English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 10 ಮೀ. ಎತ್ತರದವರೆಗಿನ ಮರಗಳು. |
| ಕಾಂಡ ಮತ್ತು ತೊಗಟೆ : | ತೊಗಟೆ ತೆಳುವಾಗಿದ್ದು,ನಯವಾಗಿರುತ್ತದೆ ಮತ್ತು ತೆಳು ಕಂದು ಬಣ್ಣದಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಬಿಳಿ ಬಣ್ಣದಲ್ಲಿರುತ್ತದೆ. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ದುಂಡಾಗಿರುತ್ತವೆ ರೋಮರಹಿತವಾಗಿರುತ್ತವೆ ಅಥವಾ ಕೊಂಚಮಟ್ಟಿಗೆ ಮೃದು ತುಪ್ಪಳದಿಂದ ಕೂಡಿರುತ್ತದೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 0.7 – 1.1 ಸೆಂ.ಮೀ. ಉದ್ದವಿದ್ದು, ,ಕಾಲುವೆಗೆರೆ ಸಮೇತವಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ; ಪತ್ರಗಳು 6 – 13 X 2.5 – 6 ಸೆಂ.ಮೀ. ಗಾತ್ರ, ಅಂಡವೃತ್ತ,ಅಂಡವೃತ್ತ-ಅಂಡದ ಆಕಾರ ಹೊಂದಿದ್ದು,ಮೊಂಡಾಗ್ರವುಳ್ಳ ಕ್ರಮೇಣ ಚೂಪಾಗುವ ಮಾದರಿಯ ತುದಿ,ಚೂಪಾದ ಬುಡ,ದುಂಡೇಣುಗಳನ್ನುಳ್ಳ ಅಂಚು ಹೊಂದಿರುತ್ತವೆ,ಪತ್ರಗಳ ಮೇಲ್ಭಾಗ ಹೊಳಪನ್ನು ಹೊಂದಿದ್ದು,ಒಣಗಿದಾಗ ಹಸಿರಾಗಿರುತ್ತದೆ, ಪತ್ರಗಳ ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 4 – 8 ಇದ್ದು ಕ್ರಮೇಣವಾಗಿ ಬಾಗಿರುತ್ತವೆ ಮತ್ತು ಆರೋಹಣ ರೀತಿಯಲ್ಲಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ. |
| ಪುಷ್ಪಮಂಜರಿ / ಹೂಗಳು : | ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ ಮಧ್ಯಾಭಿಸರ ಮಾದರಿಯವು;ಹೂಗಳು ತೊಟ್ಟುರಹಿತ. |
| ಕಾಯಿ / ಬೀಜ : | ಡ್ರೂಪ್ಗಳು ವರ್ತುಲ ಸ್ಥಂಭಾಕೃತಿಯಲ್ಲಿ ಅಥವಾ ಅಂಡವೃತ್ತದ ಆಕಾರದಲ್ಲಿದ್ದು, 2.5 X 1.2 ಸೆಂ.ಮೀ. ಗಾತ್ರದಲ್ಲಿದ್ದು; ಬೀಜಗಳು 5 ರಿಂದ 6 ಆಳವಾದ ಉತ್ತಗೆರೆಗಳನ್ನು ಹೊಂದಿರುತ್ತವೆ. |