ನಿಯೋಲಿಟ್ಸಿಯ ಸ್ಕ್ರೊಬಿಕ್ಯುಲೇಟ (Meisner) Gamble - ಲಾರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 16 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ತೆಳು ಕಂದು ಬಣ್ಣದಲ್ಲಿದ್ದು ವಾಯುವಿನಿಮಯ ಬೆಂಡು ರಂಧ್ರ ಸಮೇತ -ವಾಗಿರುತ್ತವೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿದ್ದು ಕಿತ್ತಳೆ ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿ ಇರುತ್ತವೆ;ತೊಟ್ಟುಗಳು 3(6) ಸೆಂ.ಮೀ. ಉದ್ದ ಹೊಂದಿದ್ದು ಅಡ್ಡಸೀಳಿದಾಗ ಸಪಾಟ ಪೀನ ಮಧ್ಯದ ಕಾರದಲ್ಲಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ; ಪತ್ರಗಳು 7.5-13 X 3.5 – 5.5 ಸೆಂ.ಮೀ.ವರೆಗಿನ ಗಾತ್ರ ಹೊಂದಿದ್ದು ಅಂಡವೃತ್ತ-ಅಂಡ ಅಥವಾ ವಿಶಾಲ ಅಂಡವೃತ್ತದ ಆಕಾರ ಹೊಂದಿರುತ್ತವೆ; ತುದಿ ಚೂಪು-ಕ್ರಮೇಣ ಚೂಪು ಮಾದರಿಯಲ್ಲಿದ್ದು ಬುಡ ಚೂಪು – ಒಳಬಾಗಿದ ರೀತಿಯಲ್ಲಿರುತ್ತದೆ;ಪತ್ರಗಳು ರೋಮರಹಿತವಾಗಿದ್ದು ತಳಭಾಗ ಮಾಸಿದ ಬೂದು ಹಸಿರು ಬಣ್ಣ ಹೊಂದಿರುತ್ತದೆ, ಪತ್ರದ ಮೇಲ್ಭಾಗ ಕುಳಿಗಳನ್ನು ಹೊಂದಿರುತ್ತದೆ; ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿರುತ್ತದೆ;ಪತ್ರದ ಬುಡದ ಸ್ವಲ್ಪ ಮೇಲೆ 3 ನಾಳಗಳು ಇದ್ದು ಅಂದಾಜು 3 ಎರಡನೇ ದರ್ಜೆಯ ನಾಳಗಳ ಸಮೇತವಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಂತರ ಹೊಂದಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ;ಉನ್ನತ ದರ್ಜೆಯ ನಾಳಗಳು ಪತ್ರಗಳು ತೀರಾ ಸನಿಹವಾಗಿದ್ದು ಜಾಲಬಂಧ ನಾಳ ವಿನ್ಯಾಸ ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಪೀಠಛತ್ರ ಮಾದರಿಯಲ್ಲಿದ್ದು ಅಕ್ಷಾಕಂಕುಳಿನಲ್ಲಿರುವ ಅಥವಾ ಪಾರ್ಶ್ವದಲ್ಲಿನ ಗುಚ್ಛಗಳಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿ ಗೋಳಾಕಾರದಲ್ಲಿದ್ದು 1 ಸೆಂ.ಮೀ. ವರೆಗಿನ ಉದ್ದ ಹೊಂದಿರುತ್ತದೆ; ಪುಷ್ಪಾವರಣ ಬಟ್ಟಲಿನ ರೀತಿ ಇರುತ್ತದೆ;ಬೀಜ 1.

ಜೀವಪರಿಸ್ಥಿತಿ :

1000 ರಿಂದ 2400 ಮೀ. ನಡುವಿನ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಆಗಾಗ್ಗೆ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಸಹ್ಯಾದ್ರಿ ಮತ್ತು ನೀಲಗಿರಿಯಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Gamble,Fl. Madras 2:1240.1993(rep.ed.); Sasidharan, Biodiversity documentation for Kerala Flowering Plants, part 6: 400. 2004;Saldanha, Fl. Karnataka 1:70.1996

Top of the Page