ಸ್ಸಾಜೆರಯ ಲಾರಿಫೊಲಿಯ (Graham) Blatt. - ಅನೋನಸಿ

Synonym : ಗ್ವಟ್ಟೇರಿಯ ಲಾರಿಫೋಲಿಯ Graham

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12ಮೀ ಎತ್ತರದವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಅನಿಯಮಿತ ಚಕ್ಕೆ ರೂಪದವು, ಕಚ್ಚುಗಳು ಮಂದವಾದ ಕಡು ಬಣ್ಣ ಹೊಂದಿರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಮಬೆಗಳು ತೆಳು ಹಾಗೂ ಗುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ ಜೋಡಣೆ ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುವ ಮಾದರಿಯಲ್ಲಿರುತ್ತವೆ. ಎಲೆತೊಟ್ಟು 0.5 ರಿಂದ 1.3ಸೆಂ.ಮೀ. ಉದ್ದವಿದ್ದು ಧೃಢವಾಗಿರುತ್ತದೆ. ಎಲೆಪತ್ರ 10 - 30 × 3 – 10 ಸೆಂ.ಮೀ. ಇಕ್ಕಟ್ಟಾದ ಧೀರ್ಘ ಚತುರಸ್ರಾಕಾರದಿಂದ ಇಕ್ಕಟ್ಟಾದ ಅಂಡವೃತ್ತಾಕೃತಿಯುಳ್ಳ ಆಕಾರ ಹೊಂದಿರುತ್ತವೆ. ಎಲೆಯ ತುದಿ ಚೂಪಾದುದರಿಂದ ಕ್ರಮೇಣವಾಗಿ ಚೂಪಾಗುವ ಅಥವಾ ಚೂಪಲ್ಲದ ಮಾದರಿಯಲ್ಲಿರುತ್ತವೆ. ಎಲೆಯ ಬುಡ ಚೂಪಾಗಿರುತ್ತದೆ. ಎಲೆಯ ಅಂಚು ನಯವಾಗಿದ್ದು ಎಲೆಗಳು ರೋಮರಹಿತವಾಗಿರುತ್ತವೆ. ಎರಡನೇ ದರ್ಜೆಯ ನಾಳಗಳು 8 ರಿಂದ 13 ಜೋಡಿಗಳಿದ್ದು, ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ಸ್ವರೂಪದವು.
ಪುಷ್ಪಮಂಜರಿ/ಹೂಗಳು : ಹೂಗಳು ಕೆನೆಬಣ್ಣವುಳ್ಳದ್ದಾಗಿದ್ದು, ಒಂಟಿಯಾಗಿ ಅಥವಾ ಹಳೆಯ ಕವಲುಗಳ ಮೇಲಿನ ಗುಚ್ಛಗಳಲ್ಲಿರುತ್ತವೆ. ಹಾಗೂ ಉದ್ದವಾದ ಹೂ ತೊಟ್ಟುಗಳನ್ನು ಹೊಂದಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಸಾಮೂಹಿಕವಾಗಿದ್ದು, ಗೋಳಾಕಾರದಲ್ಲಿದ್ದು ಅತಿ ಚಿಕ್ಕ ತೊಟ್ಟುಗಳನ್ನು ಹೊಂದಿದ್ದು 4 ಸೆಂ.ಮೀ. ಅಡ್ಡಗಲದ ಗಾತ್ರ ಹೊಂದಿರುತ್ತವೆ.

ಜೀವಪರಿಸ್ಥಿತಿ :

ಸಮುದ್ರ ಮಟ್ಟದಿಂದ 200 ರಿಂದ 600ಮೀ. ಎತ್ತರದವರೆಗಿನ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿನ ಮರಗಳಾಗಿ ಕಂಡು ಬರುತ್ತವೆ.

ವ್ಯಾಪನೆ :

ದಕ್ಷಿಣ ಸಹ್ಯಾದ್ರಿ ಅಪರೂಪವಾಗಿ ಮತ್ತು ಮಧ್ಯ ಸಹ್ಯಾದ್ರಿಯ ಉತ್ತರಮಲೆನಾಡಿನಿಂದ ಕೊಂಕಣದ ಕರಾವಳಿ ಪ್ರದೆಶದವರಿವಿಗೂ ಅಲ್ಲಲ್ಲಿ ಕಂಡು ಬರುವ ಈ ಪ್ರಭೇಧ ಪಶ್ಚಿಮ ಘಟ್ಟಕ್ಕೆ ಸೀಮೀತ.

ಸ್ಥಿತಿ :

ಅಳಿವಿಂಚಿಗೆ ಕಡಿಮೆ ಅಪಾಯ ಸಂಭವ ಸ್ಥಿತಿ; ನಶಿಸುವ ಭೀತಿಗೆ ಹತ್ತಿರವಾಗಿರುವ ಸ್ಥಿತಿ (IUCN, 2000)

ಗ್ರಂಥ ಸೂಚಿ :

J. Bombay Nat. Hist. Soc. 34: 294. 1931; Gamble, Fl. Madras 1: 12. 1997 (re. ed); Sasidharan, Biodiversity documentation for Kerala- Flowering Plants, part 6: 20. 2004; Saldanha, Fl. Karnataka 1: 49. 1984; Keshava Murthy and Yoganarasimhan, Fl. Coorg (Kodagu) 33. 1990.

Top of the Page