ಕಾಡುಗಳ ಒಳಛಾವಣಿಯಲ್ಲಿ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಡೋಮಲೇಶಿಯ ಮತ್ತು ಇಂಡೋಚೈನ;ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಪ್ರಭೇದ ಕಂಡು ಬರುತ್ತದೆ.

ಗ್ರಂಥ ಸೂಚಿ :

Notizbl. Bot. Gart. Berlin – Dahlem 15:238 1940 & Blumea 17:204.1969;;Gamble, Fl. Madras 1:195.1997 (Rep. Ed.);Sasidharan, Biodiversity documentation for Kerala- Flowering Plants, part 6 ,93. 2004;Saldanha, Fl. Karnataka 2:105. 1996.

Top of the Page