ಪೊಸಿಲೋನ್ಯೂರಾನ್ ಇಂಡಿಕಮ್ Bedd. - ಕ್ಲೂಸಿಯೇಸಿ

ಕನ್ನಡದ ಪ್ರಾದೇಶಿಕ ಹೆಸರು : ಬಳಿಗೆ, ಕಿರ್ಬಳ್ಳಿ, ಬಳಂಜಿ,ಬಲ್ಲಗಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ ಎತ್ತರದವರೆಗೆ ಬೆಳೆಯುವ ಆನಿಕೆಗಳುಳ್ಳ ಮರಗಳು, ಅನೇಕ ಸಂಧರ್ಭಗಳಲ್ಲಿ ದಂಟು ಬೇರು ಸಮೇತವಾಗಿರುತ್ತವೆ.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣ ಹೊಂದಿದ್ದುವಾಯು ವಿನಿಮಯ ಬೆಂಡುರಂಧ್ರಗಳ ಸಮೇತವಾಗಿರುತ್ತವೆ;ಕಚ್ಚು ಮಾಡಿದ ಜಾಗ ಕೆಂಪು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತ -ವಾಗಿರುತ್ತವೆ.
ಜಿನುಗು ದ್ರವ : ಜಿನುಗು ದ್ರವ ಅಂಟು ರೂಪದಲ್ಲಿದ್ದು ವಿರಳವಾ- ಗಿರುತ್ತದೆ..
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಎಲೆತೊಟ್ಟುಗಳು 1 ರಿಂದ 2 ಸೆಂ.ಮೀ, ಉದ್ದಹೊಂದಿದ್ದು, ರೋಮರಹಿತವಾಗಿದ್ದು, ಅಡ್ಡ ಸೀಳಿದಾಗ ಸಪಾಟ ಪೀನಮಧ್ಯ ಆಕಾರವನ್ನು ಹೊಂದಿರುತ್ತವೆ; ಎಲೆಪತ್ರಗಳು 10 ರಿಂದ 29 ಸೆಂ. ಮೀ ಉದ್ದ,3 ರಿಂದ 9 ಸೆಂ ಮೀ ಅಗಲವಿದ್ದು, ಅಂಡಾಕಾರದಿಂದ – ಚತುರಸ್ರಾಕಾರ ದವರೆಗಿನ ಆಕಾರ, ಬಾಲರೂಪಿ – ಕ್ರಮೇಣ ಚೂಪಾಗುವ ಮಾದರಿಯ ತುದಿ,ಚೂಪಾಗಿ ಅಥವಾ ಬಹುಮಟ್ಟಿಗೆ ಒಳಬಾಗಿದ ತಳವುಳ್ಳ ಬುಡವನ್ನು ಹಾಗೂ ಮಂದವಾದ ತೊಗಲನ್ನೋಲುವ ಮಾದರಿಯಲ್ಲಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತವೆ; ಎರಡನೇ ದರ್ಜೆಯ ನಾಳಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು,ತೆಳುವಾಗಿರುತ್ತವೆ ಕೆಲವು ವೇಳೆ ಮೂರನೇ ದರ್ಜೆಯ ನಾಳಗಳ ಜಾಲಬಂಧ ನಾಳಗಳ ಜೊತೆ ಬೆರೆಯುವುದರಿಂದ ಅಸ್ಪಷ್ಟವಾಗಿರುತ್ತವೆ ಹಾಗೂ ಮಧ್ಯ ನಾಳಕ್ಕೆ ಹೆಚ್ಚೂ ಕಡಿಮೆ ಲಂಬವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಸೂಕ್ಷ್ಮ ಜಾಲಬಂಧನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ತುದಿಯಲ್ಲಿನ ಕವಲೊಡೆಯುವ ಮಾದರಿಯ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು ಗೋಳಾಕಾರ, 4 ಸೆಂ.ಮೀ ವ್ಯಾಸ ಹೊಂದಿದ್ದು, ಉಬ್ಬು ತಗ್ಗು ಸಮೇತವಿದ್ದು, ಅಗ್ರದಲ್ಲಿ ಕೊಕ್ಕನ್ನು ಹೊಂದಿದ್ದು ಒಂದು ಬೀಜವನ್ನೊಳ ಗೊಂಡಿರುತ್ತವೆ.

ಜೀವಪರಿಸ್ಥಿತಿ :

ಸ್ಥಳೀಯವಾಗಿ ಹಾಗೂ ಸಾಮಾನ್ಯವಾಗಿ ಮೇಲ್ಛಾವಣಿ ಮರಗಳಾಗಿ ಕಡಿಮೆ ಮತ್ತು ಮಧ್ಯಮ ಎತ್ತರದ,1400 ಮೀ ಎತ್ತರದವರೆಗಿನ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳನಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಸಸ್ಯ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯ ಪ್ರದೇಶಗಳಲ್ಲಿ ಅಲ್ಲಲ್ಲಿಯೂ ಹಾಗೂ ವಿಶಿಷ್ಟವಾಗಿ ಚಿಕ್ಕಮಗಳೂರಿನ ಕುದುರೆಮುಖದಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

J.Linn. Soc. 8:267.17.1865;Gamble, Fl.Madras1:77.1997; (re.ed.);Sasidharan, Biodiversity documentation for Kerala-Flowering Plants, part 6:43.2004; Saldanha, Fl. Karnataka 1:210.1996;

Top of the Page