ಡ್ರೈಪೆಟೆಸ್ ರಾಕ್ಸ್ಬರ್ಗಿಯೈ (Wall.) Hurusawa - ಯೂಫೊರ್ಬಿಯೇಸಿ

Synonym : ಪುತ್ರಂಜೀವ ರಾಕ್ಸ್ಬರ್ಗಿಯೈ Wall.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಡು ಬೂದು ಬಣ್ಣದಲ್ಲಿದ್ದು ಅಡ್ಡವಾದ ವಾಯುವಿನಿಮಯ ಸೂಕ್ಷ್ಮ ಬೆಂಡುರಂಧ್ರಗಳನ್ನು ಹೊದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ತೆಳುವಾಗಿರುತ್ತವೆ ಮತ್ತು ಜೋತಾಡುತ್ತಿರುತ್ತವೆ; ಕಿರುಕೊಂಬೆಗಳು ಕೋನಯುಕ್ತವಾಗಿದ್ದು ಎಳೆಯದಾಗಿದ್ದಾಗ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತವೆ;ಕಾವಿನೆಲೆಗಳು ತ್ರಿಕೋನಾಕಾರದಲ್ಲಿದ್ದು, ಚೂಪಾಗಿರುತ್ತವೆ ಮತ್ತು ಉದುರಿ ಹೋಗುವ ಮಾದರಿಯವುಗಳಾಗಿರುತ್ತವೆ; ತೊಟ್ಟುಗಳು 0.4 – 1 ಸೆಂಮೀ.ಉದ್ದವಿದ್ದು ಬಹುಮಟ್ಟಿಗೆ ರೋಮರಹಿತವಾಗಿರುತ್ತವೆ ಮತ್ತು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ; ಪತ್ರಗಳು 5-9.5 X 1.5 –3.5 ಸೆಂ. ಮೀ. ಗಾತ್ರ, ಅಂಡವೃತ್ತ – ಚತುರಸ್ರದಿಂದ ಅಂಡವೃತ್ತ – ಅಂಡಾಕಾರದವೆರೆಗಿನ ಆಕಾರ ಹೊಂದಿರುತ್ತವೆ; ಪತ್ರಗಳ ತುದಿ ಚೂಪಾಗಿರುತ್ತದೆ ಅಥವಾ ಕೊಂಚ ಮೊಂಡಾಗ್ರವುಳ್ಳ , ಕ್ರಮೇಣವಾಗಿ ಚೂಪಾಗುವ ಮಾದರಿಯಲ್ಲಿದ್ದು ಬುಡ ಅಸಮವಾಗಿರುತ್ತದೆ. ಅಂಚು ಗರಗಸ ದಂತಿತವಾಗಿರುತ್ತದೆ;ಮೇಲ್ಮೈ ಕಾಗದವನ್ನೋಲುವ ಮಾದರಿಯಲ್ಲಿದ್ದು ಕಡು ಹಸಿರು ಬಣ್ಣ ಮತ್ತು ಹೊಳಪನ್ನು ಹೊಂದಿ- ರುತ್ತದೆ ಮತ್ತು ರೋಮರಹಿತವಾಗಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಹೆಚ್ಚೂ ಕಡಿಮೆ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 9-12 ಜೋಡಿಗಳಿದ್ದು ತೆಳುವಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲ ಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿರುತ್ತವೆ ; ಗಂಡು ಹೂಗಳು ಅಕ್ಷಾಕಂಕುಳಿನಲ್ಲಿನ ಗುಚ್ಛಗಳಲ್ಲಿರುತ್ತವೆ; ಹೆಣ್ಣು ಹೂಗಳು ಒಂಟಿಯಾಗಿರುತ್ತವೆ ಮತ್ತು ಅಕ್ಷಾಕಂಕುಳಿನಲ್ಲಿರುತ್ತವೆ.
ಕಾಯಿ /ಬೀಜ : ಡ್ರೂಪ್ ಫಲಗಳು ಅಂಡವೃತ್ತದ ಆಕಾರ ಹೊಂದಿದ್ದು ಶಾಶ್ವತವಾದ ಶಲಾಕಾಗ್ರದ ಸಮೇತವಿರುತ್ತವೆ ಹಾಗೂ ಒಂದು ಬೀಜವನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

600 ಮೀ. ಎತ್ತರದವರೆಗಿನ ಒಣ ನಿತ್ಯ ಹರಿದ್ವರ್ಣ ಮತ್ತು ಅರೆ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋ ಮಲೇಶಿಯ ;ಪಶ್ಚಿಮ ಘಟ್ಟದಲ್ಲಿ ಈ ಪ್ರಭೇದ ದಕ್ಷಿಣ,ಮಧ್ಯ ಮತ್ತು ಮಹಾರಾಷ್ಟ್ರದ ದಕ್ಷಿಣ ಸಹ್ಯಾದ್ರಿಯ ಒಣ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

J.Fac. Sci.Univ. Tokyo, Sect.3, Bot 6:337.1954;Gamble, Fl.Madras 2:1300.1993 (rep.ed.) ; Sasidharan, Biodiversity documentation for Kerala – Flowering plants, part 6, 415.2004;Saldanha, Fl. Karnataka 2;131.1996.

Top of the Page