ಪವೆಟ್ಟ ಇಂಡಿಕ L. - ರೂಬಿಯೇಸಿ

:

Vernacular names : Tamil: ಕಮಟ್ಟ,ನೊಚ್ಚಿ,ಪವೆಟ್ಟMalayalam: ಪಾವಟೆ,ಪಾವಟ್ಲೆ ಮರ,ನಿಡಲೆ ಮರ,ಚಿಟಮಿಟ್ಲ ಮರ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ 4 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ನಯವಾಗಿದ್ದು ಬಲಿತಾಗ ಅನಿಯತವಾದ ಚಕ್ಕೆ ರೂಪದಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಹಳದಿ ಮಿಶ್ರಿತ ಕೆನೆ ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಕೋನಯುಕ್ತವಾಗಿದ್ದು,ಬಲಿತಾಗ ದುಂಡಾಗಿರುತ್ತವೆ, ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ವಿಶಾಲವಾದ ಭರ್ಜಿಯ ಆಕಾರದಲ್ಲಿದ್ದು ತೊಟ್ಟುಗಳ ನಡುವೆ ಇರುತ್ತವೆ,ಒರೆ ಸಮೇತವಿದ್ದು ಉದುರಿದಾಗ ಗುರುತನ್ನು ಉಳಿಸುತ್ತವೆ;ತೊಟ್ಟು 0.6 – 1.5 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿದ್ದು, ರೋಮರಹಿತವಾಗಿರುತ್ತವೆ;ಪತ್ರಗಳು 8.5 -16.5 X 2.6 - 5 ಸೆಂ.ಮೀ. ಗಾತ್ರ ಹೊಂದಿದ್ದು, ಆಕಾರದಲ್ಲಿ ವೈವಿಧ್ಯತೆ ಹೊಂದಿದ್ದು ಅಂಡವೃತ್ತ ಅಥವಾ ಬುಗುರಿ ಅಥವಾ ಬುಗುರಿಭರ್ಜಿಯ ಆಕಾರ ಹೊಂದಿದ್ದು, ಬಾಲರೂಪಿ-ಕ್ರಮೇಣ ಚೂಪಾಗುವ ತುದಿ, ಒಳಬಾಗಿದ ಬುಡ, ನಯವಾದ ಅಂಚು ಹೊಂದಿರುತ್ತವೆ,ಎರಡನೇ ದರ್ಜೆಯ ನಾಳಗಳ ನಡುವೆ ಪ್ರಮುಖವಾದ ರಸಗ್ರಂಥಿಗಳಿರುತ್ತವೆ,ಪತ್ರದ ತಳಭಾಗ ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು 6 ರಿಂದ 12 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ನೀಳಛತ್ರ ಮಧ್ಯಾರಂಭಿ ಮಾದರಿಯವು;ಹೂಗಳು ಬಿಳಿ ಬಣ್ಣದಲ್ಲಿರುತ್ತವೆ;ತೊಟ್ಟು 0.7 ಸೆಂ.ಮೀ. ಉದ್ದವಿರುತ್ತವೆ.
ಕಾಯಿ / ಬೀಜ : ಫಲಗಳು ಬೆರ್ರಿ ಮಾದರಿಯವುಗಳಾಗಿದ್ದು 2 ಪೈರೀನುಗಳ ಸಮೇತವಿರುತ್ತವೆ;ಪ್ರತಿ ಪೈರೀನಿನಲ್ಲಿ ಒಂದು ಬೀಜವಿರುತ್ತದೆ..

ಜೀವಪರಿಸ್ಥಿತಿ :

900 ಮೀ. ಎತ್ತರದ ಪ್ರದೇಶಗಳ ಭಗ್ನಗೊಂಡ ನಿತ್ಯ ಹರಿದ್ವರ್ಣ ಕಾಡುಗಳ ಒಳಾವರಣದಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಭಾರತ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Sp. Pl. 110. 1753; Gamble, Fl. Madras 2: 633. 1993 (re. ed); Sasidharan, Biodiversity documentation for Kerala- Flowering Plants, part 6: 229. 2004; Cooke, Fl. Bombay 1: 612.1903; Almeida, Fl. Maharashtra 3:51. 2001.

Top of the Page