English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
ಪ್ರಕೃತಿ : | 20 ಮೀ ಎತ್ತರದವರೆಗಿನ ಎಲೆಯುದುರು ಮಾದರಿಯ ಮರಗಳು. |
ಕಾಂಡ ಮತ್ತು ತೊಗಟೆ : | ತೊಗಟೆ ಬೂದು ಮಿಶ್ರಿತ -ಕಂದು ಬಣ್ಣ ಹೊಂದಿದ್ದು,ಬಲಿತಾಗ ಚಕ್ಕೆಯೇಳುವ ಮಾದರಿಯವುಗಳಾಗಿರುತ್ತದೆ;ಕಚ್ಚು ಮಾಡಿದ ಜಾಗ ನಸುಗೆಂಪು. |
ಕವಲುಗಳು ಮತ್ತು ಕಿರುಕೊಂಬೆಗಳು : | ಎಳೆಯ ಕಿರುಕೊಂಬೆಗಳು ದುಂಡಾಗಿರುತ್ತವೆ, ನಕ್ಷತ್ರರೂಪದ ರೋಮಗಳಿಂದ ಮತ್ತು ಕಂದು ಮಿಶ್ರಿತ ಹಳದಿಬಣ್ಣದ ಮೃದು ತುಪ್ಪಳದಿಂದ ಕೂಡಿರುತ್ತವೆ. |
ಎಲೆಗಳು : | ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ಕಾವಿನೆಲೆಗಳು ಕತ್ತಿಯ ಆಕಾರ ಹೊಂದಿದ್ದು, ಉದುರಿದ ನಂತರ ಗುರುತು ಉಳಿಸುವ ಮಾದರಿಯವುಗಳಾಗಿರುತ್ತವೆ; ತೊಟ್ಟುಗಳು 2-5 ಸೆಂ.ಮೀ. ಉದ್ದವಿದ್ದು, ದುಂಡಾಗಿರುತ್ತವೆ, ನಕ್ಷತ್ರ ರೂಪದ, ಕಂದು ಮಿಶ್ರಿತ ಹಳದಿಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ,ಎರಡೂ ತುದಿಯಲ್ಲಿ ಉಬ್ಬಿಕೊಂಡಿರುತ್ತವೆ; ಪತ್ರಗಳು 8–24 X 6.5 – 14 ಸೆಂ.ಮೀ. ಗಾತ್ರ,ಅಂಡವೃತ್ತ-ಚತುರಸ್ರದಿಂದ ವಿಶಾಲವಾದ ಅಂಡವೃತ್ತ ಅಥವಾ ಅಂಡದವರೆಗಿನ ಆಕಾರ ಹೊಂದಿದ್ದು, ಕಿರಿ ಗಾತ್ರದ ಕ್ರಮೇಣ ಚೂಪಾಗುವ ತುದಿ, ದುಂಡಾದುದರಿಂದ ಹೃದಯದ ಆಕಾರವರೆಗಿನ ಮಾದರಿಯ ಬುಡ, ನಯವಾದ ಅಂಚು ಹೊಂದಿರುತ್ತವೆ,ಪತ್ರದ ಮೇಲ್ಭಾಗ ರೋಮರಹಿತವಾಗಿದ್ದು ತಳಭಾಗ ಕಂದು ಮಿಶ್ರಿತ ಹಳದಿ ಬಣ್ಣದ ನಕ್ಷತ್ರ ರೂಪದ ರೋಮಗಳಿಂದ ಆವೃತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ;ಬುಡದಲ್ಲಿ3 - 5 ನಾಳಗಳ ಸಮೇತವಿರುತ್ತವೆ;ಎರಡನೇ ದರ್ಜೆಯ ನಾಳಗಳು 6 - 8 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಓರೆಯಾಗಿ ಎಲೆಯ ದಿಂಡಿಗೆ ಅಡ್ಡವಾಗಿ ಕೂಡುತ್ತವೆ. |
ಪುಷ್ಪಮಂಜರಿ / ಹೂಗಳು : | ಪುಷ್ಪಮಂಜರಿಗಳು ತುದಿಯಲ್ಲಿನ ಅಥವಾ ಅಕ್ಷಾಕಂಕುಳಿನಲ್ಲಿನ ಮಧ್ಯಾಭಿಸರ ಮಾದರಿಯಲ್ಲಿದ್ದು ಕಂದು ಮಿಶ್ರಿತ ಹಳದಿ ಬಣ್ಣದ ನಕ್ಷತ್ರ ರೂಪದ ರೋಮಗಳಿಂದ ಆವೃತವಾಗಿರುತ್ತವೆ;ಹೂಗಳು ಸಂಕೀರ್ಣಲಿಂಗಿಗಳಾಗಿದ್ದು ನಸುಗೆಂಪು ಚುಕ್ಕೆಗಳಿಂದ ಕೂಡಿದ ಬಿಳಿ ಬಣ್ಣದಲ್ಲಿರುತ್ತವೆ ;ಹೂತೊಟ್ಟುಗಳು 0.3 ಸೆಂ.ಮೀ.ಉದ್ದವಿರುತ್ತವೆ. |
ಕಾಯಿ / ಬೀಜ : | ಸೋತ ಫಲಗಳು 1-5, ಇದ್ದು ದಾರುವಿನ ರೀತಿಯಲ್ಲಿದ್ದು,ಬುಗುರಿ ಆಕಾರದಲ್ಲಿರುತ್ತವೆ,7.6 ಸೆಂ.ಮೀ. ಉದ್ದವಿದ್ದು ಹೊಳಪುಳ್ಳ ಕೆಂಪು ಅಥವಾ ಕಡುಗೆಂಪು ಬಣ್ಣ ಹೊಂದಿರುತ್ತವೆ ಮತ್ತು ಉದ್ದವಾದ ಮೃದುಗೂದಲುಗಳಿಂದ ಕೂಡಿರುತ್ತವೆ, ಫಲಗಳ ಒಳಭಾಗ ನಸುಗೆಂಪು ಅಥವಾ ಕಡುಗೆಂಪು ಬಣ್ಣ ಹೊಂದಿರುತ್ತದೆ; ಬೀಜಗಳು ಹಲವಾರು ಇದ್ದು,ಅಂಡದ ಆಕಾರದಲ್ಲಿದ್ದು ಕಪ್ಪು ಬಣ್ಣ ಹೊಂದಿರುತ್ತವೆ. |