English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 35 ಮೀ ಎತ್ತರದವರೆಗಿನ ಆನಿಕೆಯುಳ್ಳ ಮರಗಳು. |
| ಕಾಂಡ ಮತ್ತು ತೊಗಟೆ : | ತೊಗಟೆ ನಯವಾಗಿದ್ದು,ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ,ಬಲಿತಾಗ ಅನಿಯತವಾಗಿ ಚಕ್ಕೆಯೇಳುವ ಮಾದರಿಯಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು ಮಿಶ್ರಿತ ಕಂದು. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು “ಆಬ್ರೆವಿಲ್ಲೆ” ಮಾದರಿಯಲ್ಲಿರುತ್ತದೆ;ಎಳೆಯ ಕಿರುಕೊಂಬೆಗಳು ದುಂಡಾಗಿದ್ದು,ಎಳೆಯದಾಗಿದ್ದಾಗ ಸೂಕ್ಷ್ಮ ಮೃದು ತುಪ್ಪಳದಿಂದ ಕೂಡಿದ್ದು ನಂತರ ರೋಮರಹಿತವಾಗುತ್ತವೆ. |
| ಜಿನುಗು ದ್ರವ : | ಸಸ್ಯ ಕ್ಷೀರ ಹಾಲಿನ ಬಿಳಿ ಬಣ್ಣ ಹೊಂದಿದ್ದು ವಿಫುಲವಾಗಿರುತ್ತದೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಸಣ್ಣ ಗಾತ್ರದವುಗಳಾಗಿದ್ದು,ಉದುರಿ ಹೋಗುತ್ತವೆ ಮತ್ತು ಗುರುತುಗಳನ್ನು ಉಳಿಸುತ್ತವೆ;ತೊಟ್ಟುಗಳು 1.5 -3 ಸೆಂ.ಮೀ. ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾದಲ್ಲಿರುತ್ತವೆ, ಎಳೆಯದಾಗಿದ್ದಾಗ ಸೂಕ್ಷ್ಮ ಮೃದುತುಪ್ಪಳದಿಂದ ಕೂಡಿರುತ್ತದೆ; ಪತ್ರಗಳು 7 -15 X 3 –5 ಸೆಂ.ಮೀ. ಗಾತ್ರ,ಅಂಡವೃತ್ತ-ಬುಗುರಿ ಅಥವಾ ಚತುರಸ್ರದ ಆಕಾರ ಹೊಂದಿದ್ದು, ಮೊಂಡಾಗ್ರವುಳ್ಳ ಬಾಲರೂಪಿಯಿಂದ ಕ್ರಮೇಣ ಚೂಪಾಗುವ ಮಾದರಿಯ ತುದಿ,ಬೆಣೆಯಿಂದ ಒಳಬಾಗಿದ ಮಾದರಿವರೆಗಿನ ಬುಡ, ತರಂಗಿತವಾದ ಅಂಚು, ತೊಗಲನ್ನೋಲುವ ಮೇಲ್ಮೈ ರೋಮರಹಿತವಾಗಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 8 - 12 ಜೋಡಿಗಳಿದ್ದು ತೆಳುವಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲ ಬಂಧ ನಾಳ ವಿನ್ಯಾಸದವುಗಳಾಗಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ. |
| ಪುಷ್ಪಮಂಜರಿ / ಹೂಗಳು : | ಹೂಗಳು ಬಿಳಿ ಬಣ್ಣದಲ್ಲಿದ್ದು ಅಕ್ಷಾಕಂಕುಳಿನಲ್ಲಿನ ಗುಚ್ಛಗಳಲ್ಲಿರುತ್ತವೆ ಅಥವಾ 1.5 ಸೆಂ.ಮೀ. ಉದ್ದದವರೆಗಿನ ತೊಟ್ಟುಗಳ ಮೇಲೆ ಜೋಡಿಯಾಗಿರುತ್ತವೆ;ಪುಷ್ಪಪಾತ್ರೆ ನಸುಗೆಂಪಿನ ಹಳದಿ ಬಣ್ಣದ ಅಪ್ಪು ರೋಮಗಳಿಂದ ಕೂಡಿರುತ್ತದೆ. |
| ಕಾಯಿ / ಬೀಜ : | ಬೆರ್ರಿ ಸಂಕುಚಿತ ಅಂಡವೃತ್ತ ಅಥವಾ ಅಂಡವೃತ್ತದ ಆಕಾರದಲ್ಲಿದ್ದು 5X2 ಸೆಂ.ಮೀ. ಉದ್ದವಿರುತ್ತದೆ;ಬೀಜದ ಸಂಖ್ಯೆ 1. |