English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 12 ಮೀ.ವರೆವಿಗೆ ಬೆಳೆಯುವ ಮರಗಳು. |
| ಕಾಂಡ ಮತ್ತು ತೊಗಟೆ : | ತೊಗಟೆ ಸೂಕ್ಷ್ಮವಾದ ಸೀಳಿಕಾ ವಿನ್ಯಾಸದಲ್ಲಿರುತ್ತದೆ ಮತ್ತು ತೆಳು ಕಂದು ಬಣ್ಣದ್ದಾಗಿರುತ್ತದೆ. |
| ಕವಲುಗಳು ಮತ್ತು ಕಿರುಕೊಂಬೆಗಳು : | ಎಳೆಯ ಕಿರುಕೊಂಬೆಗಳು ಹೆಚ್ಚೂ ಕಡಿಮೆ ದೃಢವಾಗಿದ್ದು ದುಂಡಾಗಿರುತ್ತವೆ ಮತ್ತು ಕೆಂಗಂದು ಬಣ್ಣದ ದಟ್ಟವಾದ ಮೃದುತುಪ್ಪಳದಿಂದ ಕೂಡಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು, ಉಪತರಂಗಿತ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು ದೃಢವಾಗಿದ್ದು 3.5 ಸೆಂ.ಮೀ. ವರೆಗಿನ ಉದ್ದ ಹೊಂದಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿದ್ದು ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು 12-22X5.5-10ಸೆಂ.ಮೀ ಗಾತ್ರ ಹೊಂದಿದ್ದು, ಸಾಮಾನ್ಯವಾಗಿ ಬುಗುರಿ ಆಕಾರದಲ್ಲಿರುತ್ತವೆ ಕೆಲವು ವೇಳೆ ಬುಗುರಿ-ಭರ್ಜಿ ಆಕಾರದಲ್ಲಿರುತ್ತವೆ. ಪತ್ರದ ತುದಿ ಚೂಪಲ್ಲದ ಅಥವಾ ಮೊಂಡಾದ ಚೂಪುಳ್ಳ ಮಾದರಿಯಲ್ಲಿದ್ದು,ಸಂಕುಚಿತ ಬೆಣೆಯಾಕಾರದ ಬುಡ ಹೊಂದಿರುತ್ತವೆ; ಪತ್ರಗಳ ತಳಭಾಗ ಮತ್ತು ಪತ್ರದ ಮೇಲ್ಭಾಗದ ಮಧ್ಯನಾಳ ಕೆಂಗಂದು ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ;ಪತ್ರದ ತಳಭಾಗ ಮಾಸಲು ಬೂದು ಹಸಿರುಬಣ್ಣ ಹೊಂದಿರುತ್ತದೆ ದಲ್ಲಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 8-9 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಹೆಚ್ಚೂ ಕಡಿಮೆ ಲಂಬರೇಖೆಗೆ ಸಮಕೋನದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವ ರೀತಿಯವು. |
| ಪುಷ್ಪಮಂಜರಿ/ಹೂಗಳು : | ಹೂಗಳು ಏಕಲಿಂಗಿಗಳಾದ್ದು, ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ ಮತ್ತು ಪಾರ್ಶ್ವದಲ್ಲಿನ ಗುಬುಟುಗಳ ಮೇಲಿನ ಗುಚ್ಛಗಳಲ್ಲಿರುತ್ತವೆ. |
| ಕಾಯಿ /ಬೀಜ : | ಬೆರ್ರಿಗಳು 1 ಬೀಜವನ್ನೊಳಗೊಂಡಿರುತ್ತವೆ. |