ಮಿಲಿಯೂಸವೈಟಿಯಾನ J.Hk. & Thoms. - ಅನೋನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8ಮೀ ಎತ್ತರದವರೆವೊಗೆ ಬೆಳೆಯುವ ಸಣ್ಣ ಮರಗಳು
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿದ್ದು ಮೃದು ತುಪ್ಪಳ ಸಹಿತವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಮಾದರಿಯಲ್ಲಿ ಜೋಡಣೆಯಾಗಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಎಲೆ ತೊಟ್ಟು 0.25 ಉದ್ದವಿದ್ದು ಮೃದು ತುಪ್ಪಳ ಸಹಿತವಾಗಿರುತ್ತದೆ. ಎಲೆ ಪತ್ರಗಳು 4-10 × 1.5-2.5ಸೆಂ.ಮೀ. ಗಾತ್ರವನ್ನು ಹೊಂದಿರುತ್ತವೆ; ಪತ್ರಗಳು ಇಕ್ಕಟ್ಟಾದ ಧೀರ್ಘ ಚತುರಸ್ರಾಕಾರ – ಅಂಡವೃತ್ತಾಕೃತಿಯ ಆಕಾರ ಹೊಂದಿದ್ದು ಕ್ರಮೇಣ ಚೂಪಾಗುವ ತುದಿ, ಗುಂಡಾದ - ಚೂಪಾದಬುಡ, ನಯವಾದ ಅಂಚು, ಕಾಗದವನ್ನು ಹೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ. ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ರೋಮಸಹಿತವಾಗಿರುತ್ತವೆ. ಎರಡನೇ ದರ್ಜೆಯ ನಾಳಗಳು, ನಾಜೂಕಾಗಿದ್ದು 5 ರಿಂದ 7 ಜೋಡಿಗಳಿರುತ್ತವೆ; ತೃತೀಯ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಹೂಗಳು ನಸುಗೆಂಪು ಬಣ್ಣದ್ದಾಗಿದ್ದು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ. ಹೂ ತೊಟ್ಟುಗಳು 1 ರಿಂದ 2.5ಸೆಂ.ಮೀ. ಉದ್ದವಿದ್ದು ರೋಮರಹಿತವಾಗಿರುತ್ತದೆ. .
ಕಾಯಿ /ಬೀಜ : ಒಂದರಿಂದ ಎರಡು ಬೀಜವುಳ್ಳ ಬೆರ್ರಿಗಳು ಸಾಮೂಹಿಕವಾಗಿರುತ್ತವೆ. ಬೆರ್ರಿಗಳು 1.2ಸೆಂ.ಮೀ. ಉದ್ದವಿದ್ದು ಉದ್ದವಾದ ತೊಟ್ಟನ್ನು ಹೊಂದಿದ್ದು ಧೀರ್ಘ ಚತುರಸ್ರಾಕಾರ ಅಥವಾ ಗೋಳಾಕಾರ ಹೊಂದಿರುತ್ತವೆ.

ಜೀವಪರಿಸ್ಥಿತಿ :

ಸಮುದ್ರಮಟ್ಟಕ್ಕಿಂತ 700ರಿಂದ 1500ಮೀ ಎತ್ತರದವರೆಗಿನ ತೇವಾಂಶಯುಕ್ತ ನಿತ್ಯ ಹರಿದ್ವರ್ಣ ಕಾಡುಗಳ ಒಳ ಛಾವಣಿಯಲ್ಲಿ ಈ ಸಸ್ಯ ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮಘಟ್ಟಗಳಿಗೆ ಸೀಮತವಾದ ಈ ಪ್ರಭೇದ ಅಗಸ್ತ್ಯಮಲೈ ಬೆಟ್ಟಗಳ ಪೂರ್ವ ಇಳಿಜಾರು ಪ್ರದೇಶಗಳಲ್ಲಿ ವರುಶುನಾಡು ಬೆಟ್ಟಗಳು ನೀಲಗಿರಿ ಕೊಡಗಿನ ಪ್ರದೇಶ ಹಾಗೂ ದಕ್ಷಿಣ ಮಲೆನಾಡುನಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Hooker and Thomson, Fl. Ind. 149.1855; Gamble, Fl. Madras 1: 21.1997 (re.ed); Sasidharan, Biodiversity documentation for Kerala- Flowering Plants, part 6: 18. 2004.

Top of the Page