ಎಲೆಯೋಕಾರ್ಪಸ್ ವೆನುಸ್ಟಸ್ Bedd. - ಎಲೆಯೋಕಾರ್ಪೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ರಿಂದ 15 ಮೀ. ಎತ್ತರದ ಬೆಳೆಯುವ ಮರಗಳು
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣಹೊಂದಿದ್ದು ಸೀಳಿಕಾ ವಿನ್ಯಾಸವನ್ನು ಹೊಂದಿರುತ್ತದೆ; ಕಚ್ಚು ಮಾಡಿದ ಜಾಗ ಮಂದವಾದ ಕೆಂಪು ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ಕಾವಿನೆಲೆಗಳು ಉದುರಿ ಹೋಗುತ್ತವೆ;ತೊಟ್ಟುಗಳು 1-2 ಸೆಂ.ಮೀ. ಉದ್ದವಿದ್ದು ರೋಮರಹಿತವಾಗಿರುತ್ತವೆ;ಪತ್ರಗಳು 6-12 X 3- 5 ಸೆಂ. ಮೀ. ಗಾತ್ರ, ಅಂಡವೃತ್ತ ಅಥವಾ ಬುಗುರಿ ಆಕಾರದಲ್ಲಿದ್ದು, ಚೂಪಾದ ಮಾದರಿಯಿಂದ ಹಿಡಿದು ಚೂಪಲ್ಲದ ಗುಂಡಾಕಾರದ ತುದಿ, ಒಳಬಾಗುವ ಮಾದರಿಯ ಬುಡ , ಗರಗಸ ದಂತಿತವಾದ ಅಂಚು ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮ ರಹಿತವಾಗಿರುತ್ತವೆ;ಪತ್ರಗಳ ಮುಖ್ಯ ನಾಳಗಳ ಅಕ್ಷಾಕಂಕುಳಿನಲ್ಲಿ ರಸಗ್ರಂಥಿಗಳಿರುತ್ತವೆ; ಎರಡನೇ ದರ್ಜೆಯ ನಾಳಗಳು ಅಂದಾಜು 5 ಜೋಡಿಗಳಿದ್ದು ಕವಲುಗೊಂಡಿರುತ್ತದೆ ಹಾಗೂ ಪತ್ರದ ತಳಬಾಗದ ಅಕ್ಷಾಕಂಕುಳಿನಲ್ಲಿ ರೋಮರಹಿತವಾದ ಸಹಜೀವಿ ಗೂಡುಗಳ ಸಮೇತವಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲವಾದ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿರುವ ರೋಮರಹಿತವಾದ ಮಧ್ಯಾಭಿಸರ ಮಾದರಿಯಲ್ಲಿದ್ದು, ಕೆಂಪು ವರ್ಣಹೊಂದಿದ್ದು 4 ರಿಂದ 7 ಸೆಂ.ಮೀ. ಉದ್ದ ಹೊಂದಿರುತ್ತದೆ; ಹೂಗಳು ಬಿಳಿ ಬಣ್ಣದಲ್ಲಿರುತ್ತದೆ.
ಕಾಯಿ /ಬೀಜ : ಡ್ರೂಪ್ಗಳು ಬುಗುರಿಯ ಆಕಾರದಲ್ಲಿದ್ದು 4 X 3 ಸೆಂ ಮೀ.ವರೆಗಿನ ಗಾತ್ರ, ಹೊಳಪುಳ್ಳ ಹಸಿರು ಬಣ್ಣ,ನಯವಾದ ಮೇಲ್ಮೈ ಹೊಂದಿದ್ದು ಅಗ್ರದಲ್ಲಿ ಸೂಕ್ಷ್ಮವಾದ ಮೊನಚು ಮುಳ್ಳನ್ನು ಹೊಂದಿರುತ್ತವೆ ಹಾಗೂ ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1000 ಮತ್ತು 1500 ನಡುವಿನ ಮಧ್ಯಮ ಎತ್ತರ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಅಪರೂಪವಾಗಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿಯಲ್ಲಿನ ಅಗಸ್ತ್ಯಮಲೆ ಮತ್ತು ವರುಶುನಾಡಿನಲ್ಲಿ ವ್ಯಾಪಿಸಿದೆ.

ಸ್ಥಿತಿ :

ದುರ್ಬಲ ಸ್ಥಿತಿ. (IUCN 2000)

ಗ್ರಂಥ ಸೂಚಿ :

Beddome, Fl. Sylv. t. 174.1872; Gamble, Fl. Madras 1: 124. 1997 (re. ed); Sasidharan, Biodiversity documentation for Kerala- Flowering Plants, part 6: 65. 2004.

Top of the Page