English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ
| ಪ್ರಕೃತಿ : | 20 ಮೀ. ಎತ್ತರದವರೆವಿಗೆ ಬೆಳೆಯುವ ಮರಗಳು |
| ಕವಲುಗಳು ಮತ್ತು ಕಿರುಕೊಂಬೆಗಳು : | ಎಳೆ ಕಿರುಕೊಂಬೆಗಳು ಬೂದು ಬಣ್ಣದ ಸಣ್ಣ ರೇಷ್ಮೆಯಂತಹ ರೋಮಗಳನ್ನು ಹೊಂದಿರುತ್ತವೆ ಹಾಗೂ ಎಲೆಯುದುರಿದ ಗುರುತು ಸಮೇತವಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ಕಾವಿನೆಲೆಗಳು ಉದುರಿ ಹೋಗುವಂತಹವು;ತೊಟ್ಟುಗಳು 1.5 – 2.5 ಸೆಂ.ಮೀ. ಉದ್ದವಿದ್ದು, ಕಾಲುವೆಗೆರೆ ಸಮೇತವಿದ್ದು ವಿರಳವಾದ ಅಪ್ಪು-ರೋಮಗಳಿಂದ ಕೂಡಿರುತ್ತವೆ;ಪತ್ರಗಳು 6 – 9.5 X 3 – 4.5 ಸೆಂ ಮೀ. ಗಾತ್ರ, ಅಂಡವೃತ್ತ ಅಥವಾ ಅಂಡವೃತ್ತ-ಅಂಡಾಕಾರ ಮಾದರಿಯ ಆಕಾರ,ಚೂಪಾದುದರಿಂದ ಹಿಡಿದು ಕಿರಿದಾದ ಹಾಗೂ ಮೊಂಡು-ಅಗ್ರವುಳ್ಳ ಕ್ರಮೇಣ ಚೂಪಾಗುವ ತುದಿ, ದುಂಡಾದ ಬುಡ,ಆಳವಾದ ದಂತಗಳನ್ನು ಹೊಂದಿಲ್ಲದ ಗರಗಸ ದಂತಿತ ರೀತಿಯ ಅಂಚು ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 7 ಕವಲೊಡೆದ ಜೋಡಿಗಳಿದ್ದು ಪತ್ರದ ತಳಬಾಗದ ಅಕ್ಷಾಕಂಕುಳಿನಲ್ಲಿ ಸಹಜೀವಿ ಗೂಡುಗಳ ಸಮೇತವಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು. |
| ಪುಷ್ಪಮಂಜರಿ/ಹೂಗಳು : | ಪುಷ್ಪಮಂಜರಿಗಳು 4-6 ಸೆಂ.ಮೀ ಉದ್ದವಿದ್ದು 6 ರಿಂದ 7 ಹೂಗಳುಳ್ಳ , ರೇಷ್ಮೆಯಂತಹ ನಯವಾದ ಹಾಗೂ ಹೊಳಪುಳ್ಳ ಮೇಲ್ಮೈ ಹೊಂದಿದ ಅಕ್ಷಾಕಂಕುಳಿನಲ್ಲಿರುವ ಮದ್ಯಾಭಿಸರ ಮಾದರಿಯವು;ಹೂಗಳು ಬಿಳಿ ಬಣ್ಣ ಹೊಂದಿದ್ದು, 1- 1.2ಸೆಂ ಮೀ.ಉದ್ದದ ತೊಟ್ಟು ಸಮೇತವಾಗಿರುತ್ತವೆ;ಪರಾಗ ಕೋಶ ದಾಡಿ ಸಮೇತವಿರುತ್ತದೆ; ಆದರೆ ಸ್ಪಂದನಾಶೀಲ ರೋಮಗಳನ್ನು ಹೊಂದಿರುವುದಿಲ್ಲ. |
| ಕಾಯಿ /ಬೀಜ : | ಡ್ರೂಪ್ಗಳು ಚತುರಸ್ರಾಕಾರದಲ್ಲಿದ್ದು 1.5 ಸೆಂ.ಮೀ. ಉದ್ದ ಹೊಂದಿದ್ದು ಒಂದು ಬೀಜವನ್ನೊಳಗೊಂಡಿರುತ್ತವೆ. |