ಕ್ಯಾಲೋಫಿಲ್ಲಮ್ ಪಾಲಿಯಾಂತಂ Wall. Ex Choisy - ಕ್ಲೂಸಿಯೇಸಿ

Synonym : ಕ್ಯಾಲೋಫಿಲ್ಲಮ್ ಎಲೇಟಂ Bedd.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 35ಮೀ ಎತ್ತರದವರೆಗೆ ಬೆಳೆಯುವ ದೊಡ್ಡ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ಹೊರ ತೊಗಟೆ ಹಳದಿ ಬಣ್ಣದಲ್ಲಿದ್ದು ಬಲಿಷ್ಠವಾದ ದೋಣಿಯಾಕಾರದ ಸೀಳಿಕೆಗಳನ್ನು ಹೊಂದಿರುತ್ತದೆ; ಒಳತೊಗಟೆ ನಾರು ರೂಪ; ಕಚ್ಚು ಮಾಡಿದ ಜಾಗ ಕೆಂಪಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ನಾಲ್ಕು ಕೋನಗಳನ್ನು ಹೊಂದಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಸಸ್ಯಕ್ಷೀರ ವಿರಳವಾಗಿದ್ದು,ಜಲರೂಪಿಯಾಗಿದ್ದು ನಂತರ ಹಳದಿ ಬಣ್ಣಕ್ಕೆ ತಿರುಗುತ್ತದೆ .
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಎಲೆತೊಟ್ಟು 0.8 ರಿಂದ 2.5 ಸೆಂ.ಮೀ ಉದ್ದವಾಗಿದ್ದು, ಅಡ್ಡಸೀಳಿದಾಗ ಸಪಾಟ ಪೀನಮಧ್ಯ ಆಕಾರ ಹೊಂದಿರುತ್ತವೆ ಹಾಗೂ ಉದುರು ರೋಮಗಳಿಂದ ಆವೃತವಾಗಿರುತ್ತವೆ; ಎಲೆಪತ್ರಗಳು 5 -9 X 2 - 4 ಸೆಂ.ಮೀ ಗಾತ್ರ ಹೊಂದಿದ್ದು, ಅಂಡವೃತ್ತ – ಭರ್ಜಿಯಾಕಾರದಲ್ಲಿದ್ದು, ಚೂಪಾದುದರಿಂದ ಹಿಡಿದು ಕ್ರಮೇಣವಾಗಿ ಚೂಪಾಗುವ ಮಾದರಿಯ ತುದಿಹೊಂದಿರುತ್ತವೆ. ಎಲೆಯ ಬುಡ ಸಾಮಾನ್ಯವಾಗಿ ಒಳಬಾಗಿದ ತಳವುಳ್ಳ ರೀತಿಯದಾಗಿರುತ್ತದೆ, ಕೆಲವು ವೇಳೆ ಚೂಪಾಗಿರುತ್ತದೆ, ಎಲೆಗಳು ತೊಗಲನ್ನೋಲುವ ಮಾದರಿಯವು; ಎರಡನೇ ದರ್ಜೆಯ ನಾಳಗಳು ಬಹುಸಂಖ್ಯೆಯಲ್ಲಿದ್ದು, ಕಡಿಮೆ ಅಂತರ ಹೊಂದಿದ್ದು, ಸಮಾಂತರದಲ್ಲಿರುತ್ತವೆ ಹಾಗೂ ಹೆಚ್ಚೂ ಕಡಿಮೆ ಮಧ್ಯ ನಾಳಕ್ಕೆ ಸಮಸಕೋನದಲ್ಲಿರುತ್ತವೆ ಹಾಗೂ ಮಂದವಾದ ಎಲೆಗಳ ಅಂಚಿನಲ್ಲಿ ಕೊನೆಗೊಳ್ಳುತ್ತವೆ;
ಪುಷ್ಪಮಂಜರಿ/ಹೂಗಳು : ಹೂಗಳು ಶ್ವೇತ ವರ್ಣ ಹೊಂದಿದ್ದು ಸುವಾಸನಾ ಯುಕ್ತ - ವಾಗಿರುತ್ತವೆ ಮತ್ತು ಕವಲೊಡೆದ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಡ್ರೂಪ್ ಗಳು ಅಂಡಾವೃತ್ತಾಕಾರದಲ್ಲಿದ್ದು, ಅಗ್ರ ಭಾಗದಲ್ಲಿ ಸೂಕ್ಷ್ಮವಾದ ಮುಳ್ಳನ್ನು ಹೊಂದಿದ್ದು, 3.7 ಸೆಂ ಮೀ ಉದ್ದವಿದ್ದು ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1600 ಮೀ ಎತ್ತರದವರೆಗಿನ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮರಗಳಾಗಿ ಈ ಪ್ರಭೇಧ ಬೆಳೆಯುತ್ತದೆ.

ವ್ಯಾಪನೆ :

ಇಂಡೋಚೈನ ಮತ್ತು ಇಂಡೋಮಲೇಶಿಯಾ; ಪಶ್ಚಿಮ ಘಟ್ಟಗಳ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Descr. Guttif. Ind. 43. 1849; Gamble,Fl.Madras1:76.1997(re.ed.); Sasidharan, Biodiversity documentation for Kerala-Flowering Plants, part 6:40.2004;Saldanha, Fl.Karnataka 1:203.1996.

Top of the Page