English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ
| ಪ್ರಕೃತಿ : | 20 ಮೀ. ಎತ್ತರದವರೆಗೆ ಮರಗಳು. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ದುಂಡಾಗಿರುತ್ತವೆ ಹಾಗೂ ದಟ್ಟವಾದ ಕಂದು ಬಣ್ಣದ ಮೃದು ತುಪ್ಪಳದಿಂದ ಕೂಡಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತವೆ;ಕಾವಿನೆಲೆಗಳು ರೇಖಾತ್ಮಕ-ಭರ್ಜಿಯ ಆಕಾರದಲ್ಲಿದ್ದು 0.6 ಸೆಂ.ಮೀ. ವರೆಗಿನ ದ್ದ ಹೊಂದಿರುತ್ತವೆ; ತೊಟ್ಟುಗಳು 0.5-0.6 ಸೆಂ.ಮೀ. ಉದ್ದವಿದ್ದು, ದುಂಡಾಗಿರುತ್ತವೆ ಹಾಗೂ ಕಾಲುವೆಗೆರೆ ಸಮೇತವಿರುತ್ತವೆ ಹಾಗೂ ಕಂದು ಬಣ್ಣದ ಮೃದು ತುಪ್ಪಳದಿಂದ ಕೂಡಿರುತ್ತವೆ; ಪತ್ರಗಳು14 - 27 X 3 – 8.5 ಸೆಂ ಮೀ. ಗಾತ್ರ, ಚತುರಸ್ರದ ಆಕಾರ ಹೊಂದಿರುತ್ತವೆ; ಪತ್ರಗಳ ತುದಿ ಕ್ರಮೇಣವಾಗಿ ಅಥವಾ ಥಟ್ಟನೆ ಚೂಪಾಗುವ ಮಾದರಿಯಲ್ಲಿದ್ದು ಬುಡ ಅಸಮವಾಗಿರುತ್ತದೆ; ಅಂಚು ಸಾಮಾನ್ಯವಾಗಿ ನಯವಾಗಿರುತ್ತದೆ; ಮೇಲ್ಮೈ ಉಪ-ತೊಗಲನ್ನೋಲುವ ಮಾದರಿಯಲ್ಲಿರುತ್ತದೆ; ಪತ್ರದ ತಳ ಭಾಗದ ಮಧ್ಯ ನಾಳ ಕಂದು ಬಣ್ಣದ ದಟ್ಟ ಮೃದು ತುಪ್ಪಳ ದಿಂದ ಕೂಡಿರುತ್ತದೆ ಮತ್ತು ಮೇಲ್ಭಾಗದಲ್ಲಿ ರೋಮ- ರಹಿತವಾಗಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 7-10 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಲಂಬ ರೇಖೆಗೆ ಸಮಕೋನದಲ್ಲಿದ್ದು ಎಲೆ ದಿಂಡಿಗೆ ಅಡ್ಡಕೂಡುವಂತವು. |
| ಪುಷ್ಪಮಂಜರಿ/ಹೂಗಳು : | ಹೂಗಳು ಏಕಲಿಂಗಿಗಳಾಗಿರುತ್ತವೆ ಮತ್ತು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿದ್ದು ಅಕ್ಷಾಕಂಕುಳಿನಲ್ಲಿ ಅಥವಾ ಪಾರ್ಶ್ವ ಭಾಗದಲ್ಲಿದ್ದು ಹಳೆ ಕವಲುಗಳ ಮೇಲೆ ಗುಚ್ಛಗಳಲ್ಲಿರುತ್ತವೆ. |
| ಕಾಯಿ /ಬೀಜ : | ಸಂಪುಟ ಫಲಗಳು ಗೋಳಾಕಾರದಲ್ಲಿದ್ದು ಕಂದು ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿದ್ದು ತೊಟ್ಟು ಸಮೇತವಾಗಿರುತ್ತವೆ. |