ಡಯೋಸ್ಪೈರಾಸ್ ಎಬೆನಮ್ Koenig - ಎಬೆನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಪ್ಪಾಗಿದ್ದು ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು,ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 0.3-0.8 ಸೆಂ.ಮೀ ಉದ್ದವಿದ್ದುಉಪ-ದುಂಡಾಕಾರವಾಗಿರುತ್ತವೆ ಹಾಗೂ ರೋಮ - ರಹಿತವಾಗಿರುತ್ತವೆ; ಪತ್ರಗಳು 5 – 13.5 X 1.5 - 4.5 ಸೆಂ.ಮೀ. ಗಾತ್ರ, ಅಂಡವೃತ್ತ ಅಥವಾ ಚತುರಸ್ರದ ಆಕಾರ, ಮೊಂಡಾದ ಅಗ್ರವುಳ್ಳ ಕ್ರಮೇಣ ಚೂಪಾಗುವ ತುದಿ ಅಥವಾಚೂಪಲ್ಲದ ತುದಿ, ಚೂಪಾದುದರಿಂದ ಹಿಡಿದು ದುಂಡಾದ,ನಯವಾದ ಅಂಚು ಬುಡ ಹೊಂದಿರುತ್ತವೆ; ಮಧ್ಯನಾಳ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು 5 – 8 ಜೋಡಿಗಳಿದ್ದು, ಅತಿ ತಳಗಿನ ಜೋಡಿಗಳು ಸನಿಹವಾಗಿದ್ದು ಚೂಪಾದ ಕೋನವನ್ನು ಹೊಂದಿರುತ್ತವೆ ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿ ರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕ ಲಿಂಗಿಗಳು; ಗಂಡು ಹೂಗಳುಕೆನೆ ಬಣ್ಣದಲ್ಲಿದ್ದು, ಉಪ-ತೊಟ್ಟು -ಸಹಿತವಾಗಿದ್ದು,3 ಹೂಗಳನ್ನೊಳಗೊಂಡ, ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ;ಹೆಣ್ಣು ಹೂಗಳು ಉಪ-ತೊಟ್ಟುಸಹಿತವಾಗಿದ್ದು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಅಂದಾಜು 2 ಸೆಂ. ಮೀ. ವ್ಯಾಸ ಹೊಂದಿದ್ದು ಗೋಳಾಕಾರ ಅಥವಾ ಉಪಗೋಳಾಕಾರದಲ್ಲಿದ್ದು ಅಗ್ರದಲ್ಲಿ ಸೂಕ್ಷ್ಮ ಮೊನಚು ಮುಳ್ಳನ್ನು ಹೊಂದಿರುತ್ತವೆ ಹಾಗೂ ವೃದ್ಧಿಸಿದ,ಹಿಂಚಾಚಿದ ಪುಷ್ಪಪಾತ್ರೆಯ ದಳಗಳ ಸಮೇತವಾಗಿರುತ್ತವೆ; ಸಾಧಾರಣವಾಗಿ 4 ಬೀಜಗಳಿರುತ್ತವೆ ಅಪರೂಪವಾಗಿ 2-8 ಬೀಜಗಳಿರುತ್ತವೆ.

ಜೀವಪರಿಸ್ಥಿತಿ :

800 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ಒಣ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಸಸ್ಯ ಕಂಡುಬರುತ್ತದೆ..

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದಲ್ಲಿನ ದಕ್ಷಿಣ ಸಹ್ಯಾದ್ರಿಯಲ್ಲಿ ಮತ್ತು ನೀಲಗಿರಿ ಪ್ರದೇಶಗಳ ಬೆಟ್ಟದ ಗಾಳಿ ಮರೆಯ ದಿಕ್ಕಿನಲ್ಲಿ ಈ ಸಸ್ಯ ಬೆಳೆಯುತ್ತದೆ..

ಗ್ರಂಥ ಸೂಚಿ :

Koenig, Physiogr. Salsk.Mag. 1:176.1781;Singh, Monograph on Indian Diospyros L.(Persimmon, Ebony)Ebenaceae 89.2005; Sasidharan, Biodiversity documentation for Kerala-Flowering Plants,part 6.270.2004:Gamble, Fl. Madras 2:775.1997(rep.ed.)

Top of the Page