ನೋತಪೊಡೈಟೆಸ್ ನಿಮ್ಮೋನಿಯಾನ (Graham) Mabb. - ಐಕಾಸಿನೇಸಿ

Synonym : ಪ್ರೆಮ್ನ ನಿಮ್ಮೋನಿಯಾನ Graham ಮತ್ತು ಮ್ಯಾಪ್ಪಿಯ ಫೀಟಿಡ (Wt.) Miers.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ;ಕಚ್ಚು ಮಾಡಿದ ಜಾಗ ತೆಳು ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪ-ದುಂಡಾಗಿದ್ದು ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ ಮತ್ತು ಸೂಕ್ಷ್ಮ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿರುತ್ತವೆ ಮತ್ತು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ತೊಟ್ಟುಗಳು 1.2 - 6 ಸೆಂ.ಮೀ. ವರೆಗಿನ ಉದ್ದವಿದ್ದು ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ ಹಾಗೂ ಸೂಕ್ಷ್ಮ ಮೃದು ತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು 9-30X5-14ಸೆಂ.ಮೀ.ಗಾತ್ರ ಹೊಂದಿದ್ದು ವಿಶಾಲ ಅಂಡಾಕಾರ-ಚತುರಸ್ರದಿಂದ ಅಂಡವೃತ್ತ- ಚತುರಸ್ರದವರೆಗಿನಆಕಾರದಲ್ಲಿರುತ್ತವೆ,ಕೆಲವು ವೇಳೆ ಬುಗುರಿಯ ಆಕಾರದಲ್ಲಿರುತ್ತವೆ. ತುದಿ ಕ್ರಮೇಣ ಚೂಪಾಗುವ ರೀತಿಯಲ್ಲಿದ್ದು, ಚೂಪಾದುದರಿಂದ ದುಂಡಾದ ತಳಬಾಗಿದ ಅಥವಾ ಅಸಮವಾದ ಬುಡ ಮತ್ತು ನಯವಾದ ಅಂಚನ್ನು ಹೊಂದಿರುತ್ತವೆ; ಮೇಲ್ಮೈ ಕಾಗದವನ್ನೋಲುವುದರಿಂದ (ಕಡಿಮೆ ಎತ್ತರದ ಪ್ರದೇಶಗಳಲ್ಲಿ) ದೃಢವಾದ ನಾಳಗಳನ್ನುಳ್ಳ ತೊಗಲನ್ನೋಲುವ (ಎತ್ತರದ ಪ್ರದೇಶಗಳಲ್ಲಿ)ಮಾದರಿಯಲ್ಲಿರುತ್ತದೆ;ಪತ್ರಗಳು ಮೇಲ್ಭಾಗದಲ್ಲಿ ಕಡು ಹಸಿರು ಬಣ್ಣ ಹೊಂದಿರುತ್ತವೆ ಮತ್ತು ತಳ ಭಾಗದಲ್ಲಿ ತೆಳು ಹಸಿರು ಬಣ್ಣ ಹೊಂದಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ;ಮಧ್ಯನಾಳ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು 6 - 11 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಹೆಚ್ಚಿನ ಅಂತರ ಹೊಂದಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಹಳದಿ ಬಣ್ಣ ಹೊದಿರುತ್ತವೆ ಮತ್ತು ತುದಿಯಲ್ಲಿನ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ ಹಾಗೂ ಅಹಿತಕರವಾದ ವಾಸನೆಯನ್ನು ಹೊಂದಿರುತ್ತವೆ.
ಕಾಯಿ /ಬೀಜ : ಡ್ರೂಪ್ಗಳು ಕೆನ್ನೀಲಿ ಮಿಶ್ರಿತ ಕೆಂಪು ಬಣ್ಣದಲ್ಲಿದ್ದು ನಯವಾಗಿರುತ್ತವೆ ಮತ್ತು ಚತುರಸ್ರಾಕಾರದಲ್ಲಿದ್ದು 1.5 ರಿಂದ 1.8 ಸೆಂ. ಮೀ. ಉದ್ದ ಹೊಂದಿರುತ್ತವೆ;ಬೀಜ 1.

ಜೀವಪರಿಸ್ಥಿತಿ :

2300 ಮೀ. ಎತ್ತರದವರೆಗಿನ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ತೆರೆದ ಭಾಗಗಳಲ್ಲಿಕಾಡುಗಳ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯ ಮತ್ತು ಇಂಡೋಚೈನ;ಪಶ್ಚಿಮ ಘಟ್ಟದ ದಕ್ಷಿಣ , ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರದ ಸಹ್ಯಾದ್ರಿಯಲ್ಲಿ ಪ್ರಭೇದ ಕಂಡು ಬರುತ್ತದೆ.

ಗ್ರಂಥ ಸೂಚಿ :

Manilal, Bot. Hist.Hort. Malab. 88.1980;Gamble, Fl. Madras 1:196.1997 (Rep. Ed.);Sasidharan, Biodiversity documentation for Kerala- Flowering Plants, part 6 ,93. 2004;Saldanha, Fl. Karnataka 2:105. 1996.

Top of the Page