ಟರ್ಮಿನೇಲಿಯ ಪ್ಯಾನಿಕ್ಯುಲೇಟ Roth - ಕಾಂಬ್ರೆಟೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದವರೆಗೆ ಬೆಳೆಯುವ ದೊಡ್ಡ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣ ಹೊಂದಿದ್ದು ಆಳವಿಲ್ಲದ ಸೀಳಿಕಾ ವಿನ್ಯಾಸವನ್ನು ಹೊಂದಿರುತ್ತದೆ. ಕಚ್ಚು ಮಾಡಿದ ಜಾಗ ಕಂದು ಬಣ್ಣದ ಕಣಗಳನ್ನು ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಎಳೆಯದಾಗಿದ್ದಾಗ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸಾಮಾನ್ಯವಾಗಿ ಉಪ- ಅಭಿಮುಖವಾಗಿರುತ್ತವೆ ಅಥವಾ ಮೇಲಿನ ಕೆಲವು ಎಲೆಗಳು ಪರ್ಯಾಯವಾಗಿ ಜೋಡಿತವಾಗಿರುತ್ತವೆ;ತೊಟ್ಟುಗಳು0.6-1.7 ಸೆಂ.ಮೀ. ಉದ್ದವಿದ್ದು, ಉಪ-ದುಂಡಾಕಾರ ಹೊಂದಿದ್ದು,ಉಪ-ರೋಮರಹಿತವಾಗಿರುತ್ತವೆ. ಪತ್ರಗಳು 9 - 18 X 4.5 - 7 ಸೆಂ.ಮೀ. ಗಾತ್ರ ಹೊಂದಿದ್ದು ಆಕಾರದಲ್ಲಿಅಂಡಾಕಾರ-ಧೀರ್ಘ ಚತುರಸ್ರಾಕಾರದಲ್ಲಿದ್ದು, ಕ್ರಮೇಣ ಚೂಪಾಗುವ ಮಾದರಿಯ ತುದಿ ಹಾಗೂ ದುಂಡಾದ ಹೃದಯಾಕಾರದಲ್ಲಿರುವ ಬುಡವನ್ನು ಹೊಂದಿರುತ್ತವೆ; ಪತ್ರಗಳು ತೊಗಲನ್ನೋಲುವ ರೀತಿಯಲ್ಲಿದ್ದು ಎರಡೂ ಬದಿಯಲ್ಲಿ ಮೃದುತುಪ್ಪಳದಿಂದ ಕೂಡಿದ್ದು ಬಲಿತಾಗ ರೋಮರಹಿತವಾಗುತ್ತವೆ; ಪತ್ರದ ಮೇಲ್ಭಾಗ ಕಪ್ಪಾಗಿರುತ್ತದೆ; ಮಧ್ಯನಾಳವು ತೆಳುವಾಗಿ ಪತ್ರದ ಮೇಲ್ಭಾಗ ದಲ್ಲಿ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು 10 ರಿಂದ 15 ಜೋಡಿಗಳಿದ್ದು ಕ್ರಮೇಣವಾಗಿ ಬಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ತೆಳುವಾಗಿದ್ದು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತಹವು. ಎಲೆತೊಟ್ಟು ಹಾಗೂ ಎಲೆಯ ತಳಭಾಗದ ಮಧ್ಯನಾಳಗಳು ಸೇರುವಲ್ಲಿ ತೊಟ್ಟುರಹಿತವಾದ ಜೋಡಿ ರಸಗ್ರಂಥಿಗಳಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಮಂದ ಬಿಳುಪು ವರ್ಣದವಾಗಿದ್ದು ಪುನಾರಾವೃತ್ತಿಯಾಗಿ ಕವಲೊಡೆಯುವ ಕದಿರು ಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು ಸಮಾರಾ ಮಾದರಿಯಲ್ಲಿದ್ದು,ಕೆಂಪು ವರ್ಣದವು;ರೆಕ್ಕೆಗಳು ಅಸಮವಾಗಿದ್ದು ಮಧ್ಯದ ರೆಕ್ಕೆ ದೊಡ್ಡದಾಗಿರುತ್ತದೆ; ಬೀಜಗಳ ಸಂಖ್ಯೆ ಒಂದು.

ಜೀವಪರಿಸ್ಥಿತಿ :

1200 ಮೀ.ಎತ್ತರದವರೆಗಿನ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಮತ್ತು ಅರೆನಿತ್ಯಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಅಥವಾ ತೆರೆದ ಭಾಗಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಪ್ರದೇಶಗಳು; ಪಶ್ಚಿಮ ಘಟ್ಟದ ಎಲ್ಲಾ ಭಾಗಗಳು

ಗ್ರಂಥ ಸೂಚಿ :

Nov.Pl.sp. 383.1821;Gamble,Fl.Madras 1:465.1997(re.ed.); Sasidharan, Biodiversity documentation for Kerala- Flowering Plants, part 6:172.2004; Cooke, Fl. Bombay 1: 480.1902; Saldanha, Fl.Karnataka 2;51.1996

Top of the Page