ಓರೋಫಿಯಾ ಯುನಿಫ್ಲೋರ J. Hk. & Thoms. - ಅನೋನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಪೊದೆಗಳು ಅಥವಾ ಸಣ್ಣ ಮರಗಳಾಗಿ ಈ ಪ್ರಭೇದ 5ಮೀ ಎತ್ತರದವರೆಗೂ ಬೆಳೆಯುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಹಾಗೂ ಮೊಗ್ಗುಗಳು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಜೋಡನಾ ವ್ಯವಸ್ಥೆ ಪರ್ಯಾಯದಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ. ಎಲೆತೊಟ್ಟು 0.3-0.4ಸೆಂ.ಮೀ. ಉದ್ದವಿದ್ದು, ತೆಳು ಹಾಗೂ ರೋಮರಹಿತವಾಗಿರುತ್ತವೆ. ಎಲೆಪತ್ರ 4-8 × 2-3.5ಸೆಂ.ಮೀ ಗಾತ್ರ, ಆಕಾರದಲ್ಲಿ ಅಂಡವೃತ್ತಾಕೃತಿ – ಧೀರ್ಘ ಚತುರಸ್ರಾಕಾರ ಅಥವಾ ಭರ್ಜಿಯನ್ನು ಹೋಲುತ್ತವೆ. ಪತ್ರಗಳ ತುದಿ ಮೊಂಡಾದ ಅಗ್ರವನ್ನುಳ್ಳ ಕ್ರಮೇಣ ಚೂಪಾಗುವ ಮಾದರಿಯಲ್ಲಿ, ಎಲೆಗಳು ಬುಡಭಾಗ ಚೂಪಾಗಿರುವುದರಿಂದ ಗುಂಡಾದವರೆಗಿನ ವಿನ್ಯಾಸ ಹೊಂದಿರುತ್ತವೆ, ಎಲೆಪತ್ರಗಳು ತೆಳುವಾದ ತೊಗಲನ್ನು ಹೋಲುವಂತಿದ್ದು, ರೋಮರಹಿತವಾಗಿರುತ್ತವೆ. ಎರೆಡನೇ ದರ್ಜೆಯ ನಾಳಗಳು ತೆಳುವಾಗಿದ್ದು 6 ರಿಂದ 8 ಜೋಡಿಗಳಿರುತ್ತವೆ. ಮೂರನೇ ದರ್ಜೆಯ ನಾಳಗಳು ಜಾಲಬಂಧನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಹೂಗಳು ಸಾಮಾನ್ಯವಾಗಿ ಒಂಟಿಯಾಗಿದ್ದು ಅಕ್ಷಾಕಂಕುಳಿನಲ್ಲಿರುತ್ತವೆ. ಹೂ ತೊಟ್ಟುಗಳು ತೆಳುವಾಗಿದ್ದು 0.7 ರಿಂದ 2.0 ಸೆಂ.ಮೀ ಉದ್ದದವು ಹಾಗೂ ರೋಮರಹಿತ.
ಕಾಯಿ /ಬೀಜ : ಒಂದರಿಂದ ಎರಡೂ ಬೀಜಗಳುಳ್ಳ ಬೆರ್ರಿಗಳು ಗೋಳಾಕಾರದಲ್ಲಿದ್ದು ಅಗ್ರಸ್ಥಾನದಲ್ಲಿ ಸೂಕ್ಷ್ಮ ಮೊನಚುಮುಳ್ಳನ್ನು ಹೊಂದಿದ್ದು, ರೋಮರಹಿತವಾಗಿದ್ದು ಕಂದು ಮಿಶ್ರತ ಕಪ್ಪು ಬಣ್ಣದ್ದು, ಸಣ್ಣ ತೊಟ್ಟು ಹೊಂದಿರುತ್ತವೆ ಹಾಗೂ ಸಾಮೂಹಿಕವಾಗಿರುತ್ತವೆ.

ಜೀವಪರಿಸ್ಥಿತಿ :

ಮಧ್ಯಮ ಎತ್ತರದ (ಸಮುದ್ರ ಮಟ್ಟದಿಂದ 600 ರಿಂದ 1000ಮೀ ಎತ್ತರದ) ಪ್ರದೇಶಗಳಲ್ಲಿ ನಿತ್ಯ ಹರಿದ್ವರ್ಣ ಕಾಡುಗಳ ಕೆಳಛಾವಣಿಯಲ್ಲಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಈ ಪ್ರಭೇದ ಸೀಮಿತವಾಗಿದ್ದು ದಕ್ಷಿಣ ಸಹ್ಯಾದ್ರಿ ಮತ್ತು ಕೊಡಗಿನ ಪ್ರದೇಶಗಳಲ್ಲಿ ಬೆಳೆಯುತ್ತವೆ. .

ಸ್ಥಿತಿ :

ದುರ್ಬಲ ಸ್ಥಿತಿ (IUCN, 2000)

ಗ್ರಂಥ ಸೂಚಿ :

Hooker and Thomson, Fl. Ind. 111. 1855; Keshava Murthy and Yoganarasimhan, Fl. Coorg (Kodagu) 32. 1990; Gamble, Fl. Madras 1: 24. 1997 (re. ed); Sasidharan, Biodiversity documentation for Kerala- Flowering Plants, part 6: 19. 2004; Saldanha, Fl. Karnataka 1: 47. 1996.

Top of the Page