ಆರ್ಕಿಡೆಂಡ್ರಾನ್ ಮಾನ್ಅಡೆಲ್ಫಮ್ (Roxb.) Nielson var. ಗ್ರಾಸೈಲ್ (Bedd.) Sanjappa - ಫ್ಯಾಬೇಸಿ- ಮಿಮೋಸಾಯ್ಡಿ

Synonym : ಪಿತೆಕೊಲೋಬಿಯಂ ಗ್ರಾಸೈಲ್ Bedd.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಪೊದೆಗಳು ಅಥವಾ7 ಮೀ. ಎತ್ತರದವರೆಗೆ ಬೆಳೆಯುವ ಚಿಕ್ಕ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ, ದ್ವಿಗರಿ ಹಾಗೂ ಸಮ ಸಂಖ್ಯಾ ಗರಿ ರೂಪಿಗಳಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಕಾವಿನೆಲೆಗಳು ಅಸ್ಥಿರವಾಗಿರುತ್ತವೆ;ನಡುಕಾಂಡ 18 ರಿಂದ 20 ಸೆಂ.ಮೀ.ಉದ್ದವಿದ್ದು,ಉಬ್ಬಿದ ಎಲೆ ಬುಡವನ್ನು ಹೊಂದಿರುತ್ತದೆ ಮತ್ತು ಉಬ್ಬಿದ ಭಾಗದ ಕೊಂಚ ಮೇಲೆ ದುಂಡಗಿನ ರಸಗ್ರಂಥಿಯನ್ನು ಹೊಂದಿರುತ್ತದೆ ;ಗರಿಗಳು 7 ರಿಂದ 12ಸೆಂ.ಮೀ. ಉದ್ದವಿರುತ್ತವೆ ಮತ್ತು ಪ್ರತಿ ಕಿರುಎಲೆಗಳ ಕೊಂಚ ತಳಗೆ ರಸಗ್ರಂಥಿಗಳನ್ನು ಹೊಂದಿರುತ್ತವೆ; ಕಿರುತೊಟ್ಟುಗಳು 0.4 ಸೆಂ.ಮೀ.ವರೆಗಿನ ಉದ್ದವನ್ನು ಹೊಂದಿರುತ್ತವೆ;ಕಿರು ಎಲೆಗಳು 2 ರಿಂದ 3 ಜೋಡಿಗಳಿದ್ದು ಅಭಿಮುಖಿಗಳಾಗಿರುತ್ತವೆ ಹಾಗೂ ಅಗ್ರದ ಕಡೆಗೆ ಹೋದಂತೆ ಕಿರುಎಲೆಗಳ ಗಾತ್ರ ಹೆಚ್ಚುತ್ತಾ ಹೋಗುತ್ತದೆ, ಕಿರುಎಲೆಗಳು 1 – 14.5 X 1.8 – 5.5 ಸೆಂ.ಮೀ. ಗಾತ್ರ ಹೊಂದಿದ್ದು ಅಂಡಾಕಾರ - ಈಟಿಯ ಆಕಾರ, ಬಾಲ ರೂಪಿ –ಕ್ರಮೇಣ ಚೂಪಾಗುವ (ಅಗ್ರದ ಉದ್ದ 1.5 – 2.5 ಸೆಂ.ಮೀ.) ತುದಿ, ಅಸಮ್ಮಿತಿಯಾದ ಬುಡ,ನಯವಾದ ಅಂಚನ್ನು ಹೊಂದಿರುತ್ತದೆ, ಕಿರುಎಲೆಗಳು ದ್ದು ಒಣಗಿದಾಗ ಹಸಿರು ಬಣ್ಣದಲ್ಲಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 12 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳವಿನ್ಯಾಸದಲ್ಲಿರುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾಭಿಸರ ರೀತಿಯಲ್ಲಿರುತ್ತವೆ.
ಕಾಯಿ / ಬೀಜ : ಕಾಯಿಗಳು ಪಾಡ್ ಮಾದರಿಯವುಗಳಾಗಿದ್ದು ಸುರುಳಿಯಾಗಿರುತ್ತದೆ;ಬೀಜಗಳು 5 ಇದ್ದು ಕಪ್ಪನೆಯ ಬಣ್ಣ ಹಾಗೂ ಅಂಡವೃತ್ತದ ಕಾರ ಹೊಂದಿರುತ್ತವೆ.

ಜೀವಪರಿಸ್ಥಿತಿ :

900 ಮೀ. ಎತ್ತರದವರೆಗಿನ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ದ್ವರ್ಣ ಕಾಡುಗಳಲ್ಲಿ ಒಳಛಾವಣಿ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟದಲ್ಲಿನ ದಕ್ಷಿಣ ಭಾಗಕ್ಕೆ ಸೀಮಿತವಾದ ಈ ಪ್ರಭೇದ ಪಶ್ಚಿಮ ಅಣ್ಣಾಮಲೈ, ಪಾಲಕ್ಕಾಡು ಬೆಟ್ಟಗಳು ಮತ್ತು ವೈನಾಡು ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Leg.India 62:1991;Gamble, Fl. Madras 1:435. 1997(rep.ed.); Sasidharan, Biodiversity documentation for Kerala- Flowering Plants, part 6:162.2004.

Top of the Page