ಆಕ್ರೋಕಾರ್ಪಸ್ ಫ್ರಾಕ್ಸಿನಿಫೋಲಿಯಸ್ Wt. & Arn. - ಸಿಸಾಲ್ಪೀನಿಯೇಸಿ

ಕನ್ನಡದ ಪ್ರಾದೇಶಿಕ ಹೆಸರು : ಬಳಿಂಜಿ, ಹಂಟಿಗೆ, ಹಂಡಿಗೆ, ಹೌಟಿಗೆಮರ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಆನಿಕೆಗಳನ್ನುಳ್ಳ, ಎಲೆಯುದುರುವ, 40 ಮೀ. ಎತ್ತರಕ್ಕೆ ಬೆಳೆಯುವ ದೊಡ್ಡಗಾತ್ರದ ಮರಗಳು.
ಎಲೆಗಳು : ಎಲೆಗಳು ದೊಡ್ಡಗಾತ್ರದವು ಹಾಗೂ ಸಮಸಂಖ್ಯೆಯ ದ್ವಿಗರಿ ರೂಪಿ ಸಂಯುಕ್ತ ಮಾದರಿಯವು; ಕಾವಿ ನೆಲೆಗಳು ಉದುರಿಹೋಗುವ ರೀತಿಯವು; ಗರಿಗಳು 3 ರಿಂದ 5 ಜೋಡಿಗಳಿದ್ದು, ಪ್ರತಿ ಗರಿಗಳಲ್ಲಿ 5 ರಿಂದ 6 ಜೋಡಿ ಕಿರುಎಲೆಗಳಿರುತ್ತವೆ; ಪತ್ರಗಳ ಕಾತ್ರ 4 - 15 x 1.5 - 4.5 ಸೆ.ಮೀ. ಇದ್ದು, ಆಕಾರದಲ್ಲಿ ಭರ್ಜಿಯನ್ನು ಹೋಲುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ದಟ್ಟವಾಗಿದ್ದು, ಅಕ್ಷಾಕಂಕುಳಿನಲ್ಲಿರುವ ಮಧ್ಯಾಭಿಸರ ರೀತಿಯವು; ಹೂಗಳು ಹಸಿರು ವರ್ಣದಲ್ಲಿದ್ದು, ಕಡುಕೆಂಪು ವರ್ಣದ ಕೇಸರಗಳನ್ನು ಹೊಂದಿರುತ್ತವೆ; ಹೂ ತೊಟ್ಟು ಚಿಕ್ಕದಾಗಿರುತ್ತದೆ.
ಕಾಯಿ /ಬೀಜ : ಕಾಯಿಗಳು ಬಟಾಣಿ ಅಥವಾ ಹುರಳಿಯ ಹೋಲುವ ಪಾಡ್ ಮಾದರಿಯಲ್ಲಿದ್ದು, ಶಲ್ಕಾ ಮಾದರಿಯ ಪತ್ರಕ ಸಮೇತವಿದ್ದು,ಬಿರಿಯುವ ಗುಣ ಹೊಂದಿದ್ದು ರೆಕ್ಕೆಯುಕ್ತವಾಗಿರುತ್ತವೆ; ಬೀಜಗಳು 5 ರಿಂದ 10 ಇದ್ದು, ಬುಗುರಿ ಆಕಾರದಲ್ಲಿದ್ದು, ಓರೆಯಾಗಿದ್ದು ಅದುಮಿದ ಹಾಗೆ ಇರುತ್ತವೆ.

ಜೀವಪರಿಸ್ಥಿತಿ :

1300 ಮೀ. ಎತ್ತರದ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ತೆರವು ಮಾಡಿದ ಜಾಗಗಳಲ್ಲಿ ಹೊರಹೊಮ್ಮಿ ಕಂಡು ಬರುವ ಹಾಗೂ ಕಡಿಮೆ ಎತ್ತರದ ಪ್ರದೇಶಗಳ ತೇವಾಂಶವುಳ್ಳ ಎಲೆಯುದುರು ಕಾಡುಗಳಲ್ಲಿ ಆಗಾಗ್ಗೆ ಕಂಡು ಬರುವ ಪ್ರಭೇಧ.

ವ್ಯಾಪನೆ :

ಇಂಡೋಮಲೇಶಿಯ; ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶದಲ್ಲಿ ಆಗಾಗ್ಗೆ ಕಂಡು ಬರುತ್ತದೆ.

ಗ್ರಂಥ ಸೂಚಿ :

Mag. Zool. Bot. 2:547. 1838; Gamble, Fl. Madras 1:397. 1997 (re.ed); Sasidharan, Biodiversity documentation for Kerala - Flowering Plants, part 6:150. 2004, Saldanha, Fl. Karnataka 1:376. 1996.

Top of the Page