ಆಕ್ನ ಲ್ಯಾನ್ಸಿಯೋಲೇಟ Spreng. - ಆಕ್ನೇಸಿ

ಪರ್ಯಾಯ ನಾಮ : ಆಕ್ನ ವೈಟಿಯಾನ Wall. ex Wt. & Arn.; ಆ ಹೇನಿಯಾನ Wt. & Arn.

Vernacular names : Tamil: ಸಿಲಿಂಬಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆಗೆ ಬೆಳೆಯುವ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದ ಛಾಯೆಯನ್ನು ಹೊಂದಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು ಬಣ್ಣದ ಛಾಯೆ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು, ಸೂಕ್ಷ್ಮ ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮಾದರಿಯಲ್ಲಿ ಜೋಡನೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ಕಾವಿನೆಲೆಗಳು ಉದುರಿಹೋಗಿ ಗುರುತುಗಳನ್ನು ಉಳಿಸುವಂತಹವು; ತೊಟ್ಟುಗಳು0.2-0.6 ಸೆಂ.ಮೀ.ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ; ; ಪತ್ರಗಳು 4.8-8 ´ 1.2-1.8 ಸೆಂ.ಮೀ. ಗಾತ್ರ ಹೊಂದಿದ್ದು ಸಂಕುಚಿತ ಅಂಡವೃತ್ತದಿಂದ ಅಂಡವೃತ್ತ- ಭರ್ಜಿಯವರೆಗಿನ ಆಕಾರ, ಬರ ಬರುತ್ತಾ ಚೂಪಾಗುವ ತುದಿ,ಚೂಪಾದ ಬುಡ,ಗರಗಸ ದಂತಿತ ಅಂಚು,ಹೊಳಪುಳ್ಳ ಮೇಲ್ಭಾಗ ಹೊಂದಿದ್ದು ಉಪ-ತೊಗಲನ್ನೋಲುವ ಮೇಲ್ಮೈ ಸಮೇತವಿದ್ದು,ತಳಭಾಗದಲ್ಲಿ ರಹಿತರೋಮ --ರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 12 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ತೆಳುವಾಗಿದ್ದು, ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಒಂಟಿಯಾಗಿ ಅಥವಾ ಅಕ್ಷಾಕಂಕುಳಿನಲ್ಲಿ ಅಥವಾ ಪಾರ್ಶ್ವದಲ್ಲಿರುವ 2 ರಿಂದ 3 ಹೂಗಳುಳ್ಳ ಮಧ್ಯಾಭಿಸರ ಮಾದರಿಯಲ್ಲಿರುತ್ತವೆ;ತೊಟ್ಟುಗಳು 2.5 ಸೆಂ.ಮೀ ವರೆಗಿನ ಉದ್ದ ಹೊಂದಿರುತ್ತವೆ.
ಕಾಯಿ / ಬೀಜ : 5 ರಿಂದ 7 ಸ್ಪಷ್ಟವಾಗಿ ಕಾಣುವ ಡ್ರೂಪ್ಗಳು ವಿಕಸಿತಗೊಂಡ ಪೀಠದ ಮೇಲಿರುತ್ತವೆ; ಪ್ರತಿ ಡ್ರೂಪ್ ನಲ್ಲಿ ಒಂದು ಬೀಜವಿರುತ್ತದೆ.

ವ್ಯಾಪನೆ :

ಭಾರತದ ದಕ್ಷಿಣ ಪರ್ಯಾಯ ದ್ವೀಪ ಮತ್ತು ಶ್ರೀಲಂಕಾ;ಪಶ್ಚಿಮ ಘಟ್ಟ-

ಗ್ರಂಥ ಸೂಚಿ :

Syst. Veg. 2: 597. 1825; Gamble, Fl. Madras 1: 166.1997 (re.ed); Sasidharan, Biodiversity documentation for Kerala- Flowering Plants, part 6: 85. 2004; Saldanha, Fl. Karnataka 1: 187. 1996.

Top of the Page