ಟ್ರೈಕ್ಯಾಲಿಸಿಯ ಸ್ಪೆರೋಕಾರ್ಪ (Dalz.) Gamble - ರೂಬಿಯೇಸಿ

Synonym :

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗಿನ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡ ಕೊರಕಲುಗಳ ಸಮೇತವಿರುತ್ತವೆ;ತೊಗಟೆ ಬಿಳಿ ಬಣ್ಣ ಹೊಂದಿದ್ದು ನಯವಾಗಿರುತ್ತದೆ ಹಾಗೂ ಬಲಿತಾಗ ರೋಮರಹಿತವಾಗಿರುತ್ತದೆ ಮತ್ತು ಸೀಳಿಕಾ ಮಾದರಿಯಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪದುಂಡಾಗಿರುವುದರಿಂದ ಸಂಕುಚಿತವಾಗಿರುವರೆಗಿನ ಆಕಾರ ಹೊಂದಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ;ಅಂಕುರ ಮೊಗ್ಗು ಸಾಮಾನ್ಯವಾಗಿ ಹಳದಿ ಬಣ್ಣದ ಅಂಟು ದ್ರವವನ್ನು ಒಸರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ, ಕಾವಿನೆಲೆಗಳು ಸಂಕುಚಿತ ತ್ರಿಕೋನಾಕಾರದಲ್ಲಿದ್ದು 0.7 ಸೆಂ.ಮೀ ವರೆಗಿನ ಉದ್ದ ಹೊಂದಿರುತ್ತವೆ;ತೊಟ್ಟು 0.6 –1.5 ಸೆಂ.ಮೀ.ವರೆಗಿನ ಉದ್ದವಿದ್ದು,ಸ್ವಲ್ಪಮಟ್ಟಿಗೆ ಮೇಲ್ಭಾಗದಲ್ಲಿ ಕಾಲುವೆ ಗೆರೆಯನ್ನು ಹೊಂದಿರುತ್ತದೆ ಹಾಗೂ ರೋಮರಹಿತವಾಗಿರುತ್ತವೆ;ಪತ್ರಗಳು 5 -10 X 1.5 – 3.5 ಸೆಂ.ಮೀ. ಗಾತ್ರ ಹೊಂದಿದ್ದು,ಅಂಡವೃತ್ತದಿಂದ ಅಂಡವೃತ್ತ-ಅಂಡದವರೆಗಿನ ಆಕಾರ ಹೊಂದಿದ್ದು,ಮೊಂಡಾಗ್ರವುಳ್ಳ ಕ್ರಮೇಣ ಚೂಪಾಗುವ ಅಥವಾ ಚೂಪಲ್ಲದ ತುದಿ, ಒಳಬಾಗಿದ ಬುಡ, ನಯವಾದ ಅಂಚು ಹೊಂದಿದ್ದು ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತವೆ ; ಎರಡನೇ ದರ್ಜೆಯ ನಾಳಗಳು 5 -8 ಜೋಡಿಗಳಿರುತ್ತವೆ ಮತ್ತುಅಕ್ಷಾಕಂಕುಳಿನಲ್ಲಿ ರೋಮಸಹಿತವಾದ ಸೂಕ್ಷ್ಮ ಸಹಜೀವಿ ಗೂಡುಗಳ ಸಮೇತವಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಗುಛ್ಛಾಕಾರದ ಮಾದರಿಯವು;ಹೂಗಳು ಸಂಕೀರ್ಣಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣುಹೂಗಳು ಬೇರೆ ಬೇರೆ ಸಸ್ಯಗಳಲ್ಲಿರುತ್ತವೆ ಹಾಗೂ ತೀರಾ ಸಣ್ಣ ಗಾತ್ರ ಹೊಂದಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು ಗೋಳಾಕಾರದಲ್ಲಿರುತ್ತವೆ ಮತ್ತು 2 ಸೆಂ.ಮೀ. ಉದ್ದ ಹೊಂದಿರುತ್ತವೆ;ಬೀಜಗಳ ಸಂಖ್ಯೆ ಹಲವಾರು ಇದ್ದು ಚಪ್ಪಟೆಯಾಗಿರುತ್ತವೆ.

ಜೀವಪರಿಸ್ಥಿತಿ :

1000ಮೀ. ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಮರಗಳು ಬೆಳೆಯುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ;ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ,ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರ ಸಹ್ಯಾದ್ರಿಯಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Gamble, Fl. Madras 437. 1921; Gamble, Fl. Madras 2: 620. 1993 (re. ed); Sasidharan, Biodiversity documentation for Kerala- Flowering Plants, part 6: 237. 2004; Almeida, Fl. Maharashtra 3:60. 2001; Cooke, Fl. Bombay 1: 604.1903.

Top of the Page