ಓರೋಫಿಯಾ ಥಾಮ್ಸೋನಿ Bedd. - ಅನೋನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5ಮೀ ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು ಅಥಬಾ ದೊಡ್ಡ ಪೊದೆಗಳು
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯದಾದ ಕಿರುಕೊಂಬೆಗಳು ಮೃದು ತುಪ್ಪಳವನ್ನು ಸಹಿತವಿರುತ್ತವೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ. ಎಲೆಪತ್ರಗಳು 5 - 6.5 × 2.5 - 3.5 ಸೆಂ.ಮೀ. ಗಾತ್ರ, ಆಕಾರ ಅಂಡಕಾರದಿಂದ ಅಂಡವೃತ್ತಾಕಾರದವುಗಳಾಗಿದ್ದು, ಉದ್ದನೆಯ ಕ್ರಮೇಣ ಚೂಪಾಗುವ ತುದಿ, ಬೆಣೆಯಕಾರಾದ ಬುಡವನ್ನು ಹೊಂದಿರುತ್ತವೆ. ಎಲೆಪತ್ರಗಳು ತಳಭಾಗದ ಮಧ್ಯನಾಳವನ್ನು ಹೊರತುಪಡಿಸಿ ರೋಮರಹಿತವಾಗಿರುತ್ತವೆ. ಎರಡನೇ ದರ್ಜೆಯ ನಾಳಗಳು ತೆಳುವಾದ, ಅಂದಾಜು 6 ಜೋಡಿಗಳಿರುತ್ತವೆ. ತೃತೀಯ ದರ್ಜೆಯ ನಾಳಗಳು ಜಾಲಬಂಧ ನಾಳವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಹೂಗಳು ಕೆನೆ ಬಣ್ಣಯುಕ್ತವಾದ ಶ್ವೇತ ವರ್ಣದಲ್ಲಿರುತ್ತವೆ, ಹೂಗಳು ಅಕ್ಷಾಕಂಕುಳಿನಲ್ಲಿದ್ದು ಒಂಟಿಯಾಗಿ ಅಥವಾ 2 ರಿಂದ 3 ಹೂಗಳು ಒಟ್ಟಿಗಿರುತ್ತವೆ ; ಪುಷ್ಪಮಂಜರಿಯ ವೃಂತ ಬಿರುಸಾದ ರೋಮಗಳಿಂದ ಕೂಡಿರುತ್ತವೆ; ಹೂತೊಟ್ಟುಗಳು ತುಂಬಾ ಚಿಕ್ಕದಾಗಿದ್ದು, ಮೃದುತುಪ್ಪಳ ಸಹಿತವಾಗಿರುತ್ತದೆ.
ಕಾಯಿ /ಬೀಜ : ಬೆರ್ರಿಗಳು ಬಟಾಣಿ ಆಕಾರದಲ್ಲಿದ್ದು ಒಂದರಿಂದ ಎರಡು ಬೀಜಗಳನ್ನೊಳಗೊಂಡು ಸಾಮೂಹಿಕವಾಗಿರುತ್ತವೆ.

ಜೀವಪರಿಸ್ಥಿತಿ :

ಸಮುದ್ರ ಮಟ್ಟದಿಂದ ಮಧ್ಯಮ ಎತ್ತರದ ಪ್ರದೇಶಗಳ (600ಮೀ ಇಂದ 1000ಮೀ) ತೇವಾಂಶಯುಕ್ತ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಕಂಡುಬರುತ್ತವೆ.

ವ್ಯಾಪನೆ :

ದಕ್ಷಿಣ ಸಹ್ಯಾದ್ರಿ ಪ್ರದೇಶಗಳಲ್ಲಿ (ಅಗಸ್ತ್ಯಮಲೈ ಮತ್ತು ಅಣ್ಣಾಮಲೈ ಬೆಟ್ಟಗಳು) ಅಪರೂಪವಾಗಿ ಕಂಡುಬರುವ ಈ ಪ್ರಭೇದ ಪಶ್ಚಿಮಘಟ್ಟಗಳಿಗೆ ಸೀಮಿತ.

ಸ್ಥಿತಿ :

ನಶಿಸಿಹೋಗುವ ಭೀತಿಯ ಸ್ಥಿತಿ (IUCN, 2000)

ಗ್ರಂಥ ಸೂಚಿ :

Trans. Linn. Soc. Lond. 20: 5. 1846; Gamble, Fl. Madras 1: 24. 1997 (re. ed); Sasidharan, Biodiversity documentation for Kerala- Flowering Plants, part 6: 19. 2004.

Top of the Page