ಆರ್ಟೋಕಾರ್ಪಸ್ ಗೊಮೆಜಿಯಾನಸ್ Wall. ex Trecul ssp. ಜೇಲಾನಿಕಸ್ Jarrett - ಮೊರೇಸಿ

:

Vernacular names : Tamil: ಚಿಮ;ತೀಟಿಪ್ಳಾವುMalayalam: ಒಟ್ಟೆಹುಳಿ;ಒಂಟ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 35 ಮೀ. ಎತ್ತರದವರೆಗಿನ ಎಲೆಯುದುರು ಮಾದರಿಯ ದೊಡ್ಡ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ಸಣ್ಣದಾದ ಶಲ್ಕೆಗಳಾಗಿ ಸುಲಿಯುತ್ತವೆ ಹಾಗೂ ಸೂಕ್ಷ್ಮ ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ;ಕಚ್ಚು ಮಾಡಿದ ಜಾಗ ಕೆಂಪು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆ ಕಿರುಕೊಂಬೆಗಳು ದುಂಡಾಗಿದ್ದು ಸೂಕ್ಷ್ಮ ಬೂದು ಬಣ್ಣದ ಮೃದು ತುಪ್ಪಳದಿಂದ ಕೂಡಿರುತ್ತವೆ
ಜಿನುಗು ದ್ರವ : ಜಿನುಗು ದ್ರವ ಬಿಳಿ ಬಣ್ಣದಲ್ಲಿದ್ದು ವಿಫುಲವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದುಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಸಣ್ಣ ಗಾತ್ರದವುಗಳಾಗಿದ್ದು, ಉದುರಿ ಹೋದಾಗ ಎಲೆ ತೊಟ್ಟಿನ ಎರಡೂ ಬದಿಯಲ್ಲಿ ಗುರುತನ್ನು ಉಳಿಸುತ್ತವೆ; ತೊಟ್ಟುಗಳು 1-3 ಸೆಂ.ಮೀ. ಉದ್ದ ಹೊಂದಿದ್ದು ದುಂಡಾಗಿರುತ್ತವೆ ಹಾಗೂ ಬೂದು ಬಣ್ಣದ ಮೃದುತುಪ್ಪಳವನ್ನು ಹೊಂದಿರುತ್ತವೆ;ಪತ್ರಗಳು 10-30.5 X 5.5 – 11(-16) ಸೆಂ.ಮೀ. ಗಾತ್ರವಿದ್ದು ಚತುರಸ್ರದಿಂದ ಚತುರಸ್ರ-ಭರ್ಜಿಯವರೆಗಿನ ಆಕಾರ ಹೊಂದಿದ್ದು,ಬಾಲರೂಪಿ- ಕ್ರಮೇಣ ಚೂಪಾಗುವ ತುದಿ,ಚೂಪಾದುದರಿಂದ ಹಿಡಿದು ಛಿನ್ನಾಗ್ರದವರೆಗಿನ ಆಕಾರದ ಬುಡ,ನಯವಾದ ಅಂಚು (ಕೆಲವು ವೇಳೆ ಎಳೆಯದಾಗಿದ್ದಾಗ ಗರಗಸ ದಂತಿತವಾಗಿರುತ್ತವೆ) ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ, ಪತ್ರಗಳ ಮೇಲ್ಭಾಗ ಮಧ್ಯನಾಳವನ್ನು ಹೊರತು ಪಡಿಸಿ ರೋಮರಹಿತವಾಗಿರುತ್ತವೆ ಹಾಗೂ ತಳ ಭಾಗ ಮಖಮಲ್ಲಿನ ರೀತಿಯ ಮೃದು ತುಪ್ಪಳದಿಂದ ಕೂಡಿರುತ್ತವೆ; ಮಧ್ಯ ನಾಳ ಮೇಲ್ಭಾಗದಲ್ಲಿ ಕೊಂಚ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು 10 ರಿಂದ 14 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲಜಾಲಬಂಧ ನಾಳವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿರುತ್ತವೆ;ಹೂಗಳು ಏಕಲಿಂಗಿಗಳು; ಗಂಡು ಹೂಗಳು ಗೋಳಾಕಾರದ ಚೆಂಡುಗಳಲ್ಲಿರುತ್ತವೆ ಹಾಗೂ 1 ರಿಂದ 1.8 ಸೆಂ.ಮೀ ಉದ್ದದ ವೃಂತವನ್ನು ಹೊಂದಿರುತ್ತವೆ;ಹೆಣ್ಣು ಹೂಗಳು ಗೋಳಾಕಾರದ ಚೆಂಡುಗಳಲ್ಲಿರುತ್ತವೆ, ಆಂತೋಕಾರ್ಪು ಸಂಪೂರ್ಣವಾಗಿ ಸಂಯುಕ್ತಗೊಂಡಿರುತ್ತದೆ.
ಕಾಯಿ / ಬೀಜ : ಸಂಯುಕ್ತ ಫಲ(ತಿರುಳುಳ್ಳ ಸಂಯುಕ್ತ ಫಲ) 5 ಸೆಂ.ಮೀ. ವರೆಗಿನ ಅಡ್ಡಗಲತೆಯನ್ನು ಹೊಂದಿದ್ದು, ಉಪಗೋಳಾಕಾರದಲ್ಲಿರುತ್ತವೆ ಮತ್ತು ಕಳೆತಾಗ ಹಳದಿ ಬಣ್ಣದಲ್ಲಿರುತ್ತವೆ; ಬೀಜಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ.

ಜೀವಪರಿಸ್ಥಿತಿ :

1000 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ಭಗ್ನಗೊಂಡ ನಿತ್ಯ ಹರಿದ್ವರ್ಣ ಮತ್ತು ಅರೆ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಅಥವಾ ಹೊರಹೊಮ್ಮುವ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ದಕ್ಷಿಣ ಭಾರತ ಮತ್ತು ಶ್ರೀಲಂಕಾ;ಪಶ್ಚಿಮ ಘಟ್ಟದಲ್ಲಿ ಈ ಪ್ರಭೇದ ದಕ್ಷಿಣ , ಮಧ್ಯ ಸಹ್ಯಾದ್ರಿ ಮತ್ತು ಮಹಾರಾಷ್ಟ್ರದ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

J. Arnold Arbor. 41:90.1960;Gamble, Fl. Madras 3:1369. 1998(rep.ed.);Sasidharan, Biodiversity documentation for Kerala- Flowering Plants, part 6:437.2004.

Top of the Page