ಎಲೆಯೋಕಾರ್ಪಸ್ ಗಾಸ್ಸೆನಿಯೈ Weibel - ಎಲೆಯೋಕಾರ್ಪೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದವರೆವಿಗೆ ಬೆಳೆಯುವ ಮರಗಳು
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆ ಕಿರುಕೊಂಬೆಗಳು ದುಂಡಾಗಿದ್ದು, ಸನಿಹವಾಗಿ ಆವೃತಗೊಂಡ ಅಪ್ಪು-ರೋಮಗಳಿಂದ ಕೂಡಿರುತ್ತವೆ ಹಾಗೂ ಎಲೆಉದುರಿದ ಗುರುತು ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ಕಾವಿನೆಲೆಗಳು ಉದುರಿ ಹೋಗುವಂತಹವು;ತೊಟ್ಟುಗಳು 0.6 - 1.5 ಸೆಂ.ಮೀ. ಉದ್ದವಿದ್ದು, ಕಾಲುವೆಗೆರೆ ಸಮೇತವಿದ್ದು ವಿರಳವಾದ ಅಪ್ಪು-ರೋಮಗಳಿಂದ ಕೂಡಿರುತ್ತವೆ ಅಥವಾ ರೋಮರಹಿತವಾಗಿರುತ್ತವೆ;ಪತ್ರಗಳು 5 – 8 X 2.5 – 4 ಸೆಂ. ಮೀ. ಗಾತ್ರ, ಬಹುತೇಕವಾಗಿ ಬುಗುರಿ ಮಾದರಿಯ ಆಕಾರ,ಮೊಂಡು-ಅಗ್ರವುಳ್ಳ ಚೂಪಾದ ತುದಿ, ಬೆಣೆಯಾಕಾರದ ಬುಡ, ಗರಗಸ ದಂತಿತ ರೀತಿಯ ಅಂಚು ಹೊಂದಿದ್ದು , ಕಾಗದವನ್ನೋಲುವ ಮೇಲ್ಮೈ ಸಹಿತವಿದ್ದು ರೋಮರಹಿತವಾಗಿರುತ್ತವೆ; ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು 4-6 ಕವಲೊಡೆದ ಜೋಡಿಗಳಿದ್ದು ಪತ್ರದ ತಳಬಾಗದ ಅಕ್ಷಾಕಂಕುಳಿನಲ್ಲಿ ಸಹಜೀವಿ ಗೂಡುಗಳ ಸಮೇತವಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು 13-25 ಹೂಗಳುಳ್ಳ,ಮೃದುತುಪ್ಪಳದಿಂದ ಕೂಡಿದ , ಅಕ್ಷಾಕಂಕುಳಿನಲ್ಲಿರುವ ಮದ್ಯಾಭಿಸರ ಮಾದರಿಯವು;ಹೂಗಳು ಬಿಳಿ ಬಣ್ಣ ಹೊಂದಿರುತ್ತವೆ;ಪರಾಗ ಕೋಶದ ತುದಿಯಲ್ಲಿ ದಾಡಿ ಇರುತ್ತದೆ;
ಕಾಯಿ /ಬೀಜ : ಡ್ರೂಪ್ಗಳು ವಿಶಾಲವಾದ ಅಂಡವೃತ್ತಾಕಾರದಲ್ಲಿದ್ದು 2.5 ಮಿ.ಮೀ. ಉದ್ದ ಹೊಂದಿದ್ದು ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

ಮೇಲ್ಚಾವಣಿ ಮರಗಳಾಗಿ ಅಂದಾಜು 1500ಮೀ.ಎತ್ತರದಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ..

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿಯ ವರುಶುನಾಡು ಬೆಟ್ಟಗಳಲ್ಲಿ ಬೆಳೆಯುತ್ತದೆ.

ಸ್ಥಿತಿ :

ಜೀವಿಜಾತಿ ನಮೂನೆಯಿಂದ ಮಾತ್ರ ಪರಿಚಯವಿರುವ ಪ್ರಭೇದ.

ಗ್ರಂಥ ಸೂಚಿ :

Candollea 27: 17. 1972.

Top of the Page