ಟೀರೋಸ್ಪರ್ಮಮ್ ಡೈವರ್ಸಿಫೋಲಿಯಂ Blume - ಸ್ಟರ್ಕ್ಯೂಲಿಯೇಸಿ

:

Vernacular names : Tamil: ಪಾಂಬರಂ,ಮಲವುರಂMalayalam: ತಡ್ಡು ಮರ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣ ಹೊಂದಿದ್ದು, ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ಕಾಂಡದ ಲಂಬ ರೇಖೆಗೆ ಸಮಕೋನದಲ್ಲಿರುತ್ತವೆ;ಎಳೆಯ ಕಿರುಕೊಂಬೆಗಳು ದುಂಡಾಗಿರುತ್ತವೆ,ಕಂದು ಮಿಶ್ರಿತ ಹಳದಿ ಬಣ್ಣದ ರೋಮಗಳನ್ನು ಮತ್ತು ನಕ್ಷತ್ರ ರೂಪದ ರೋಮಗಳನ್ನು ಹೊಂದಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ಕಾವಿನೆಲೆಗಳು ಪಾರ್ಶ್ವದಲ್ಲಿದ್ದು,ಉದುರಿಹೋಗುವ ಮಾದರಿಯವುಗಳಾಗಿದ್ದು ಉದುರಿದ ನಂತರ ಗುರುತುಗಳನ್ನು ಉಳಿಸುತ್ತವೆ; ತೊಟ್ಟುಗಳು 1.5 ಸೆಂ.ಮೀ. ವರೆಗಿನ ಉದ್ದವಿದ್ದು, ದಟ್ಟ ಮೃದು ತುಪ್ಪಳದಿಂದ ಕೂಡಿದ್ದು,ದುಂಡಾಗಿರುತ್ತವೆ; ಪತ್ರಗಳು 11.5 – 18(-25.5) X 8.5 – 13.5(-17)ಸೆಂ.ಮೀ. ಗಾತ್ರ,ಚತುರಸ್ರದಿಂದ ಪಿಟೀಲು ಮಾದರಿಯ ಆಕಾರ ಹೊಂದಿದ್ದು ಸಸಿಗಳಲ್ಲಿ ಹೆಚ್ಚಿನ ವೈವಿಧ್ಯತೆಯನ್ನು ಹೊಂದಿರುತ್ತವೆ, ತುದಿ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು,ಬುಡ ಹೃದಯದ,ಛಿನ್ನಾಗ್ರ ಆಕಾರದಿಂದ ಅಸಮ್ಮಿತಿಯಾದ ಮಾದರಿಯವರೆಗಿನ ಆಕಾರದಲ್ಲಿರುತ್ತದೆ(ಸಸಿಗಳಲ್ಲಿ ಪತ್ರದ ತಳಭಾಗದಲ್ಲಿ ತೊಟ್ಟಿರುವ ಮಾದರಿಯಲ್ಲಿರುತ್ತವೆ),ಪತ್ರಗಳ ಮೇಲ್ಭಾಗ ರೋಮರಹಿತವಾಗಿದ್ದು ತಳ ಭಾಗ ಬೆಳ್ಳಿ ಬಣ್ಣದ ಮೃದುತಪ್ಪಳದಿಂದ ಕೂಡಿರುತ್ತದೆ, ಪತ್ರಗಳು ಒಣಗಿದಾಗ ಕಂದು ಬಣ್ಣದಲ್ಲಿರುತ್ತದೆ,ಮೇಲ್ಮೈ ತೊಗಲನ್ನು ಹೋಲುವ ಮಾದರಿಯಲ್ಲಿರುತ್ತದೆ;ಪತ್ರದ ಬುಡದಲ್ಲಿ 5-ನಾಳಗಳು ಇರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 5 - 9 ಜೋಡಿಗಳಿದ್ದು ಮೇಲ್ಭಾಗದಲ್ಲಿ ಅಚ್ಚೊತ್ತಿದಂತಿರುತ್ತವೆ, ತಳಬಾಗದಲ್ಲಿ ದೃಢವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಓರೆಯಾಗಿ ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ದೊಡ್ಡ ಗಾತ್ರದಲ್ಲಿದ್ದು,ಒಂಟಿಯಾಗಿ ಅಥವಾ 2 ರಿಂದ 3 ಒಟ್ಟಿಗಿರುತ್ತವೆ, ಅಕ್ಷಾಕಂಕುಳಿನಲ್ಲಿದ್ದು ಬಿಳಿ ಬಣ್ಣದಲ್ಲಿರುತ್ತವೆ;ಉಪ ಪತ್ರಕಗಳು ಆಳವಾದ ಸೀಳಿಕೆಗಳ ಸಮೇತವಿರುತ್ತವೆ;ಹೂತೊಟ್ಟುಗಳು 0.5 ಸೆಂ.ಮೀ.ಉದ್ದವಿರುತ್ತವೆ.
ಕಾಯಿ / ಬೀಜ : ಸಂಪುಟ ಫಲಗಳು ದಾರುವಿನ ರೀತಿಯಲ್ಲಿದ್ದು 5-ಕೋನಗಳ ಸಮೇತವಿದ್ದು 7.6 X 3.8 ಸೆಂ.ಮೀ. ವರೆಗಿನ ಉದ್ದವಿರುತ್ತವೆ ಮತ್ತು ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ; ಬೀಜಗಳು ಸಂಕುಚಿತವಾಗಿದ್ದು ಪ್ರತಿ ಕೋಶದಲ್ಲಿ 8 – 11 ಇರುತ್ತವೆ,ಮತ್ತು ಒಂದು ತುದಿಯಲ್ಲಿ ರೆಕ್ಕೆಯ ಸಮೇತವಿರುತ್ತವೆ.

ಜೀವಪರಿಸ್ಥಿತಿ :

700 ಮೀ. ವರೆಗಿನ ಎತ್ತರದ ಪ್ರದೇಶಗಳ ಭಗ್ನಗೊಂಡ ಅರೆ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ;ಪಶ್ಚಿಮ ಘಟ್ಟದ ದಕ್ಷಿಣ,ಮತ್ತು ಮಹಾರಾಷ್ಟ್ರದ ದಕ್ಷಿಣ ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Bijdr. 88. 1825; Gamble, Fl. Madras 1: 108. 1997 (re. ed); Sasidharan, Biodiversity documentation for Kerala- Flowering Plants, part 6: 58. 2004.

Top of the Page