ಮಿರಿಸ್ಟಿಕ ಮಲಬಾರಿಕ Lamark. - ಮಿರಿಸ್ಟಿಕೇಸಿ

:

Vernacular names : Tamil: ಕಾಟ್ಟುಜಾತಿ;ಕಟ್ಟುಜತಿಕ್ಕ;ಕೊಟ್ಟಪಣ್ಣು;ಪನಂಪಲ್ಕ;ಪಾತಿರಿಪೂವು;ಪೊನ್ನಂಪಣ್ಣು;ಪೊನ್ನಂಪಯಿನ್;ಪೊನ್ನಂಪುMalayalam: ಕಾಣಗೆ;ದೊಡ್ಡಜಾಜಿಕಾಯಿ.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಅಂದಾಜು 25 ಮೀ. ವರೆಗಿನ ಎತ್ತರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಹಸಿರು ಮಿಶ್ರಿತ ಕಪ್ಪು ಬಣ್ಣ ಹೊಂದಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು ಛಾಯೆ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ಮುಖ್ಯ ಕಾಂಡದ ಲಂಬ ರೇಖೆಗೆ ಸಮಸಕೋನದಲ್ಲಿರುತ್ತವೆ;ಕಿರುಕೊಂಬೆಗಳುಉಪ- ದುಂಡಾಗಿದ್ದು ರೊಮರಹಿತವಾಗಿರುತ್ತವೆ.
ಜಿನುಗು ದ್ರವ : ತೊಗಟೆಯನ್ನು ಕೆತ್ತಿದಾಗ ಕೆಂಪು ಬಣ್ಣದ ವಿಫುಲವಾದ ಸಸ್ಯ ರಸವಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ ; ತೊಟ್ಟುಗಳು 1.0 ರಿಂದ 1.5 ಸೆಂ.ಮೀ. ಉದ್ದ ಹೊಂದಿದ್ದು ಕಾಲುವೆಗೆರೆ ಸಮೇತವಿದ್ದು ರೋಮರಹಿತವಾಗಿರುತ್ತವೆ;ಪತ್ರಗಳು 9.5 - 22 X 3.7 - 10 ಸೆಂ.ಮೀ.ವರೆಗಿನ ಗಾತ್ರವಿದ್ದು ಅಂಡವೃತ್ತ ಅಥವಾ ಅಂಡವೃತ್ತ- ಚತುರಸ್ರದ ಆಕಾರ ಹೊಂದಿದ್ದು, ಚೂಪಾದ ಅಥವಾ ಉಪ- ಚೂಪಾದ ತುದಿ,ಚೂಪಾದ ಅಥವಾ ಒಳಬಾಗಿದ ಬುಡ ,ನಯವಾದ ಅಂಚು, ದಪ್ಪನೆಯ ತೊಗಲನ್ನೋಲುವ ಮಾದರಿಯ ಮೇಲ್ಮೈ ಹೊಂದಿರುತ್ತವೆ,ಪತ್ರಗಳು ಮೇಲ್ಭಾಗದಲ್ಲಿ ಹೊಳಪಿನಿಂದ ಕೂಡಿದ್ದು ತಳಭಾಗ ಮಾಸಲು ಬೂದು ಹಸಿರು ಬಣ್ಣದಲ್ಲಿರುತ್ತವೆ;ಮಧ್ಯ ನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 8 - 14 ಜೋಡಿಗಳಿದ್ದು ತೆಳುವಾಗಿರುತ್ತವೆ ಮತ್ತು ಸ್ವಲ್ಪ ಮಟ್ಟಿಗೆ ಪತ್ರಗಳ ಮೇಲ್ಭಾಗದಲ್ಲಿ ಮುದ್ರೆಯೊತ್ತಿದಂತಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ ಅಥವಾ ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಏಕ ಲಿಂಗಿಗಳಾಗಿದ್ದು ಹೂಜಿಯಾಕಾರದಲ್ಲಿದ್ದು ಬಿಳಿ ಬಣ್ಣ ಹೊಒಂದಿರುತ್ತವೆ;ಗಂಡು ಹೂಗಳು ಹೆಣ್ಣು ಹೂಗಳಿಗಿಂತ ಸಣ್ಣದಾಗಿರುತ್ತವೆ ಮತ್ತು ಮಧ್ಯಾರಂಭಿ ಪುಷ್ಪ ಮಂಜರಿಯಲ್ಲಿರುತ್ತವೆ;ಹೆಣ್ಣು ಹೂಗಳು 5 ಅಥವಾ 6 ಹೂಗಳನ್ನೊಳಗೊಂಡ ಪೀಠಛತ್ರ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ / ಬೀಜ : ಸಂಪುಟ ಫಲ 5-7.5 X 1.8-3.5 ಸೆಂ.ಮೀ. ಗಾತ್ರವಿದ್ದು ಚತುರಸ್ರದ ಆಕೃತಿಯಲ್ಲಿದ್ದು ಮೃದುಗೂದಲುಗಳಿಂದ ಕೂಡಿರುತ್ತವೆ; ಬೀಜಗಳು ಒಂದಿದ್ದು ಚತುರಸ್ರದ ಆಕಾರ ಹೊಂದಿದ್ದು ಹಳದಿ ಬಣ್ಣದ ಆಳವಾದ ಸೀಳಿಕೆಗಳನ್ನುಳ್ಳ ಪತ್ರೆಯಿಂದ ಆವೃತವಾಗಿರುತ್ತವೆ.

ಜೀವಪರಿಸ್ಥಿತಿ :

800 ಮೀ.ವರೆಗಿನ ಎತ್ತರದ ನಿತ್ಯ ಹರಿದ್ವರ್ಣ ಕಾಡುಗಳ ಉಪ-ಛಾವಣಿಯಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಸ್ಥಿತಿ :

ದುರ್ಬಲ ಸ್ಥಿತಿ (IUCN 2000).

ಗ್ರಂಥ ಸೂಚಿ :

Acad. Roy. Sci. Mem. Phys.(Paris) 162. 1791;;Gamble, Fl. Madras 3:1213.1998 (rep.ed.); Sasidharan, Biodiversity documentation for Kerala- Flowering Plants, part 6:394.2004;Saldanha, Fl. Karnataka 1: 54.1984.

Top of the Page