ಪಾಲಿಯಾಲ್ತಿಯ ಶೆಂಡೂರುನಿಯ್ವೆ Basha & Sasidh. - ಅನೋನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20ಮೀ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆಗಳು ಹಾಗೂ ಕಂದು ಮಿಶ್ರಿತ ಕಪ್ಪು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಸೂಕ್ಷ್ಮವಾದ ಮೃದು ತುಪ್ಪಳವನ್ನು ಹೊಂದಿದ್ದು ಕ್ರಮೇಣ ರೋಮರಹಿತವಾಗುತ್ತವೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ. ಎಲೆಪತ್ರ 15 - 26 × 6 - 8.5 ಸೆಂ.ಮೀ. ಗಾತ್ರದಲ್ಲಿರುತ್ತವೆ. ಪತ್ರಗಳು ಧೀರ್ಘ ಚತುರಸ್ರಾಕಾರದ ಅಥವಾ ಅಂಡವೃತ್ತಾಕೃತಿ – ಭರ್ಜಿಯಾಕಾರದಲ್ಲಿದ್ದು 3 ಸೆಂ.ಮೀ. ವರೆಗಿನ ಉದ್ದದ ಅಗ್ರಭಾಗವನ್ನು ಹೊಂದಿದ ಕ್ರಮೇಣ ಚೂಪಾಗುವ ಮಾದರಿಯ ಎಲೆತುದಿ, ಗುಂಡಾದ ಅಥವಾ ಭಿನ್ನಾಗ್ರ ಮಾದರಿಯ ಎಲೆಬುಡ ಹೊಂದಿದ್ದು ರೋಮರಹಿತವಾಗಿರುತ್ತವೆ. ಮಧ್ಯನಾಳಗಳು ಪತ್ರದ ಮೇಲ್ಭಾಗದಲ್ಲಿ ಅಚ್ಚೊತ್ತಿರುತ್ತವೆ ; ಎರಡನೇ ದರ್ಜೆಯ ನಾಳಗಳು 10 ರಿಂದ 14 ಜೋಡಿಗಳಿದ್ದು ಮೂರನೇ ದರ್ಜೆ ಯನಾಳಗಳು ಜಾಲಬಂಧ ನಾಳವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಕುಡಿ ಕೊಂಬೆಗಳಲ್ಲಿನ ಹೂಗಳು ಒಂಟಿಯಾಗಿರುತ್ತವೆ. ಮತ್ತು/ಅಥವಾ 10ರ ಸಂಖ್ಯೆಯವರೆಗೆ ಕಾಂಡದ ಗುಬುಟುಗಳ ಮೇಲೆ ಗುಚ್ಛಾಕಾರದಲ್ಲಿರುತ್ತವೆ ; ಹೂ ತೊಟ್ಟುಗಳು 4 - 5.5 ಸೆಂ.ಮೀ. ಉದ್ದ ಹಾಗೂ 2 ರಿಂದ 3 ಮಿ.ಮೀ. ಅಗಲವಿರುತ್ತವೆ.
ಕಾಯಿ /ಬೀಜ : ಗುಚ್ಛಗಳಲ್ಲಿ ಏಳು ಸಂಖ್ಯೆಯವರೆವಿಗೂ ಬೆರ್ರಿಗಳಿರುತ್ತವೆ. ಬೆರ್ರಿಗಳು ಧೀರ್ಘ ಚತುರಸ್ರಾಕಾರ ಗುಂಡಾಕಾರದ ಆಕಾರ, 3 × 2.5 ಸೆಂ.ಮೀ ಗಾತ್ರದ ಹೊಂದಿದ್ದು ರೋಮರಹಿತವಾಗಿರುತ್ತವೆ. ಎಲೆ ತೊಟ್ಟು ಅಂದಾಜು 1.8ಸೆಂ.ಮೀ. ಉದ್ದವಿರುತ್ತವೆ ; ಬೀಜಗಳು ಧೀರ್ಘ ಚತುರಸ್ರಾಕಾರದವು.

ಜೀವಪರಿಸ್ಥಿತಿ :

ಅಪರೂಪವಾಗಿ ಸಮುದ್ರಮಟ್ಟದಿಂದ 600 ರಿಂದ 1000ಮೀ ಎತ್ತರದವರೆಗಿನ ಪ್ರದೇಶಗಳ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮತಿವಾದ ಈ ಪ್ರಭೇದವನ್ನು ಅಗಸ್ತ್ಯಮಲೆ ಬೆಟ್ಟಗಳ ಪ್ರದೇಶದ ಶೆಂದುರುನಿಯಿಂದ ಮಾತ್ರ ದಾಖಲಿಸಲಾಗಿದೆ. .

ಸ್ಥಿತಿ :

ಪ್ರಭೇಧವು ನಶಿಸಿ ಹೋಗುವ ಭೀತಿಯ ಸ್ಥಿತಿಯಲ್ಲಿದೆ (IUCN, 2000)

ಗ್ರಂಥ ಸೂಚಿ :

Rheedea 4: 21. 1994; Sasidharan, Biodiversity documentation for Kerala- Flowering Plants, part 6: 20. 2004.

Top of the Page