ಸ್ಸಾಜೆರಯ ಗ್ರಾಂಡಿಫ್ಲೋರ Dunn. - ಅನೋನಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 18ಮೀ ಎತ್ತರದವರೆವಿಗೆ ಬೆಳೆಯುವ ವೃಕ್ಷಗಳು.
ಎಲೆಗಳು : ಎಲೆಗಳು ಸರಳ, ಪರ್ಯಾಯ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ. ಎಲೆತೊಟ್ಟು 0.8 ರಿಂದ 0.9 ಸೆಂ.ಮೀ. ಉದ್ದವಿರುತ್ತವೆ. ಎಲೆಪತ್ರ 25-35 × 7-8ಸೆಂ.ಮೀ. ಧೀರ್ಘ ಚತುರಸ್ರಾಕಾರದಲ್ಲಿದ್ದು ಸಣ್ಣದಾದ ಕ್ರಮೇಣ ಚೂಪಾಗುವ ಎರಡನೇ ದರ್ಜೆಯ ನಾಳಗಳು 10 ರಿಂದ 13 ಜೋಡಿಗಳಿದ್ದು ತೆಳ
ಪುಷ್ಪಮಂಜರಿ/ಹೂಗಳು : ಹೂಗಳು ಕಾಂಡಜನ್ಮಿಯಾಗಿದ್ದು, ಗುಚ್ಛಗಳಲ್ಲಿ ಎಲೆಯುದುರು ಗುರುತುಗಳ ತಳಭಾಗದಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಹೆಚ್ಚು ಸಂಖ್ಯೆಯಲ್ಲಿನ ಬೀಜಗಳನ್ನೊಳಗೊಂಡಿದ್ದು ರೋಮರಹಿತವಾಗಿರುತ್ತವೆ ಹಾಗೂ ಗುಚ್ಛಗಳಲ್ಲಿರುತ್ತವೆ.

ಜೀವಪರಿಸ್ಥಿತಿ :

ಉಪಮೇಲ್ಛಾವಣಿ ಮರಗಳಾಗಿ ಕಡಿಮೆ ಎತ್ತರದ ಪ್ರದೇಶಗಳ (400ಮೀ) ನಿತ್ಯಹರಿದ್ವರ್ಣಕಾಡುಗಳಲ್ಲಿ ಈ ಪ್ರಭೇಧ ಬೆಳೆಯುತ್ತವೆ.

ವ್ಯಾಪನೆ :

ದಕ್ಷಿಣ ಸಹ್ಯಾದ್ರಿ ಪ್ರದೇಶಗಳಲ್ಲಿನ ಅಪರೂಪವಾಗಿ ಕಂಡುಬರುವ ಈ ಸಸ್ಯ ಪಶ್ಚಿಮ ಘಟ್ಟಗಳಿಗೆ ಸೀಮಿತ

ಸ್ಥಿತಿ :

ನಶಿಸಿ ಹೋಗುವ ಆತಂಕಕಾರಿ ಸ್ಥಿತಿ (IUCN, 2000)

ಗ್ರಂಥ ಸೂಚಿ :

Bull. Misc. Inf. Kew 1914: 182. 1914; Gamble, Fl. Madras 1: 12. 1997 (re. ed); Sasidharan, Biodiversity documentation for Kerala- Flowering Plants, part 6: 20. 2004.

Top of the Page