ಪಾಲಿಯಾಲ್ತಿಯ ಕೊರಿಂಟಿ (Dunal) Benth. & J. Hk. ex J. Hk. & Thoms. - ಅನ್ನೋನೇಸಿ

:

Vernacular names : Tamil: ಕರುವಲ್ಲ್;ಕರುವಲ್ಲಿ;ಕುರಿಂಟಿಪನೆಲ್

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೊಮರಹಿತವಾಗಿರುತ್ತವೆ ಹಾಗೂ ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ತೊಟ್ಟು 0.3 – 0.4 ಸೆಂ.ಮೀ.ವರೆಗಿನ ಉದ್ದವಿದ್ದು, ಕಾಲುವೆಗೆರೆ ಸಮೇತವಿದ್ದು, ರೋಮರಹಿತವಾಗಿರುತ್ತದೆ; ಪತ್ರಗಳು 6 -8 X 3–4 ಸೆಂ.ಮೀ. ಗಾತ್ರ, ಅಂಡವೃತ್ತದಿಂದ ಅಂಡ-ಅಂಡವೃತ್ತದ ಆಕಾರ ಹೊಂದಿದ್ದು, ಕ್ರಮೇಣ ಚೂಪಾಗುವ ಮತ್ತು ತಿರುಚಿಕೊಂಡಿರುವ ತುದಿ, ಚೂಪಾದ ಬುಡ, ನಯವಾದ ಅಂಚು ಹೊಂದಿದ್ದು ತಳಬಾಗದಲ್ಲಿ ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 6 ಜೋಡಿಗಳಿದ್ದು ಅಕ್ಷಾಕಂಕುಳಿನಲ್ಲಿ ಸೂಕ್ಷ್ಮ ಸಹಜೀವಿ ಗೂಡುಗಳನ್ನು ಹೊಂದಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸಲ್ಲಿರುತ್ತವೆ ಅಥವಾ ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಒಂಟಿಯಾಗಿದ್ದು ಅಕ್ಷಾಕಂಕುಳಿನಲ್ಲಿರುತ್ತವೆ.
ಕಾಯಿ / ಬೀಜ : ಒಂದು ಬೀಜವುಳ್ಳ, ಅಂಡಾಕಾರದ ಬೆರ್ರಿಗಳು ಗೊಂಚಲುಗಳಲ್ಲಿರುತ್ತವೆ.

ಜೀವಪರಿಸ್ಥಿತಿ :

ಅಂದಾಜು 300 ಮೀ. ಎತ್ತರದ ಪ್ರದೇಶಗಳಲ್ಲಿನ ಒಣ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ದಕ್ಷಿಣ ಭಾರತ ಮತ್ತು ಶ್ರೀಲಂಕಾ;ಪಶ್ಚಿಮ ಘಟ್ಟದ ಅಣ್ಣಾಮಲೈ.

ಗ್ರಂಥ ಸೂಚಿ :

Fl. Brit. Ind. 1.64. 1872; Gamble, Fl. Madras 1: 16. 1997 (re. ed.); Sasidharan, Biodiversity documentation for Kerala- Flowering Plants, part 6: 20. 2004.

Top of the Page