English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | ಅಂದಾಜು 20 ಮೀ. ಎತ್ತರದವರೆಗೆ ಬೆಳೆಯುವ ಮರಗಳು. |
| ಕಾಂಡ ಮತ್ತು ತೊಗಟೆ : | ಕಂಡ ಕೊರಕಲುಗಳನ್ನೊಳಗೊಂಡ ಮಾದರಿಯವು; ತೊಗಟೆ ಬೂದು ಬಣ್ಣದಲ್ಲಿದ್ದು ನಯವಾಗಿರುತ್ತದೆ. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ದುಂಡಾಗಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 0.5 – 0.9 ಸೆಂಮೀ.ಉದ್ದವಿದ್ದು ರೋಮರಹಿತವಾಗಿರುತ್ತವೆ; ಪತ್ರಗಳು 8 -19 X 3.5 – 6 ಸೆಂ. ಮೀ. ಗಾತ್ರ, ಚತುರಸ್ರದಿಂದ ಅಂಡವೃತ್ತವರೆಗಿನ ಆಕಾರ ಹೊಂದಿರುತ್ತವೆ; ಪತ್ರಗಳ ತುದಿ , ಕ್ರಮೇಣವಾಗಿ ಚೂಪಾಗುವ ಮಾದರಿಯಲ್ಲಿದ್ದು ಬುಡ ಅಸಮವಾಗಿರುತ್ತದೆ. ಅಂಚು ಎಳೆಯದಾಗಿದ್ದಾಗ ತೀಕ್ಷ್ಣವಾದ ಸೂಕ್ಷ್ಮದಂತಿತವಾಗಿರುತ್ತದೆ ಮತ್ತು ಬಲಿತಾಗ ಉಪ-ದುಂಡೇಣುಗಳ ಸಮೇತವಿರುತ್ತದೆ;ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿದ್ದು ನುಣುಪಿನ ಹೊಳಪನ್ನು ಹೊಂದಿರುತ್ತದೆ ಮತ್ತು ರೋಮರಹಿತವಾಗಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 7 ಜೋಡಿಗಳಿದ್ದು ಪ್ರಮುಖವಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ಹೆಚ್ಚಿನ ಅಂತರವನ್ನೊಳಗೊಂಡಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ. |
| ಪುಷ್ಪಮಂಜರಿ/ಹೂಗಳು : | ಪುಷ್ಪಮಂಜರಿ ಗಳು ಅಕ್ಷಾಕಂಕುಳಿನಲ್ಲಿರುತ್ತವೆ ಮತ್ತು ಹೂಗಳು ಕವಲುಗಳ ಮೇಲಿರುತ್ತವೆ. |
| ಕಾಯಿ /ಬೀಜ : | ಫಲಗಳು ಡ್ರೂಪ್ ಮಾದರಿಯವು. |