ಇಯೊನಿಮಸ್ ಇಂಡಿಕಸ್ Heyne ex Roxb. - ಸೆಲಾಸ್ಟ್ರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 7 ಮೀ ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು
ಕಾಂಡ ಮತ್ತು ತೊಗಟೆ : ತೊಗಟೆ ಬೆಂಡು ಮಾದರಿಯಲ್ಲಿದ್ದು ಗೀಚಿದಾಗ ಹಳದಿ ಬಣ್ಣ ಹೊಂದಿರುತ್ತದೆ; ಕಚ್ಚು ಮಾಡಿದ ಜಾಗ ಕೆಂಪು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪ-ದುಂಡಾಗಿದ್ದು ರೋಮ ರಹಿತವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ಮಾದರಿಯಲ್ಲಿರುತ್ತವೆ; ಕಾವಿನೆಲೆಗಳು ಉದುರಿ ಹೋಗುವಂತಹುಗಳು; ಎಲೆ ತೊಟ್ಟುಗಳು 0.3 ರಿಂದ 0.8 ಸೆಂಮೀ ಉದ್ದವಾಗಿದ್ದು, ಅಡ್ಡಸೀಳಿದಾಗ ಸಪಾಟ ಪೀನಮಧ್ಯ ಆಕಾರದಲ್ಲಿರುತ್ತದೆ ಹಾಗೂರೋಮರಹಿತ -ವಾಗಿರುತ್ತದೆ; ಎಲೆಪತ್ರಗಳು 5-11 x 2-4.3 ಸೆಂ.ಮೀ ಗಾತ್ರ , ಅಂಡವೃತ್ತ ಅಥವಾ ಸಂಕುಚಿತ ಅಂಡವೃತ್ತಾಕಾರ ಹೊಂದಿದ್ದು, ಮೊಂಡಾದ ಅಗ್ರವುಳ್ಳ ಕ್ರಮೇಣ ಚೂಪಾಗುವ ಮಾದರಿಯ, ಕೆಲವು ವೇಳೆ ಮೊಂಡು-ಚೂಪುಳ್ಳ ತುದಿಯನ್ನೂ, ಬೆಣೆಯಾಕಾರದ ಬುಡವನ್ನೂ ಹೊಂದಿರುತ್ತವೆ, ಎಲೆಗಳ ಅಂಚು ನಯವಾಗಿರುತ್ತದೆ, ಎಲೆಗಳು ರೋಮರಹಿತವಾಗಿದ್ದು ಮೇಲ್ಭಾಗದಲ್ಲಿ ಹೊಳಪು ಹಾಗೂ ಕಾಗದವನ್ನೋಲುವ ಅಥವಾ ಉಪ-ತೊಗಲನ್ನು ಹೋಲುವ ಮೇಲ್ಮೈ ಹೊಂದಿರುತ್ತದೆ;ಎರಡನೇ ದರ್ಜೆಯ ನಾಳಗಳು 4 ರಿಂದ 5 ಜೋಡಿಗಳಿದ್ದು 1ರಿಂದ 3 ಹೂಗಳನ್ನೊಳಗೊಂಡಿ ರುತ್ತವೆ; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿರುವ ಮಧ್ಯಾರಂಭಿ ಮಾದರಿಯಲ್ಲಿದ್ದು ದರಿಂದ ಮೂರು ಹೂಗಳನ್ನು ಹೊಂದಿರುತ್ತವೆ; ಹೂಗಳು ಕೆಂಪು;
ಕಾಯಿ /ಬೀಜ : ಸಂಪುಟ ಫಲಗಳ ಹಾಲೆಗಳು ತಲೆಕೆಳಗಾದ ಹೃದಯಾಕಾರವನ್ನು ಹೊಂದಿದ್ದು ಪ್ರತಿ ಕೋಶದಲ್ಲಿಒಂದರಿಂದ ಎರಡು ಬೀಜಗಳಿರುತ್ತವೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ ಒಳಛಾವಣಿಯ ಮರಗಳಾಗಿ ಕಡಿಮೆ ಎತ್ತರದ(200 ರಿಂದ 500 ಮೀ) ಪ್ರದೇಶಗಳ ತೇವಾಂಶವುಳ್ಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ಸಸ್ಯ ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಸಾಮಾನ್ಯವಾಗಿಯೂ, ದಕ್ಷಿಣ ಸಹ್ಯಾದ್ರಿಯಲ್ಲಿ ಅಪರೂಪವಾಗಿಯೂ ವ್ಯಾಪಿಸಿದೆ.

ಗ್ರಂಥ ಸೂಚಿ :

Roxb., Fl. Ind. 2:409.1824;Gamble, Fl.Madras 1: 202.1997(re.ed.); Sasidharan, Biodiversity documentation for Kerala- Flowering Plants, part 6: 96.2004; Saldanha, Fl. Karnataka 2: 95. 1996

Top of the Page