ಸೆಮೆಕಾರ್ಪಸ್ ಟ್ರವಂಕೂರಿಕ Bedd. - ಅನಕಾರ್ಡಿಯೇಸಿ

ಕನ್ನಡದ ಪ್ರಾದೇಶಿಕ ಹೆಸರು : ಕಾಡುಗೇರು

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 35 ಮೀ ಎತ್ತರದವರೆಗೂ ಬೆಳೆಯುವ ದೊಡ್ಡ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಸೀಳಿಕಾ ವಿನ್ಯಾಸದಲ್ಲಿದ್ದು ನಸುಗೆಂಪು ಬಣ್ಣದ ಕಚ್ಚುಗಳನ್ನು ಹೊಂದಿರುತ್ತದೆ
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದೃಢ ಹಾಗೂ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಕುಡಿ ಕೊಂಬೆಗಳ ತುದಿಯಲ್ಲಿ ಗುಂಪಾಗಿದ್ದು, ಸರಳ ರೀತಿಯವಾಗಿದ್ದು ಪರ್ಯಾಯ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ. ಎಲೆ ತೊಟ್ಟುಗಳು ರೋಮ ರಹಿತವಾಗಿದ್ದು 5 ರಿಂದ 8 ಸೆಂ.ಮೀ. ಉದ್ದವಿದ್ದು ಗುಂಡಾಕೃತಿಯನ್ನು ಹೊಂದಿರುತ್ತದೆ. ಎಲೆಪತ್ರದ ಗಾತ್ರ 29-60 × 11-17 ಸೆಂ.ಮೀ. ಇದ್ದು, ಅಗಲವಾದ ಬುಗುರಿ ಆಕಾರ ಹೊಂದಿರುತ್ತದೆ. ತುದಿ ಗುಂಡಾಗಿದ್ದು ಬುಡಭಾಗ ಚೂರಾಗಿರುತ್ತದೆ. ಅಂಚು ಹಿಂಸುರಿಯಾಗಿದ್ದು, ಮೇಲ್ಮೈ ತೊಗಲಿನ ತರಹದ್ದು ಹಾಗೂ ರೋಮರಹಿತ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿಯೂ ತಳಭಾಗದಲ್ಲಿ ದೃಢವಾಗಿರುತ್ತದೆ. ಎರಡನೇ ದರ್ಜೆಯ ನಾಳಗಳು 14 ರಿಂದ 18 ಜೋಡಿ ಇದ್ದು ನೇರವಾಗಿದ್ದು, ಮೇಲ್ಭಾಗದಲ್ಲಿ ಪ್ರಾಮುಖ್ಯವಾಗಿ ಉಬ್ಬಿಕೊಂಡಿರುತ್ತದೆ. ಈ ನಾಳಗಳು ಪತ್ರದ ಅಂಚಿನ ಬಳಿ ತಿರುವು ಪಡೆಯುತ್ತವೆ. ತೃತೀಯ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಗಳಾಗಿದ್ದು ಹಾಗೂ ರೋಮರಹಿತವಾಗಿದ್ದು ಅಕ್ಷಾಕಂಕುಳಿನಲ್ಲಿ ಮತ್ತು ತುದಿಯಲ್ಲಿರುವ ಪುನರಾವೃತ್ತಿಯಾಗಿ ಕವಲೊಡೆದ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು 3ಸೆಂ.ಮೀ. ಉದ್ದವಿದ್ದು, ಒಂದು ಬೀಜ ಹೊಂದಿರುತ್ತವೆ. ಓರೆಯಾದ ಚತುರಸ್ರಾಕಾರದ ಆಕಾರದಲ್ಲಿದ್ದು ಮಾಂಸಲವಾದ ಹೈಪೋಕಾರ್ಪ್ ಮೇಲೆ ಆಸೀನವಾಗಿರುತ್ತವೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ ಸಮುದ್ರಮಟ್ಟಕ್ಕಿಂತ 600 ರಿಂದ 1200ಮೀ ಮಧ್ಯಮ ಎತ್ತರದ ಪ್ರದೇಶಗಳಲ್ಲಿನ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಈ ಪ್ರಭೇದ ಸೀಮಿತ; ದಕ್ಷಿಣ ಸಹ್ಯಾದ್ರಿಯ ಪಾಲ್ಘಾಟ್ನ ಅಂತರ ಪ್ರದೇಶದಲ್ಲಿ ದಕ್ಷಿಣ ಭಾಗಗಳಲ್ಲಿ ಈ ಪ್ರಭೇದ ಕಾಣಸಿಗುತ್ತದೆ.

ಗ್ರಂಥ ಸೂಚಿ :

Fl. Sylv. 2: 232.1870; Gamble, Fl. Madras 1: 267.1997 (re.ed); Sasidharan, Biodiversity documentation for Kerala- Flowering Plants, part 6: 113. 2004

Top of the Page