ಜೈಲೋಪಿಯ ಪಾರ್ವಿಫೋಲಿಯ (Wt.) J. Hk. & Thoms. - ಅನೋನಸಿ

Synonym : ಪೆಟೋನಿಯ ಪಾರ್ವಿಫೋಲಿಯ Wt.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25ಮೀ ವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡ ಆನಿಕೆ ಸಮೇತವಿರುತ್ತವೆ ; ತೊಗಟೆ ತೆಳು ಹಾಗೂ ನಯವಾಗಿರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪ- ರೋಮರಹಿತವಾಗಿರುತ್ತವೆ ಮತ್ತು ಗುಂಡಾಕಾರವಾಗಿದ್ದು ವಾಯುವಿನಿಮಯ ಬೆಂಡುರಂಧ್ರ ಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುವ ಮಾದರಿಯಲ್ಲಿರುತ್ತವೆ. ಎಲೆತೊಟ್ಟು 0.5 ರಿಂದ 1 ಸೆಂ.ಮೀ. ಉದ್ದವಿರುತ್ತದೆ. ಎಲೆಪತ್ರದ ಗಾತ್ರ 7-9 × 2.5-4ಸೆಂ.ಮೀ. ಸಾಮಾನ್ಯವಾಗಿ ಅಂಡಾಕೃತಿಯಲ್ಲಿರುತ್ತದೆ; ತುದಿ ಮೊಂಡು ಅಗ್ರವುಳ್ಳ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು ಬುಡ ಚೂಪಾಗಿರುತ್ತದೆ. ಎಲೆಯ ಮೇಲ್ಮೈ ಕಾಗದವನ್ನು ಹೋಲುವಂತಹವು ಮತ್ತು ರೋಮರಹಿತ; ಮಧ್ಯನಾಳ ಎಲೆಪತ್ರದ ಮೇಲ್ಭಾಗದಲ್ಲಿ ತುಸು ಕಾಲುವೆ ಗೆರೆಗಳನ್ನು ಹೊಂದಿರುತ್ತದೆ ; ಎರಡನೇ ದರ್ಜೆಯ ನಾಳಗಳು 6 ರಿಂದ 8 ಜೋಡಿಯಾಗಿದ್ದು ತೆಳುವಾಗಿರುತ್ತವೆ ; ತೃತೀಯ ದರ್ಜೆಯ ನಾಳಗಳು ಜಾಲಬಂಧ ನಾಳಸ್ವರೂಪದವು.
ಪುಷ್ಪಮಂಜರಿ/ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿ ಗುಚ್ಛಗಳಲ್ಲಿರುತ್ತವೆ. ಹೂಗಳು ತೀರಾಚಿಕ್ಕದಾದ ತೊಟ್ಟುಗಳನ್ನು ಹೊಂದಿದ್ದು ಕಂದು ಬಣ್ಣದಲ್ಲಿರುತ್ತವೆ. ಪುಷ್ಪಾದಳಗಳು ದಟ್ಟ ಮೃದು ತುಪ್ಪಳ ಸಮೇತವಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಅನೇಕ ಬೀಜಗಳನ್ನೊಳಗೊಂಡು ಗುಚ್ಛಗಳಲ್ಲಿರುತ್ತವೆ. ಬೆರ್ರಿಗಳು ತೀರಾಚಿಕ್ಕದಾದ ತೊಟ್ಟು ಹೊಂದಿದ್ದು 3 × 2 ಸೆಂ.ಮೀ. ಗಾತ್ರದವು ಹಾಗೂ ಬುಗುರಿ ಆಕಾರದವು.

ಜೀವಪರಿಸ್ಥಿತಿ :

ಸಮುದ್ರ ಮಟ್ಟದಿಂದ 600.ಮೀ. ಎತ್ತರದವರೆಗಿನ ಪ್ರದೇಶಗಳ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಪ್ರಭೇದ ಕಂಡು ಬರುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟ (ದಕ್ಷಿಣ ಮಲಬಾರ್) ಮತ್ತು ಶ್ರೀಲಂಕಾ

ಗ್ರಂಥ ಸೂಚಿ :

Hooker and Thomson, Fl. Ind. 125.1855; Gamble, Fl. Madras 1: 20.1997 (re.ed); Sasidharan, Biodiversity documentation for Kerala- Flowering Plants, part 6: 21. 2004.

Top of the Page