ಡಯೋಸ್ಪೈರಾಸ್ ಮೊಂಟಾನ Roxb. - ಎಬೆನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡ ಹಲವು ವೇಳೆ ಮುಳ್ಳಿನಿಂದ ಕೂಡಿರುತ್ತದೆ;ತೊಗಟೆ ಬೂದು ಬಣ್ಣದಲ್ಲಿರುತ್ತವೆ; ಚಕ್ಕೆಗಳು ಅಸಮವಾಗಿ ಸುಲಿದು ಹೋಗುತ್ತವೆ;ಕಚ್ಚು ಮಾಡಿದ ಜಾಗ ಮಬ್ಬಾದ ಹಳದಿ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳು ಹಾಗೂ ದುಂಡಾಗಿದ್ದು ಎಳೆಯದಾಗಿದ್ದಾಗ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 0.5 -1 ಸೆಂ.ಮೀ ಉದ್ದವಿದ್ದು ಕಾಲುವೆಗೆರೆಸಮೇತ ಅಥವಾ ಸಪಾಟ ಪೀನ ಮಧ್ಯ ಆಕಾರದಲ್ಲಿರುತ್ತವೆ ಮತ್ತು ಮೃದುತುಪ್ಪಳದಿಂದ ಕೂಡಿರುತ್ತವೆ; ಪತ್ರಗಳು 3 – 11 X 1.4 – 4.5 ಸೆಂ.ಮೀ. ಗಾತ್ರ,ಸಾಧಾರಣವಾಗಿ ಅಂಡ-ಚತುರಸ್ರದ ಆಕಾರ,ಚೂಪಾದ ಅಥವಾಚೂಪಲ್ಲದ ತುದಿ ; ಚೂಪಾದುದರಿಂದ ಛಿನ್ನಾಗ್ರದಿಂದ ಹೃದಯಾಕಾರದ ಕೆಲವು ವೇಳೆ ದುಂಡಾದ ಬುಡ ,ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ಎಳೆಯದಾಗಿದ್ದಾಗ ಪತ್ರದ ಎರಡೂ ಬದಿಯಲ್ಲಿ ಮೃದುತುಪ್ಪಳವನ್ನು ಹೊಂದಿದ್ದು ನಂತರ ರೋಮರಹಿತವಾಗಿರುತ್ತವೆ; ಮಧ್ಯನಾಳ ಚಪ್ಪಟೆಯಾಗಿರುತ್ತದೆ ಅಥವಾ ಲಘುವಾದ ಕಾಲುವೆಗೆರೆಯನ್ನು ಹೊಂದಿರುತ್ತದೆ;ಎರಡನೇ ದರ್ಜೆಯ ನಾಳಗಳು 5 - 9 ಜೋಡಿಗಳಿದ್ದು, ತೆಳುವಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ತೆಳುವಾಗಿದ್ದು ವಿಶಾಲವಾದ ಜಾಲ ಬಂಧ ನಾಳವಿನ್ಯಾಸವನ್ನು ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕ ಲಿಂಗಿಗಳು; ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ಹಸಿರು ಬಣ್ಣದಲ್ಲಿದ್ದು ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ;ಹೆಣ್ಣು ಹೂಗಳು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಗೋಳಾಕಾರದಲ್ಲಿದ್ದು 2 ಸೆಂ.ಮೀ.ವರೆಗಿನ ವ್ಯಾಸ ಹೊಂದಿರುತ್ತವೆ; ಬೀಜಗಳು ಕಪ್ಪು ಮಿಶ್ರಿತಕಂದು ಬಣ್ಣ ಹೊಂದಿದ್ದು ಸಾಮಾನ್ಯವಾಗಿ 4 ರಿಂದ 8 ರ ಸಂಖ್ಯೆಯಲ್ಲಿರುತ್ತವೆ ಕೆಲವು ವೇಳೆ ಎರಡು ಬೀಜಗಳಿರುತ್ತವೆ.

ಜೀವಪರಿಸ್ಥಿತಿ :

800 ಮೀ.ವರೆಗಿನ ಎತ್ತರದ ಪ್ರದೇಶಗಳ ಭಂಗಗೊಂಡ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತು ಉಷ್ಣವಲಯದ ಆಸ್ಟ್ರೇಲಿಯ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳು.

ಗ್ರಂಥ ಸೂಚಿ :

Roxb., Pl. Cor.t.48.1795;Gamble, Fl. Madras 2:776.1997(rep.ed.);Sasidharan, Biodiversity documentation for Kerala-Flowering Plants,part 6.271..2004;Singh, Monograph on Indian Diospyros L.(Persimmon, Ebony)Ebenaceae 166.2005;Saldanha, Fl. Karnataka 1:339.1996.

Top of the Page